Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಎಚ್ಎಸ್ಆರ್ ಲೇಔಟ್ ನಲ್ಲಿ ವೀಹನ್ ಫುಡ್ಸ್ ಅಂಡ್ ಬೆವರೇಜಸ್ ಎಂಜಿಪಿ ಬಿ ವಿಜಯ್ ಕುಮಾರ್ ನಿಂದ ವಂಚ ದೂರು ದಾಖಲು
  • Bangalore
  • Crime
  • State

ಎಚ್ಎಸ್ಆರ್ ಲೇಔಟ್ ನಲ್ಲಿ ವೀಹನ್ ಫುಡ್ಸ್ ಅಂಡ್ ಬೆವರೇಜಸ್ ಎಂಜಿಪಿ ಬಿ ವಿಜಯ್ ಕುಮಾರ್ ನಿಂದ ವಂಚ ದೂರು ದಾಖಲು

Praja Vahini February 4, 2026 1 minute read
WhatsApp Image 2026-02-04 at 14.12.55
Spread the love

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ವಂಚನೆಯ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಇದೀಗ ಎಚ್ಎಸ್ಆರ್ ಬಡಾವಣೆಯಲ್ಲಿ ವೀಹನ್ ಫುಡ್ಸ್ ಅಂಡ್ ಬೆವರೇಜಸ್ ಎಂಜಿಪಿ ಪ್ರವೇಟ್ ಕಂಪನಿಯ ಮಾಲೀಕ ಬುರ್ಲೆ ವಿಜಯ್ ಕುಮಾರ್ ಸಾರ್ವಜನಿಕರಿಗೆ ಲಕ್ಷಾನುಗಟ್ಟಲೆ ಪಂಗನಾಮ ಹಾಕಿ ತಲೆಮರೆಸಿಕೊಂಡಿರುವ ಘಟನೆಯ ಬಳಕೆಗೆ ಬಂದಿದೆ.

ಬೆಂಗಳೂರಿನಲ್ಲಿರುವ ಎಚ್ಎಸ್ಆರ್ ಲೇಔಟ್ ನಲ್ಲಿ ಸೇರಿದಂತೆ ಕರ್ನಾಟಕ ರಾಜ್ಯದಲ್ಲಿ ಬೆಳಗಾವಿ, ಬಾಗಲಕೋಟೆ, ದಾವಣಗೆರೆ ಸೇರಿದಂತೆ ಇನ್ನೂ ವಿವಿಧ ರಾಜ್ಯಗಳಾದ ಆಂಧ್ರ ಪ್ರದೇಶ್, ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಬುರ್ಲೆ ವಿಜಯ್ ಕುಮಾರ್ ಅವರು ಸಾರ್ವಜನಿಕರ ಹತ್ತಿರ ಹಣ ವಸೂಲಿ ಮಾಡಿ ಈಗ ತಲೆಮರಿಸಿಕೊಂಡಿದ್ದಾರೆ ಎಂಬುವುದರ ಕುರಿತಾಗಿ ಎಚ್ಎಸ್ಆರ್ ಬಡಾವಣೆಯಲ್ಲಿರುವ ಪೊಲೀಸ್ ಠಾಣೆಗೆ ಸಾರ್ವಜನಿಕರು ದೂರು ನೀಡಿದ್ದಾರೆ.

ಪ್ರಮುಖವಾಗಿ ಸಾರ್ವಜನಿಕರಲ್ಲಿ ಬುರ್ಲೆ ವಿಜಯ್ ಕುಮಾರ್ ಅವರು ಗ್ರಾಮೀಣ ಹೋಂ ಫುಡ್ಸ್ ಫ್ರಾನ್ಸಿಸ್ ನೀಡುವುದಾಗಿ ಮೊದಲಿಗೆ 3.50 ಲಕ್ಷ ಪಡೆದುಕೊಂಡು ಸ್ವಲ್ಪ ಪ್ರಾಡಕ್ಟ್ ಗಳನ್ನು ನೀಡಿ ಮತ್ತೆ ಒಂದು ತಿಂಗಳ ನಂತರ 10 ಲಕ್ಷ ವಸೂಲಿ ಮಾಡಿ ವಂಚನೆ ಮಾಡಿದ್ದಾರೆ ಎಂದು ವಂಚನೆಗೆ ಒಳಗಾದ ನಾಗಾರ್ಜುನ ಎನ್ನುವವರು ಹೇಳಿಕೆ ನೀಡಿದ್ದಾರೆ.

