ಬೆಂಗಳೂರು: ಹುಬ್ಬಳ್ಳಿಯಲ್ಲಿ ನಡೆದ ಗಲಾಟೆಯಲ್ಲಿ ಬಿಜೆಪಿಯ ಕಾರ್ಯಕರ್ತೆಯೇ ಬಟ್ಟೆ ಹರಿದುಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ರಾಜ್ಯ ರಾಜಕೀಯದಲ್ಲಿ ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡುತ್ತಿದ್ದಾರೆ.
ಇದೀಗ ಈ ಕುರಿತು ಕಾರ್ಮಿಕ ಇಲಾಖೆಯ ಸಚಿವರಾದ ಸಂತೋಷ್ ಲಾಡ್ ಅವರು ಪ್ರತಿಕ್ರಿಯಿಸಿದ್ದು, ಆಕೆಯೇ ಸ್ವತಃ ತನ್ನ ಬಟ್ಟೆಯನ್ನು ಹರಿದುಕೊಂಡು ಬೇರೆಯವರ ಮೇಲೆ ಆರೋಪಿಸುತ್ತಿದ್ದಾಳೆ ಎಂದು ಹೇಳುತ್ತಾರೆ.
ವಿಧಾನಸೌಧದಲ್ಲಿ ಈ ಕುರಿತು ಮಾತನಾಡಿದ ಅವರು, ಆ ಮಹಿಳೆಯೇ ಪೊಲೀಸರಿಗೆ ಕಚ್ಚಿದ್ದಾಳೆ. 10 ಜನ ಕಾನ್ಸ್ಟೇಬಲ್ಗಳ ಮೇಲೆ ಹಲ್ಲೆ ಮಾಡಿದ್ದಾಳೆ. ಆ ಮಹಿಳೆಯೇ ಬಟ್ಟೆ ಬಿಚ್ಚಿದ್ದಾರೆ. ಕರ್ನಾಟಕದಲ್ಲಿ ನಮ್ಮ ಪೊಲೀಸರು ಬಟ್ಟೆ ಬಿಚ್ಚುವ ಸಂಪ್ರದಾಯ ಯಾವತ್ತು ಇಟ್ಟುಕೊಂಡಿಲ್ಲ ಅಂತ ತಿಳಿಸಿದರು. ಇದನ್ನೂ ಓದಿ: ಬಟ್ಟೆಬಿಚ್ಚಿ ಹಲ್ಲೆ ಕೇಸ್: ಬಿಜೆಪಿಯವರು ಅನಗತ್ಯ ರಾಜಕೀಯ ಮಾಡಬಾರದು: ಪರಮೇಶ್ವರ್
ಆಕೆಯ ಮೇಲೆ ಹಲ್ಲೆ ಆಗಿರೋದು ನಿಜ. ಹಲ್ಲೆ ಆಗಿರುವ ವಿಚಾರಕ್ಕೆ ಕ್ರಮ ಆಗಬೇಕು. ದೂರು ದಾಖಲಾಗಿದೆ ಕಾನೂನು ಪ್ರಕಾರ ಕ್ರಮ ಆಗುತ್ತದೆ. ನಾನೇ ಉಸ್ತುವಾರಿ ಸಚಿವನಾಗಿ ಹಲ್ಲೆ ವಿಚಾರಕ್ಕೆ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ್ದೇನೆ ಎಂದರು.
