ಶಹಾಪುರ: ಪ್ರಜಾಸೌಧ ನಿರ್ಮಾಣಕ್ಕೆ ವಿರೋಧ ಮಾಡುತ್ತಿರುವ ರೈತ ಸಂಘಟನೆಯವರು ಮತ್ತು ವಿರೋಧ ಪಕ್ಷದವರು ಕಳೆದ ಆರು ತಿಂಗಳಿನಿಂದ ಟೆಂಡರ್ ಕರೆದು, ಅನುದಾನ ಒದಗಿಸಿ, ಸ್ಥಳ ಸ್ವಚ್ಚಗೊಳಿಸಿ ಇನ್ನೇನು ಕಾಮಗಾರಿಗೆ ಅಡಿಗಲ್ಲು ಹಾಕುವ ವೇಳೆ ಈ ರೀತಿ ತಪ್ಪಾಗಿ ಬಿಂಬಿಸುತ್ತಿರುವುದು ಸರಿಯಾದದ್ದಲ್ಲ, ಸಚಿವರಿಗೆ ಬೆಂಬಲಿಸಿ ಅವರ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಬೇಕೆ ವಿನಹ ಅಡ್ಡಗಾಲು ಹಾಕಬಾರದು ಎಂದು ತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವುಮಾಹಂತ ಚಂದಾಪುರ ಹೇಳಿದರು.
ನಗರದ ಸಚಿವರ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಈಗೀರುವ ಹಳೇ ತಹಸೀಲ್ ಕಚೇರಿಯಲ್ಲಿ ಪ್ರಜಾಸೌಧ ನಿರ್ಮಾಣ ಮಾಡಿದರೆ ಸ್ಥಳ ಸಾಕಾಗುವುದಿಲ್ಲಾ. ಅಲ್ಲಿ ತಾಯಿ ಮಕ್ಕಳ ಆಸ್ಪತ್ರೆ ನಿರ್ಮಾಣಗೊಳ್ಳಲಿದೆ. ಹೆದ್ದಾರಿಯ ರಸ್ತೆ ಬದಿಯಲ್ಲಿ ಪ್ರಜಾಸೌಧ ನಿರ್ಮಾಣಗೊಂಡರೆ ಸರಿಯಾಗುತ್ತದೆ. ಇದರಿಂದ ಸಾರ್ವಜನಿಕರಿಗೂ ಸಹ ಅನುಕೂಲವಾಗಲಿದೆ. ವಿರೋಧ ಪಕ್ಷದವರು ಸುಖ ಸುಮ್ಮನೆ ಬೆಳೆ ಬೇಯಿಸಿಕೊಳ್ಳುವ ಕೆಲಸ ಮಾಡಬೇಡಿ. ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರು ಕ್ಷೇತ್ರದ ಅಭಿವೃದ್ಧಿಗೆ ಅವರದೆ ಆದ ಕೊಡುಗೆಯನ್ನು ನೀಡಿರುವ ಅವರು ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕ್ರಮಗಳನ್ನು ಕೈಗೊಳ್ಳುವುದರ ಮೂಲಕ ಜನತೆಯ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕೇವಲ ಭಾಷಣ ಮಾಡಿ ಆಶ್ವಾಸನೆ ನೀಡಿ ಹೋಗುವುದಲ್ಲ. ಭಾಷಣದಲ್ಲಿ ಹೇಳಿದ ಕೆಲಸಗಳನ್ನು ಮಾಡಿ ತೋರಿಸುವಂಥ ದಿಟ್ಟತನದ ಜನನಾಯಕರಾಗಿದ್ದು ಅವರ ಅಭಿವೃದ್ಧಿಗೆ ಕೈಜೋಡಿಸಿ ಎಂದರು.
ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರಿಂದ ಕ್ಷೇತ್ರದಾದ್ಯಂತ ಹೆಚ್ಚು ಅಭಿವೃದ್ಧಿ ಕೆಲಸಗಳು ಆಗುತ್ತಿದ್ದು ಇದನ್ನು ಸಹಿಸದೇ ಕೇಲವರು ಮನಸ್ಸಿಚ್ಛವಾಗಿ ಮಾತನಾಡುವುದು ಸರಿಯಲ್ಲಾ. ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ ತಮ್ಮ ಆಡಾಳಿತಾವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಎಷ್ಟು ಮತ್ತು ಬಿಜೆಪಿ ಮುಖಂಡರು ಸಹ ರಾಜಕೀಯವಾಗಿ ಬಿಟ್ಟು ಅಭಿವೃದ್ಧಿಯ ಪರವಾಗಿ ನಿಂತು ಸಚಿವರಿಗೆ ಬೆಂಬಲಿಸಿ. ಅದನ್ನು ಬಿಟ್ಟು ಅಭಿವೃದ್ಧಿ ಮಾಡುವವರಿಗೆ ದೂರುವುದು ಸರಿಯಾದದ್ದಲ್ಲಾ. ಇಲ್ಲಿಯವರೆಗೆ ಅದೇಷ್ಟು ಪ್ರತಿಭಟನೆಗಳಲ್ಲಿ ನೀವು ಪಾಲ್ಗೊಂಡಿದ್ದೀರಿ ಇದೀಗ ನಮ್ಮ ಜನಪ್ರಿಯ ಸಚಿವರಿಂದ ಅಭಿವೃದ್ಧಿ ಆಗುವ ವೇಳೆ ಅಡ್ಡಿಪಡಿಸುತ್ತಿರುವ ವಿರೋಧ ಪಕ್ಷದವರ ನಡೆ ಸರಿಯಲ್ಲಾ ಎಂದು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಲ್ಲಾ ಪಟೇಲ್ ಮಕ್ತಾಪುರ ಹೇಳಿದರು.
ಈ ಸಂದರ್ಭದಲ್ಲಿ ನಗರ ಯೋಜನ ಪ್ರಾಧಿಕಾರ ಅಧ್ಯಕ್ಷ ಸಿದ್ದು ಆರಭೋಳ, ಡಾ.ನೀಲಕಂಠ ಬಡಿಗೇರ, ಮಲ್ಲಣ್ಣ ಉಳ್ಳಂಡಗೇರಿ, ಮಹಾದೇವಪ್ಪ ಸಾಲಿಮನಿ, ಶಿವುಕುಮಾರ ತಳವಾರ, ಮಹೇಶ ಸೇರಿದಂತೆ ಇತರರು ಇದ್ದರು.
