ಹಾಸನ: ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಒಂದಲ್ಲ ಒಂದು ರೀತಿ ಸುದ್ದಿ ಆಗುತ್ತಲೇ ಇರುತ್ತಾರೆ.
ಹೌದು, ನಟ ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪ ಅವರು ಮತ್ತೆ ಸುದ್ದಿಗೆ ಬಂದಿದ್ದಾರೆ. ತಮ್ಮ ಮನೆ ಸಮೀಪದ ನಿವೇಶನ ಮಾಲೀಕತ್ವ ಜಟಾಪಟಿ ಮತ್ತೆ ಸುದ್ದಿಯಾಗಿದೆ.
ಸೈಟ್ ಬಳಿ ಆಗಮಿಸಿರುವ ಯಶ್ ತಾಯಿ ಪುಷ್ಪಾ ಕಾಂಪೌಂಡ್ ನಿರ್ಮಾಣಕ್ಕೆ ಮುಂದಾಗಿದ್ದರು. ಇದೇ ವೇಳೆ ಸೈಟ್ ಬಳಿ ದೇವರಾಜು ಆಗಮಿಸಿದ್ದಾರೆ. ದೇವರಾಜು ಅವರಿಗೆ ದಾಖಲೆಗಳನ್ನು ತೋರಿಸು ಎಂದ ಪುಷ್ಪಾ ಅವರು ಕೇಳಿದ್ದಾರೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದೆ.
ಮೊದಲು ದಾಖಲೆಗಳನ್ನು ಕೊಡು ಎಂದು ಪುಷ್ಪಾ ಅವರು ಪ್ರಶ್ನಿಸಿದ್ದಾರೆ. ಸೆಲೆಬ್ರಿಟಿ ನನ್ನ ಮಗ, ನಾನಲ್ಲ. ನಾನು ಇಲ್ಲಿ ಹುಟ್ಟಿ ಬೆಳೆದವಳು. ಸೈಟ್ ಒಳಗೆ ಕಾಲಿಡಬೇಡ ಎಂದ ಪುಷ್ಪಾ ಏರುದನಿಯಲ್ಲಿ ಮಾತನಾಡಿದ್ದಾರೆ. ರೌಡಿಗಳನ್ನು ಕರೆದುಕೊಂಡು ರೌಡಿಸಂ ಮಾಡ್ತೀಯಾ. ನಾನು ಎಸ್ಪಿಗೆ ದೂರು ಕೊಡ್ತೀನಿ. ಇನ್ಮುಂದೆ ಇಲ್ಲಿಗೆ ಕಾಲಿಟ್ಟರೆ ಸುಮ್ಮನ್ನಿರಲ್ಲ ಎಂದು ಯಶ್ ತಾಯಿ ಎಚ್ಚರಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ: ಸಿಜೆ ರಾಯ್ ಸಾವಿನ ಸುತ್ತಾ ನೂರಾರು ಅನುಮಾನಗಳ ಹುತ್ತ!