ಕಳೆದ ಅಕ್ಟೋಬರ್ ತಿಂಗಳಲ್ಲಿ (2025) ನಾವು ಮೊದಲಿಗೆ ಮೂರುವರೆ ಲಕ್ಷ ಹಣ ನೀಡಿದ್ದೆವು ಅದಕ್ಕೆ ಸ್ವಲ್ಪ ಪ್ರಾಡಕ್ಟ್ ಗಳನ್ನು ನೀಡಿದರು. ಮತ್ತೆ ಒಂದು ತಿಂಗಳ ನಂತರ 10 ಲಕ್ಷ ನಮ್ಮ ಹತ್ತಿರ ಪಡೆದುಕೊಂಡು ಯಾವುದೇ ಪ್ರಾಡಕ್ಟ್ ನೀಡದೆ ಇದೀಗ ತಲೆ ಮರೆಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ನಮಗೆ ನೀಡಿದ ಹಣವನ್ನು ಹಿಂದಿರುಗಿಸದೆ ವಂಚನೆ ಎಸಗಿರುವ ಅವರ ವಿರುದ್ಧ ನಾವು ಬೇಸತ್ತು ಇದೀಗ ಎಲ್ಲರು ಸೇರಿಕೊಂಡು ಬುರ್ಲಿ ವಿಜಯ್ ಕುಮಾರ್ ಅವರ ವಿರುದ್ಧ ಎಚ್ಎಸ್ಆರ್ ಲೇಔಟ್ ನಲ್ಲಿರುವ ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದೇವೆ ಎಂದು ಹೇಳಿದರು.

ಇನ್ನು ಬೆಂಗಳೂರಿನ ಲಗ್ಗೆರೆಯ ಮತ್ತೊಬ್ಬ ಸಾರ್ವಜನಿಕರಾದ ಮಾರುತಿ ರಾವ್ ಸಿಕೆ ಎನ್ನುವರು ಮಾತನಾಡಿ, ಗ್ರಾಮೀಣ ಹೋಂ ಫುಡ್ಸ್ ಫ್ರಾನ್ಸಿಸ್ ನೀಡುವುದಾಗಿ ವೀಹನ್ ಫುಡ್ಸ್ ಅಂಡ್ ಬೆವರೇಜಸ್ ಎಂಜಿಪಿ ಕಂಪನಿಯ ಮಾಲೀಕರಾದ ಬುರ್ಲೆ ವಿಜಯ್ ಕುಮಾರ್ ಅವರು ನಮಗೆಲ್ಲರಿಗೂ ವಂಚಿಸಿದ್ದಾರೆ ಎಂದು ಹೇಳಿದರು.

ನಮ್ಮಂತ ಎಷ್ಟೋ ಸಾರ್ವಜನಿಕರಲ್ಲಿ ವಿಜಯ್ ಕುಮಾರ್ ಹಣ ವಸೂಲಿ ಮಾಡಿ ಈಗ ತಲೆ ಮರೆಸಿಕೊಂಡಿದ್ದಾರೆ ದಯಮಾಡಿ ಪೊಲೀಸರು ಅವರನ್ನ ಪತ್ತೆ ಹಚ್ಚಿ ನಮಗೆ ನೀಡಬೇಕಾದ ಹಣವನ್ನು ಹಿಂದಿರುಗಿಸಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಸಿದ್ದರಾಮಯ್ಯ ಸರ್ಕಾರ ಬಹಳ ಬಂಡತನದಿಂದ ನಡೆದುಕೊಳ್ಳುತ್ತಿದೆ: ಬಿವೈವಿ

ಇನ್ನು ನೊಂದ ಸಾರ್ವಜನಿಕರ ದೂರನ್ನು ದಾಖಲಿಸಿಕೊಂಡ ಪೊಲೀಸರು ತನಿಖೆ ಮಾಡುವುದಾಗಿ ಹೇಳಿದ್ದಾರೆ.

 

About the Author

Praja Vahini

Editor

View All Posts

Spread the love

Post navigation

Previous: ಪೋಷಕರು ಬೈದಿದ್ದಕ್ಕೆ ಮನೆ ಬಿಟ್ಟು ಹೋದ ಅಕ್ಕ-ತಮ್ಮ
Next: ನಿಮಗೆ ಮಾನ ಮರ್ಯಾದೆ ಇಲ್ವಾ? ವಿಪಕ್ಷಗಳ ವಿರುದ್ಧ ಅಬ್ಬರಿಸಿದ ಶಿವಲಿಂಗೇಗೌಡ

Views:

242

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.