ಬೆಂಗಳೂರು: ಸಚಿವ ಪ್ರಿಯಾಂಕ್ ಖರ್ಗೆ ಅವರ ನೇತೃತ್ವದಲ್ಲಿ ಪ್ರಾಥಮಿಕ ಸಮಿತಿಯ ಮೂಲಕ ‘ಮಾಹಿತಿ ಅಸ್ತವ್ಯಸ್ತತೆ ನಿಗಾ ಘಟಕ/ಸತ್ಯಾಸತ್ಯತೆ ಪರಿಶೀಲನಾ ಸಂಸ್ಥೆ’ಯನ್ನು (Information Disorder Tracking Unit/Fact-Check Agency) ರಚಿಸಲಾಗಿದೆ.
ಸರ್ಕಾರದ ವಿರುದ್ಧದ ಟೀಕೆಗಳನ್ನು ಹತ್ತಿಕ್ಕಲು ಈ ಫ್ಯಾಕ್ಟ್-ಚೆಕ್ ಸಂಸ್ಥೆಯನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ನಾನು ಪದೇ ಪದೇ ಹೇಳುತ್ತಿದ್ದೇನೆ. ಇದು ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರದ ವಿರುದ್ಧ ಧ್ವನಿ ಎತ್ತುವವರ ಮೇಲೆ ಎಫ್ಐಆರ್ ದಾಖಲಿಸಲು ಸಹ ಪ್ರೇರೇಪಿಸುತ್ತದೆ. ಕಾಂಗ್ರೆಸ್ ಸರ್ಕಾರ ಮತ್ತು ಶ್ರೀ ಖರ್ಗೆ ಅವರು ಈ ಘಟಕದ ಸದಸ್ಯರ ಗುರುತು, ಅವರ ವಿದ್ಯಾರ್ಹತೆ ಮತ್ತು ಆಯ್ಕೆಯ ಮಾನದಂಡಗಳನ್ನು ಬಹಿರಂಗಪಡಿಸಬೇಕು ಹಾಗೂ ಈ ಘಟಕಗಳಿಗೆ ಎಷ್ಟು ಅನುದಾನ ನೀಡಲಾಗಿದೆ ಎಂಬ ಮಾಹಿತಿಯನ್ನೂ ನೀಡಬೇಕು ಎಂದು ಯುವ ವಕೀಲ ಗಿರೀಶ ಭಾರದ್ವಾಜ ಸಾಮಾಜಿಕ ಜಾಲತಾಣದ ಮೂಲಕ ಸಚಿವರಾದ ಪ್ರಿಯಾಂಕ ಖರ್ಗೆ ಅವರಿಗೆ ಪ್ರಶ್ನೆ ಮಾಡಿದ್ದಾರೆ.
