ಬೆಂಗಳೂರು: ಬಳ್ಳಾರಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ನಾವು ತನಿಖೆಗೆ ಸೂಚಿಸಿದ್ದೇವೆ, ತನಿಖೆ ಬಂದ ಮೇಲೆ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕೆಂದು ಈಗಾಗಲೇ ನಾವು ನಿರ್ಧರಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಬಳ್ಳಾರಿ ಗಲಾಟೆ ವಿಚಾರವಾಗಿ ವಿಧಾನಸೌಧದಲ್ಲಿ ಮಾತನಾಡಿದ ಅವರು, ಘಟನೆ ಬಗ್ಗೆ ತನಿಖೆ ಮಾಡೋದಕ್ಕೆ ಹೇಳಿದ್ದೇನೆ. ಯಾರ ಗನ್ ನಿಂದ ಬುಲೆಟ್ ಬಂದಿದೆ ಅನ್ನೋದು ಗೊತ್ತಾಗಬೇಕಲ್ವಾ? ಬಿಜೆಪಿಯವರ ಗನ್ನಾ? ಅಥವಾ ಕಾಂಗ್ರೆಸ್ ಅವರ ಗನ್ನಿಂದ ಬಂದಿದ್ಯಾ ಅನ್ನೋದು ಗೊತ್ತಾಗಬೇಕು. ಅದಕ್ಕೋಸ್ಕರ ತನಿಖೆ ಮಾಡಲು ಹೇಳಿದ್ದೇನೆ ಎಂದರು. ಇದನ್ನೂ ಓದಿ: ಬಳ್ಳಾರಿಯಲ್ಲಿ ನಡೆದ ಘಟನೆಯಲ್ಲಿ ಯಾರೇ ಇದ್ದರೂ ಕೂಡ ಅವರನ್ನ ಬಿಡಲ್ಲ: ಜಮೀರ್
ಖಾಸಗಿ ಬುಲೆಟ್ನಿಂದ ಸಾವಾಗಿದೆ ಎಂಬ ಬಳ್ಳಾರಿ ಎಸ್ ಪಿ ಮಾಹಿತಿ ಕೊಟ್ಟಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅವರ ಸೆಕ್ಯುರಿಟಿಗಾಗಿ ಗನ್ ಇಟ್ಟುಕೊಂಡಿದ್ದಾರೆ. ಏರ್ ನಲ್ಲಿ ಗನ್ ಫೈರ್ ಮಾಡಿದ್ದಾರೆ. ಅದಕ್ಕೆ ಫೈರಿಂಗ್ ಮಾಡಿರೋದು ಮನುಷ್ಯನಿಗೆ ತಗುಲಿದೆ. ರಾಜಶೇಖರ್ ಸತ್ತು ಹೋಗಿದ್ದಾರೆ. ಯಾರ ಗನ್ ನಿಂದ ಬಂದಿದೆ ಅನ್ನೋದು ಗೊತ್ತಾಗಬೇಕಲ್ವಾ. ಅದಕ್ಕೆ ತನಿಖೆ ಮಾಡಿ ವರದಿ ಕೊಡಿ ಎಂದು ಹೇಳಿದ್ದೇನೆ ಅಂತ ತಿಳಿಸಿದರು.
