ಬೆಂಗಳೂರು: ಕನ್ನಡ ಬಿಗ್ ಬಾಸ್ ಸೀಸನ್ 12 ರಲ್ಲಿ ಅತಿ ಹೆಚ್ಚು ವೋಟ್ ಪಡೆಯುವ ಮೂಲಕ ಬಿಗ್ ಬಾಸ್ ವಿನ್ನರಾದ ಗಿಲ್ಲಿನಟ ಇಂದು ಕನ್ನಡ ಚಿತ್ರರಂಗದ ಖ್ಯಾತ ಕನ್ನಡದ ನಟ ಶಿವರಾಜ್ ಕುಮಾರ್ ಅವರನ್ನ ಭೇಟಿ ಮಾಡಿದ್ದಾರೆ.
ಮಾನ್ಯತಾ ಟೆಕ್ ಪಾರ್ಕ್‌ನಲ್ಲಿರುವ ಶಿವಣ್ಣ ಅವರ ನಿವಾಸಕ್ಕೆ ತೆರಳಿ ಭೇಟಿ ಮಾಡಿ, ಆಶೀರ್ವಾದ ಪಡೆದಿದ್ದಾರೆ. ಈ ವೇಳೆ ಶಿವಣ್ಣ ದಂಪತಿ ಗಿಲ್ಲಿಗೆ ಸಿಹಿ ತಿನಿಸಿ, ಶುಭ ಹಾರೈಸಿದ್ದಾರೆ. ಬಿಗ್‌ಬಾಸ್ ಫಿನಾಲೆಗೆ ಕೆಲವೇ ದಿನವಿರುವಾಗಲೇ ಶಿವಣ್ಣ ಗಿಲ್ಲಿನೇ ಗೆಲ್ಲೋದು ಎಂದು ಭವಿಷ್ಯ ನುಡಿದಿದ್ದರು.
ಬಿಗ್‌ಬಾಸ್ ಕನ್ನಡ ಸೀಸನ್ 12ರಲ್ಲಿ 40 ಕೋಟಿಗೂ ಹೆಚ್ಚು ವೋಟ್ ಪಡೆಯುವ ಮೂಲಕ ಗಿಲ್ಲಿ ನಟ ಮೊದಲ ಸ್ಥಾನಗಳಿಸಿದರೆ, ರಕ್ಷಿತಾ ಶೆಟ್ಟಿ ರನ್ನರ್ ಅಪ್ ಆದರು.
