ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಮಾರ್ಕ್ ಸಿನಿಮಾ ಇದೇ ಡಿಸೆಂಬರ್ 25ರಂದು ಜಗತ್ತಿನಾದ್ಯಂತ ಅಬ್ಬರಿಸಲು ರೆಡಿಯಾಗಿದ್ದು, ರಿಲೀಸ್ ಗೂ ಮೊದಲೇ ಕಿಚ್ಚ ಸುದೀಪನ ಅಬ್ಬರ ಜೋರಾಗಿದೆ.
ಹೌದು, ಮಾರ್ಕ್ ಸಿನಿಮಾದ ಪ್ರಚಾರಕ್ಕೆಂದು ಕಿಚ್ಚ ಸುದೀಪ್ ಅವರು ಹುಬ್ಬಳ್ಳಿಯಲ್ಲಿ ಬೃಹತ್ ವೇದಿಕೆ ಮೇಲೆ ಅಭಿಮಾನಿಗಳ ಮುಂದೆ ಖಡಕ್ ಡೈಲಾಗ್ ಹೊಡೆದಿದ್ದು, ಇದೀಗ ಈ ಡೈಲಾಗ್ ಕನ್ನಡ ಚಿತ್ರರಂಗದಲ್ಲಿ ಕಿಚ್ಚನ ಮಾತು ಎಲ್ಲೆಡೆ ಕಿಚ್ಚು ಹಚ್ಚಿದಂತೆ ಕಾಣುತ್ತದೆ.
ಯೆಸ್…ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಸಿನಿಮಾ ಇದೇ ಡಿಸೆಂಬರ್ 25ಕ್ಕೆ ವರ್ಲ್ಡ್ವೈಡ್ ರಿಲೀಸ್ ಆಗುತ್ತಿದೆ. ಆದರೆ ರಿಲೀಸ್ ಮೊದಲೇ ಮಾರ್ಕ್ ಸಿನಿಮಾ ಸಕ್ಕತ್ ಸೌಂಡ್ ಮಾಡುತ್ತಿದೆ.
ಹುಬ್ಬಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುದೀಪ್ ಆಡಿದ ಒಂದು ಮಾತು ಸ್ಯಾಂಡಲ್ವುಡ್ನಲ್ಲಿ ಸಂಚಲನಕ್ಕೆ ಕಾರಣವಾಗಿದೆ. ʻಯುದ್ಧಕ್ಕೆ ಸಿದ್ಧ..ಯಾಕಂದ್ರೆ ನಾವು ನಮ್ಮ ಮಾತಿಗೆ ಬದ್ಧʼ ಎಂದಿದ್ದು, ಫ್ಯಾನ್ಸ್ ಫೈಟ್ನಲ್ಲಿ ಕಿಚ್ಚನ ಕಿಚ್ಚು ಮತ್ತಷ್ಟು ಹೆಚ್ಚಿಸಿದೆ.
ಕಿಚ್ಚನ ಯುದ್ಧದ ಮಾತಿಗೆ ನಾನಾ ಆಯಾಮ ಪಡೆದುಕೊಂಡಿದೆ. ಇದಕ್ಕೆ ನಿನ್ನೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೂಡ ಸುದೀಪ್ ಮಾತಿಗೆ ಕೌಂಟ್ರ ಕೊಟ್ಟಿದ್ದು ಹೇಳಿಕೆ ಹಾಗೂ ಪ್ರತಿ ಹೇಳಿಕೆಗಳು ಸ್ಯಾಂಡಲ್ವುಡ್ನಲ್ಲಿ ಚರ್ಚೆ ಹುಟ್ಟುಹಾಕಿವೆ. ಇದನ್ನೂ ಓದಿ: ಮಸ್ತ್ ಮಲೈಕಾ ಜೊತೆ ಸುಸ್ತು ಆಗೋ ಹಾಗೆ ಸ್ಟೆಪ್ ಹಾಕಿದ ಕಿಚ್ಚ
ಕಿಚ್ಚ ಸುದೀಪ್ ಯುದ್ಧದ ಮಾತಿಗೆ ದರ್ಶನ್ ಪತ್ನಿ ಟಾಂಗ್ ಕೊಟ್ರೆ, ದರ್ಶನ್ ಆಪ್ತ, ನಟ ಧನ್ವೀರ್ ಇನ್ಸ್ಟಾದಲ್ಲಿ ಪೋಸ್ಟ್ ಹಾಕಿದ್ದಾರೆ. ಇದು ಫ್ಯಾನ್ಸ್ ವಾರ್ ಮತ್ತಷ್ಟು ಹೆಚ್ಚಿಸಿದೆ.
