ಜನರ ಜೀವಾಳ ನಾಗರಕೆರೆಗೆ 2.17 ಕೋಟಿ ರೂ, ಅನುಮೋದನೆ; ಸಚಿವ ದರ್ಶನಾಪುರ
ಶಹಾಪುರ: ನಾಗರಕೆರೆ ನಗರದ ಜೀವಾಳವಾಗಿದ್ದು, ಇದರ ಸಮಗ್ರ ಅಭಿವೃದ್ಧಿಗೆ ಅಮೃತ 2.0 ಅಡಿಯಲ್ಲಿ ನಗರಸಭೆಯ ವ್ಯಾಪ್ತಿಯಲ್ಲಿ 2.17 ಕೋಟಿ ರೂ. ಅನುದಾನ ಅನುಮೋದನೆಯಾಗಿದೆ ಎಂದು ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿ ಕಾಮಗಾರಿಯ ವ್ಯಾಪ್ತಿಯಲ್ಲಿ 240 ಮೀಟರ್ ಮುಖ್ಯ ಒಡ್ಡು, 620.64 ಮೀಟರ್ ಬಾಹ್ಯ ಒಡ್ಡು, ಒಳಹರಿವು ಹೊರಹರಿವಿನ ಮೋರಿ, ತಡೆಗೊಡೆ, ಹ್ಯೂಮ್ ಪೈಪ್ ಮೋರಿ, 832 ಮೀ ಒಡ್ಡು ಕಟ್ಟುವುದು, ಬೇಲಿ, ಸರಪಳಿ ಬೇಲಿ, ಕಸದ ತೊಟ್ಟಿ, ಭೂದೃಶ್ಯದ ಕೆಲಸ , ಹೂಳು ತೆಗೆಯುವುದು ಈಗೇ ಅಭಿವೃದ್ಧಿ ಕಾಮಗಾರಿ ಒಳಗೊಂಡಿರಲಿದ್ದು, ಇದರಿಂದ ಕೆರೆ ಅಭಿವೃದ್ಧಿ ಮತ್ತು ಸುಂದರೀಕರಣಕ್ಕೆ ಅನುಕೂಲವಾಗಲಿದೆ. ಕೆರೆಗಳು ಬದುಕಿನಲ್ಲಿ ಮಹತ್ವದ ಪಾತ್ರ ವಹಿಸಿದ್ದು, ಜೀವನಾಡಿಗಳೆನಿಸಿವೆ. ಕೆರೆಯ ಪಕ್ಕದ ಗುಡ್ಡದಿಂದ ಹರಿದು ನೀರು ಮುಂದೆ ಸಾಗಲು ಸಹ ಕಾಮಗಾರಿ ಒಳಗೊಂಡಿದೆ. ಕೆರೆಗೆ ಅಭಿವೃದ್ಧಿಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ನಗರದಲ್ಲೆ ಇದೊಂದು ಮಾದರಿ ಕೆರೆಯಾಗಿ ರೂಪಗೊಳ್ಳಲಿದೆ ಎಂದು ತಿಳಿಸಿದ್ದಾರೆ.
