Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಪೋಷಕರು ಬೈದಿದ್ದಕ್ಕೆ ಮನೆ ಬಿಟ್ಟು ಹೋದ ಅಕ್ಕ-ತಮ್ಮ
  • Bangalore
  • State

ಪೋಷಕರು ಬೈದಿದ್ದಕ್ಕೆ ಮನೆ ಬಿಟ್ಟು ಹೋದ ಅಕ್ಕ-ತಮ್ಮ

Praja Vahini February 4, 2026
WhatsApp Image 2026-02-04 at 12.34.01
Spread the love

ಬೆಂಗಳೂರು: ಪೋಷಕರೇ ಒಮ್ಮೆ ಗಮನಿಸಿ, ಮಕ್ಕಳು ಹಠ ಮಾಡಿದರೆ ಅಥವಾ ಸ್ಕೂಲು ಟ್ಯೂಷನ್‌ ಗೆ ಹೋಗದಿದ್ದರೆ ಯಾವುದೇ ಕಾರಣಕ್ಕೂ ಬಯ್ಯಬೇಡಿ. ಏಕೆಂದರೆ ಮಕ್ಕಳ ಮನಸ್ಸು ಹೇಗಿರುತ್ತದೆ ಎಂದು ಯಾರಿಗೂ ಗೊತ್ತಿರುವುದಿಲ್ಲ ಹಾಗಾಗಿ ಬಯ್ಯುವ ಮುನ್ನ ಸಾವಿರ ಸಾರಿ ಯೋಚಿಸಬೇಕಾಗುತ್ತದೆ. ಒಂದು ಬೈಗಳ ಮಕ್ಕಳ ಜೀವನವನ್ನೇ ಹಾಳು ಮಾಡಬಹುದು.

ಹೌದು, ಟ್ಯೂಷನ್‌ ಗೆ ಹೋಗಲಿಲ್ಲ ಎಂದು ಬೈದಿದ್ದಕ್ಕೆ 13 ವರ್ಷದ ಹೆಣ್ಣು ಮಗಳು ಮತ್ತು 9 ವರ್ಷದ ತನ್ನ ತಮ್ಮನೊಂದಿಗೆ ಮನೆ ಬಿಟ್ಟಿರುವ ಘಟನೆ ಬೆಂಗಳೂರು ನಗರದಲ್ಲಿ ನಡೆದಿದೆ. ಇತ್ತೀಚಿಗಷ್ಟೇ ಇಬ್ಬರು ಮಕ್ಕಳನ್ನು ಪೋಷಕರು ಟ್ಯೂಷನ್‌ ಗೆ ಹಾಕಿದ್ದರು. ಟ್ಯೂಷನ್ ಗೆ ಹೋಗಲು ಹಠ ಮಾಡಿದ್ದಕ್ಕೆ ಪೋಷಕರು ಇಬ್ಬರು ಮಕ್ಕಳಿಗೆ ಬೈದಿದ್ದರು. ಮನೆಯಲ್ಲಿ ಬೈದಿದ್ದಾರೆ ಎಂದು ಸಿಟ್ಟುಕೊಂಡ ಇಬ್ಬರು ಮಕ್ಕಳು ಮನೆ ಬಿಟ್ಟು ಹೋಗಿದ್ದಾರೆ.

ಪೋಷಕರು ಬೈದಿದ್ದಕ್ಕೆ ಮನ ನೊಂದು ಫೆ.1ರ ಮಧ್ಯಾಹ್ನ 3 ಗಂಟೆಗೆ ಮಾರತ್ತಹಳ್ಳಿಯ ಅಶ್ವತ್ಥನಗರದಿಂದ ಅಕ್ಕ ಮತ್ತು ತಮ್ಮ ಮನೆ ಬಿಟ್ಟು ತೆರಳಿದ್ದಾರೆ. ಬಾಲಕಿ ಮನೆಯಿಂದ ತೆರಳುವಾಗ ಆಧಾರ್‌ ಕಾರ್ಡ್‌ ಹಿಡಿದುಕೊಂಡಿದ್ದಳು. ಬಾಲಕಿಗೆ ಆಧಾರ್‌ ಕಾರ್ಡ್‌ ಇದ್ದ ಕಾರಣ ಸರ್ಕಾರಿ ಬಸ್‌ನಲ್ಲಿ ಉಚಿತ ಪ್ರಯಾಣ ಮಾಡಿದ್ದಾಳೆ. ಬಸ್ಸಿನಲ್ಲಿ ಇವರಿಬ್ಬರು ಶಿವಮೊಗ್ಗ, ಚಿತ್ರದುರ್ಗ ಸೇರಿದಂತೆ ಹಲವೆಡೆ ಸುತ್ತಾಟ ನಡೆಸಿದ್ದಾರೆ.

ಇನ್ನು ಮಕ್ಕಳು ನಾಪತ್ತೆಯಾದ ಬೆನ್ನಲ್ಲೇ ಪೋಷಕರು ಹೆಚ್ಎಎಲ್ ಠಾಣೆಯಲ್ಲಿ ದೂರು ನೀಡಿದ್ದರು. ತಕ್ಷಣ ಹೆಚ್ಎಎಲ್ ಪೊಲೀಸರು ಮಂಗಳೂರು ಸೇರಿದಂತೆ ರಾಜ್ಯಾದ್ಯಂತ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಅಷ್ಟೇ ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿಯೂ ಮಾಹಿತಿ ಹಂಚಿಕೊಂಡಿದ್ದರು. ಇದನ್ನೂ ಓದಿ: ಸಿದ್ದರಾಮಯ್ಯ ಸರ್ಕಾರ ಬಹಳ ಬಂಡತನದಿಂದ ನಡೆದುಕೊಳ್ಳುತ್ತಿದೆ: ಬಿವೈವಿ

ಫೋಟೋ ನೋಡಿ ಸಾರ್ವಜನಿಕರು ಚಿತ್ರದುರ್ಗದಲ್ಲಿ ಮಕ್ಕಳು ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಚಿತ್ರದುರ್ಗ ಪೊಲೀಸರು ಮಕ್ಕಳಿದ್ದ ಸ್ಥಳಕ್ಕೆ ತೆರಳಿ ಅವರನ್ನು ಠಾಣೆಗೆ ಕರೆತಂದು ಹೆಚ್ಎಎಲ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಹೆಚ್‌ಎಎಲ್‌ ಪೊಲೀಸರು ಮಕ್ಕಳನ್ನು ಈಗ ಪೋಷಕರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

About the Author

Praja Vahini

Editor

View All Posts

Spread the love

Post navigation

Previous: ಸಿದ್ದರಾಮಯ್ಯ ಸರ್ಕಾರ ಬಹಳ ಬಂಡತನದಿಂದ ನಡೆದುಕೊಳ್ಳುತ್ತಿದೆ: ಬಿವೈವಿ
Next: ಎಚ್ಎಸ್ಆರ್ ಲೇಔಟ್ ನಲ್ಲಿ ವೀಹನ್ ಫುಡ್ಸ್ ಅಂಡ್ ಬೆವರೇಜಸ್ ಎಂಜಿಪಿ ಬಿ ವಿಜಯ್ ಕುಮಾರ್ ನಿಂದ ವಂಚ ದೂರು ದಾಖಲು

Views:

50

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.