ವಿಜಯಪುರ: ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಲೋಣಿ ಬಿಕೆ ಗ್ರಾಮದಲ್ಲಿ ಶ್ರೀ ಸಿದ್ದೇಶ್ವರ ಶಿಕ್ಷಣ ಸಂಸ್ಥೆಯ ಸುವರ್ಣ ಸಂಭ್ರಮೋತ್ಸವ (ದಿ.ರಾಜಶೇಖರ ಕಲ್ಯಾಣಶೆಟ್ಟಿ ವೇದಿಕೆ) ಕಾರ್ಯಕ್ರಮದಲ್ಲಿ ವಿಜಯಪುರ ಸಂಸದ ರಮೇಶ ಜಿಗಜಣಗಿ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಶ್ರೀ ಸಿದ್ದೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ ಎಮ್ ಕೋರೆ ಪ್ರಾಸ್ತಾವಿಕವಾಗಿ ಮಾತನಾಡಿ, ಗಡಿಭಾಗದಲ್ಲಿ ಶಿಕ್ಷಣದ ಕ್ರಾಂತ್ರಿ ಹರಡಿಸಿರುವ, ಬಡಮಕ್ಕಳ ಶಿಕ್ಷಣ ಕಲ್ಪಿಸಿಲು ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾನು ಋಣಿಯಾಗಿತ್ತೆನೆ ಎಂದರು.
ಸುವರ್ಣ ಸಂಭ್ರಮೋತ್ಸವ ಉದ್ಘಾಟಿಸಿ ಮಾತನಾಡಿದ ಸಂಸದ ರಮೇಶ ಜಿಗಜಿಣಗಿ, ಶಿಕ್ಷಣ ನೀಡುವದು ಪುಣ್ಯದ ಕೆಲಸ,ತಾಯಿ ಮೊದಲ ಗುರು, ನಂತರ ಶಿಕ್ಷಕರು. ಅದಕ್ಕಾಗಿ ರಾಷ್ಟ್ರ ನಿರ್ಮಾಣದ ಜವಾಬ್ದಾರಿ ಇಂದಿನ ಶಿಕ್ಷಣದ ತಳಹದಿಯಮೇಲೆ ನಿಂತಿದೆ ಎಂದರು. ಚುನಾವಣೆ ಸಂದರ್ಭದಲ್ಲಿ ನಮ್ಮ ಪಕ್ಷ ಬೇರೆ ಬೇರೆಯಾದರು. ಅಭಿವೃದ್ಧಿ ವಿಷಯದಲ್ಲಿ ಪಕ್ಷಾತೀತವಾಗಿ ಶ್ರಮಿಸಬೇಕು ಎಂದರು.
‘ಮಹೋತ್ಸವದ ಕಾರ್ಯಾಧ್ಯಕ್ಷ ನಾಗಠಾಣ ಶಾಸಕ ವಿಠಲ ಕಟಕದೊಂಡ ಮಾತನಾಡಿ, ಶ್ರೀ ಸಿದ್ದೇಶ್ವರ ಸಂಸ್ಥೆಯ 50 ವರ್ಷದ ಶಿಕ್ಷಣದ ಗ್ರಂಥ ಬಿಡುಗಡೆ ಮಾಡಿದ, ತಮ್ಮ 27 ನೇಮಹೋತ್ಸವದ ಕಾರ್ಯಾಧ್ಯಕ್ಷ ನಾಗಠಾಣ ಶಾಸಕ ವಿಠಲ ಕಟಕದೊಂಡ ಮಾತನಾಡಿ, ಶ್ರೀ ಸಿದ್ದೇಶ್ವರ ಸಂಸ್ಥೆಯ 50 ವರ್ಷದ ಶಿಕ್ಷಣದ ಗ್ರಂಥ ಬಿಡುಗಡೆ ಮಾಡಿದ, ತಮ್ಮ 27 ನೇ ವಯಸ್ಸಿನಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಿದರು. ಅದು ಇಂದು ಹೆಮ್ಮರವಾಗಿ 11 ಅಂಗ ಶಿಕ್ಷಣ ಸಂಸ್ಥೆಗಳನ್ನು ಹೊಂದಿದೆ. ಇದು ಭಾಗದ ಬಡಜನರಿಗೆ ಶಿಕ್ಷಣದ ಮಹತ್ವವನ್ನು ತಿಳಿಸಿಕೊಟ್ಟಿದ್ದಾರೆ. ಇದನ್ನೂ ಓದಿ: ಪ್ರಭಾವಕ್ಕೊಳಗಾಗಿ ಎಸ್.ಟಿ ಪ್ರಮಾಣ ಪತ್ರ ನೀಡುವಲ್ಲಿ ಗೊಂದಲ ಸೃಷ್ಠಿ
ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಮಾತನಾಡಿ, ಗಡಿಭಾಗದಲ್ಲಿ ಸುಮಾರು 50 ವರ್ಷಸಗಳಿಂದ ಗುಣಾತ್ಮ ಶಿಕ್ಷಣ ನೀಡುವಲ್ಲಿ ಸಿದ್ದೇಶ್ವರ ಶಿಕ್ಷಣ ಸಂಸ್ಥೆ ನೀಡುತ್ತರುವ ಕಾರ್ಯ ಶ್ಲಾಘನೀಯ, ಶಿಕ್ಷಣ ಸಮಾಜ ಪರಿವರ್ತನೆಯಲ್ಲಿ ಮುಖ್ಯ ಪಾತ್ರವಹಿಸುತ್ತದೆ ಎಂದರು.
