Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ವಾಣಿಜ್ಯ ಸ್ವತ್ತುಗಳ ಕಂದಾಯ ಪರಿವೀಕ್ಷಣೆ ನಡೆಸಲು ಸೂಚನೆ : ಡಾ. ರಾಜೇಂದ್ರ ಕೆ.ವಿ.
  • Bangalore
  • State

ವಾಣಿಜ್ಯ ಸ್ವತ್ತುಗಳ ಕಂದಾಯ ಪರಿವೀಕ್ಷಣೆ ನಡೆಸಲು ಸೂಚನೆ : ಡಾ. ರಾಜೇಂದ್ರ ಕೆ.ವಿ.

Praja Vahini January 3, 2026
WhatsApp Image 2026-01-03 at 17.54.41
Spread the love

ಬೆಂಗಳೂರು: ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲಾ ವಾಣಿಜ್ಯ ಸ್ವತ್ತುಗಳ ಕಂದಾಯ ಪರಿವೀಕ್ಷಣೆ ನಡೆಸುವಂತೆ ಆಯುಕ್ತರಾದ ಡಾ. ರಾಜೇಂದ್ರ ಕೆ.ವಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಲ್ಲೇಶ್ವರಂ ವಿಭಾಗದ ವಾರ್ಡ್ ಸಂಖ್ಯೆ 64ರ ಮಾರ್ಗೋಸ ರಸ್ತೆಯಲ್ಲಿ ವಸತಿಯೇತರ (ವಾಣಿಜ್ಯ) ಸ್ವತ್ತುಗಳ ಕಂದಾಯ ಪರಿಷ್ಕರಣೆ ಅಭಿಯಾನ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಿದರು.

ಮಾರ್ಗೋಸ ರಸ್ತೆಯಲ್ಲಿ ನಡೆಸಿದ ಪರಿಶೀಲನೆಯ ವೇಳೆ, ವಾಣಿಜ್ಯ ಸ್ವತ್ತುಗಳ ಮಾಲೀಕರು ಸ್ವಂತ ಬಳಕೆ ಎಂದು ಸೂಚಿಸಿ ಬಾಡಿಗೆಗೆ ನೀಡಿರುವುದು, ಖಾಲಿ ಜಾಗಗಳನ್ನು ಕಾರು ನಿಲುಗಡೆ ಹಾಗೂ ಇತರೆ ವಾಣಿಜ್ಯ ಚಟುವಟಿಕೆಗಳಿಗೆ ಬಳಸುತ್ತಿರುವುದು, ಎಸ್.ಎ.ಎಸ್ (ಸ್ವಯಂ ಮೌಲ್ಯಮಾಪನ ವ್ಯವಸ್ಥೆ) ಪ್ರಕಾರ ಆಸ್ತಿ ತೆರಿಗೆ ಪಾವತಿಸುತ್ತಿರುವ ಬಗ್ಗೆ ಪರಿಶೀಲನೆ ನಡೆಸಲಾಯಿತು.

ಆಸ್ತಿ ಮಾಲೀಕರು ಎಸ್.ಎ.ಎಸ್ ಮೂಲಕ ಸ್ವತ್ತುಗಳ ವಿವರಗಳನ್ನು ಕಡಿಮೆ ತೋರಿಸಿ ಆಸ್ತಿ ತೆರಿಗೆ ಪಾವತಿಸಿರುವ ಪ್ರಕರಣಗಳನ್ನು ಪರಿಶೀಲಿಸಿ, ಕಂದಾಯ ಪರಿಷ್ಕರಣೆ ನಡೆಸಿ ನಿಗದಿತ ತೆರಿಗೆಯನ್ನು ವಸೂಲಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.

ಖಾಲಿ ಸ್ವತ್ತುಗಳನ್ನು ವಸತಿಯೇತರವಾಗಿ, ಅಂದರೆ ಖಾಸಗಿ ವಾಹನ ನಿಲುಗಡೆ ಸೇರಿದಂತೆ ವಾಣಿಜ್ಯ ಉದ್ದೇಶಗಳಿಗೆ ಬಳಸುತ್ತಿರುವಲ್ಲಿ ಅದರ ಅನುಸಾರ ತೆರಿಗೆ ಪಾವತಿಸುತ್ತಿರುವುದನ್ನು ಪರಿಶೀಲಿಸಲು ಹಾಗೂ ನೆಲಮಹಡಿ ಪ್ರದೇಶವನ್ನು ಯಾವ ಉದ್ದೇಶಕ್ಕಾಗಿ ಬಳಸಲು ನಕ್ಷೆ ಮಂಜೂರಾತಿ ಪಡೆದಿದ್ದಾರೆ ಎಂಬುದನ್ನೂ ಪರಿಶೀಲಿಸಲು ನಿರ್ದೇಶನ ನೀಡಿದರು.  ಇದನ್ನೂ ಓದಿ: ರಾಜ್ಯ ಸರ್ಕಾರ ಸುಳ್ಳು ಹೇಳಿ ಬಡವರ ತಪ್ಪಿಸುತ್ತಿದೆ: ಬೊಮ್ಮಾಯಿ

ಈ ಸಂದರ್ಭದಲ್ಲಿ ಜಂಟಿ ಆಯುಕ್ತರಾದ ಸಂಗಪ್ಪ, ಕಂದಾಯ ಅಧಿಕಾರಿ ಎಂ ಶ್ರೀನಿವಾಸ, ಸಹಾಯಕ ಕಂದಾಯ ಅಧಿಕಾರಿಗಳಾದ ರಾಜ್ ಕುಮಾರ್, ಸುನಂದಾ ಸೇರಿದಂತೆ ಇತರೆ ಕಂದಾಯ ಅಧಿಕಾರಿಗಳು ಉಪಸ್ಥಿತರಿದ್ದರು.

About the Author

Praja Vahini

Editor

View All Posts

Spread the love

Post navigation

Previous: ಗಡಿ ಭಾಗದಲ್ಲಿ ಶಿಕ್ಷಣದ ಕ್ರಾಂತಿ ಮಾಡಿದ ಶ್ರೀ ಸಿದ್ದೇಶ್ವರ ಸಂಸ್ಥೆ
Next: ಜನಾರ್ದನ ರೆಡ್ಡಿ ಬಳ್ಳಾರಿಗೆ ಕಾಲಿಡೋವರೆಗೂ ಒಂದೇ ಒಂದು ಗಲಾಟೆ ಇರಲಿಲ್ಲ: ಡಿಕೆಶಿ

Views:

26

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.