ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಹಳ ಬಂಡತನದಿಂದ ನಡೆದುಕೊಳ್ಳುತ್ತಿದೆ ಯಾವುದೇ ಅಕ್ರಮ ನಡೆದರೂ ಕೂಡ ಅದನ್ನು ಪರಿಗಣಿಸದೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ರಾಜ್ಯ ಸರ್ಕಾರದ ವಿರುದ್ಧ ಆರೋಪಿಸಿದ್ದಾರೆ.
ವಿಧಾನಸೌಧದ ಕೆಂಗಲ್ ಗೇಟ್ ಬಳಿ ಮಾತನಾಡಿದ ಅವರು, ಅಬಕಾರಿ ಇಲಾಖೆಯಲ್ಲಿ ಕಳೆದ ಎರಡುವರೆ ವರ್ಷದಿಂದ ಬರೋಬ್ಬರಿ 6 ಸಾವಿರ ಕೋಟಿ ಅಧಿಕ ಹಣ ಹಗರಣವಾಗಿದೆ ಎಂದು ಆರೋಪಿಸಿದ್ದಾರೆ.
ಸಿದ್ದರಾಮಯ್ಯ ಸರ್ಕಾರ ಹಗರಣಗಳ ಅಲೆಯಲ್ಲಿ ಸಿಲುಕಿಕೊಂಡಿದೆ. ಅಬಕಾರಿ ಇಲಾಖೆವರೆಗೂ ಬಂದು ತಲುಪಿದೆ. ಮನಸೋ ಇಚ್ಛೆ ಬೇಕಾಬಿಟ್ಟಿ ಲಿಕ್ಕರ್ ಲೆಸೆನ್ಸ್ ಕೊಡ್ತಾ ಇದ್ದಾರೆ. ಇಷ್ಟು ಭ್ರಷ್ಟಾಚಾರ ಯಾವುದೇ ಇಲಾಖೆ ತೆಗೆದುಕೊಂಡಿಲ್ಲ. 6 ಸಾವಿರ ಕೋಟಿ ಹಗರಣ ಆಗಿದೆ. ಆಡಿಯೋ ಟೇಪ್ ನಲ್ಲಿ ಹೆಸರು ಬಂದಿದೆ ಎಂದು ಕಿಡಿ ಕಾರಿದರು. ಇದನ್ನೂ ಓದಿ: ವಿಧಾನಸೌಧದಲ್ಲಿ BJP, JDS ಅಹೋರಾತ್ರಿ ಧರಣಿ!
ಅಬಕಾರಿ ಸಚಿವರ ವಿರುದ್ಧ ಸಿಎಂ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಮೊದಲು ರಾಜೀನಾಮೆ ಪಡೆದು ನಂತರ ತನಿಖೆ ಆಗಲಿ. ಅವರು ಭ್ರಷ್ಟಾಚಾರ ನಡೆಸಿಲ್ಲ ಎಂದಾದ್ರೆ ಆಮೇಲೆ ಮತ್ತೆ ಬರಲಿ. ಸರ್ಕಾರ ಕೂಡಲೇ ರಾಜೀನಾಮೆ ಪಡೆಯದಿದ್ದರೆ ಹೋರಾಟ ಮುಂದುವರಿಯುತ್ತದೆ ಎಂದು ಎಚ್ಚರಿಸಿದರು.
