ವಿಜಯಪುರ: ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆ.ಆರ್.ಐ.ಡಿ.ಎಲ್.) ವತಿಯಿಂದ ವಿಜಯಪುರ ಜಿಲ್ಲಾ ಪಂಚಾಯತಿ ಆವರಣದಲ್ಲಿ ಕೆಲಸಗಾರ ಮಕ್ಕಳ ಆರೈಕೆ ಮತ್ತು ಸುರಕ್ಷತೆಗೆ ಅನುಕೂಲವಾಗುವಂತೆ ಶಿಶುಪಾಲನಾ ಕೇಂದ್ರವನ್ನು ನಿರ್ಮಿಸಲಾಗಿದ್ದು, ಇಂದು (ಸೋಮವಾರ ಡಿ. 22) ಸಚಿವ ಎಂ ಬಿ ಪಾಟೀಲ್ ರವರು ಉದ್ಘಾಟಿಸಿದರು
ಈ ಶಿಶುಪಾಲನಾ ಕೇಂದ್ರವು ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳ ಮಕ್ಕಳಿಗೆ ಸುರಕ್ಷಿತ, ಆರೈಕೆಯುತ ಹಾಗೂ ಕಲಿಕೆಗೆ ಸಹಾಯಕವಾದ ವಾತಾವರಣ ಒದಗಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ.
ಸಂಸದರಾದ ಶ್ರೀ ರಮೇಶ್ ಜಿಗಜಿಣಗಿ, ಶಾಸಕರಾದ ಶ್ರೀ ಅಶೋಕ್ ಮನಗೂಳಿ, ವಿಧಾನ ಪರಿಷತ್ ಸದಸ್ಯರಾದ ಶ್ರೀ ರವಿಕುಮಾರ್, ಜಿಲ್ಲಾ ಪಂಚಾಯತಿ ಆಡಳಿತ ವರ್ಗದ ಸದಸ್ಯರು ಹಾಗೂ ಸಿಬ್ಬಂದಿಗಳು ಹಾಜರಿದ್ದರು. ಇದನ್ನೂ ಓದಿ: ಸ್ಯಾಂಡಲ್ ವುಡ್ ನಲ್ಲಿ ಕಿಚ್ಚು ಹಚ್ಚಿದ ಕಿಚ್ಚನ ಮಾತು!
