ಸಚಿವ ದರ್ಶನಾಪುರ ಅವರ ಅಭಿವೃದ್ಧಿ ಕೆಲಸಕ್ಕೆ ಕೈಜೋಡಿಸಿ
ಶಹಾಪುರ: ನಗರದ ಪ್ರಥಮ ದರ್ಜೆ ಕಾಲೇಜಿನ ಜಾಗದಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ವಿರೋಧಿಸಿ ಪ್ರಗತಿಪರ ಸಂಘಟನೆಗಳು ಚಳುವಳಿ ಆರಂಭಿಸಿದ್ದಾರೆ, ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ಹಸ್ತಕ್ಷೇಪ ಮಾಡದೇ ಸಚಿವರಿಗೆ ಸಹಕಾರ ನೀಡಿ ಅವರೊಟ್ಟಿಗೆ ಕೈಜೋಡಿಸಿ ಕೈಬಲಪಡಿಸುವ ಕೆಲಸ ಸಂಘಟಕರು ಮಾಡಬೇಕಿದೆ ಎಂದು ಹಿರಿಯ ದಲಿತ ಮುಖಂಡ ಮಲ್ಲಿಕಾರ್ಜುನ ಪೂಜಾರಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅಭಿಮಾನಿ ಬಳಗದಿಂದ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಈಗಾಗಲೇ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾದ ಪ್ರಗತಿಯಲ್ಲಿರುವ ಶಾಶ್ವತ ಕುಡಿಯುವ ನೀರು, ಒಳಚರಂಡಿ, ಪ್ರಜಾಸೌಧ, ಸೇರಿ ವಿವಿಧ ಕಾಮಗಾರಿಗಳನ್ನು ಆದಷ್ಟು ಸಮಯದೊಳಗೆ ಅವುಗಳನ್ನು ಕಾರ್ಯಗತಗೊಳಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪರ-ವಿರೋಧಗಳು ಸಹಜವಾಗಿದ್ದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರದ ನಿಯಮನುಸಾರ ತ್ವರಿತಗತಿಯಲ್ಲಿ ಕಾಮಗಾರಿಗಳನ್ನು ಮುಕ್ತಾಯಗೊಳಿಸಿ. ಈಗಾಗಲೇ ಸರ್ಕಾರವು ಪ್ರಜಾಸೌಧ ಶಿಕ್ಷಣ ಇಲಾಖೆಯಿಂದ ಕಂದಾಯ ಇಲಾಖೆಗೆ ವರ್ಗಾಹಿಸಿದ್ದು, ನಿಯಮದಡಿಯಲ್ಲಿ ಕೂಡಲೇ ಪ್ರಾರಂಭಿಸಬೇಕು. ಪ್ರತಿಭಟನಕಾರರು ಅಭಿವೃದ್ದಿಯಲ್ಲಿ ಹಸ್ತಕ್ಷೇಪ ಮಾಡದೇ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಪ್ರಜಾಸೌಧಕ್ಕೆ ವಿರೋಧ, 2ನೇ ದಿನಕ್ಕೆ ಕಾಲಿಟ್ಟ ಧರಣಿ
ಮುಖಂಡರಾದ ಶ್ರೀಶೈಲ ಹೊಸ್ಮನಿ ಮಾತನಾಡಿ ಕಲ್ಯಾಣ ಕರ್ನಾಟಕದಲ್ಲಿ ತಾಲೂಕ ಮಟ್ಟದಲ್ಲಿ ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಏಕೈಕ ತಾಲೂಕು ನಮ್ಮದಾಗಿದ್ದು, ಸದಾ ಅಭಿವೃದ್ಧಿ ಪರ ಚಿಂತನೆಯನ್ನು ಹೊಂದಿರುವ ಸಚಿವರು ನಮ್ಮ ಕ್ಷೇತ್ರಕ್ಕೆ ದೊರಕಿದ್ದಾರೆ. ಅವರ ಕಾರ್ಯಕ್ಕೆ ಶಕ್ತಿ ತುಂಬುವ ಕೆಲಸ ಮಾಡಬೇಕಿರುವುದು ನಮ್ಮಗಳ ಜವಾಬ್ದಾರಿ. ಸುಸಜ್ಜಿತ ಪ್ರಜಾಸೌಧ ನಿರ್ಮಿಸಿ ತಡೆಗೊಡೆ ಮಾಡಿ ಶೈಕ್ಷಣೀಕವಾಗಿ ತೊಂದರೆಯಾಗದ ರೀತಿಯಲ್ಲಿ ನಿರ್ಮಿಸಿ ಅನುಕೂಲ ಮಾಡಬೇಕು ಎನ್ನುವ ಆಶಾಭಾವನೆ ಎಲ್ಲರಲ್ಲೂ ಇದೆ ಎಂದರು.
ಪ್ರಜಾಸೌಧ ನಿರ್ಮಾಣಕ್ಕೆ ಕೈಜೋಡಿಸಿ
ಕಾಲೇಜಿನ 88 ಎಕರೆ ಜಮೀನಿನಲ್ಲಿ ತಾಲೂಕ ಆಡಳಿತ ಕಛೇರಿಗೆ 4 ಎಕರೆ ಜಮೀನು ಮಂಜುರಾತಿ ಪಡೆದು, ಟೆಂಡರ್ ಕರೆದು ಎಲ್ಲಾ ಕಚೇರಿಗಳು ಒಂದೇ ಸೂರಿನಲ್ಲಿ ಕೆಲಸ ಮಾಡಲು ಬಹುದಿನಗಳ ಬೇಡಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಪ್ರಯತ್ನ ಪಟ್ಟಿರುವುದು ಸ್ವಾಗತಾರ್ಹ. ಆದರೆ ಕೇಲ ಜನರು ಆಡಳಿತ ಕಚೇರಿಗೆ ವಿರೋಧ ಮಾಡುತ್ತಿರುವುದು ಸರಿಯಾದ ಕ್ರಮವಲ್ಲಾ. ಇನ್ನೊಂದು ಕಡೆಗೆ ಹಳೆ ತಹಸೀಲ್ ಕಛೇರಿ ಕಟ್ಟಡವನ್ನು ತೆರವುಗೊಳಿಸಿ ಅಲ್ಲಿಯೇ ಆಡಳಿತ ಕಛೇರಿ ನಿರ್ಮಿಸಬೇಕೆಂಬ ಧರಣಿಯನ್ನು ಪುನರ್ ಪರಿಶೀಲನೆ ಮಾಡಿ ಈಗಾಗಲೇ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮಂಜೂರಾಗಿರುವುದು ಬಡ ಹೆಣ್ಣು ಮಕ್ಕಳಿಗೆ ಅನುಕೂಲವಾದ ಸ್ಥಳವಾಗಿದೆ. ಮತ್ತು 10 ವರ್ಷಗಳಲ್ಲೇ ಪಟ್ಟಣವು ಸಹ ಅಭಿವೃದ್ಧಿಗೆ ಸಾಕ್ಷಿಯಾಗುತ್ತದೆ ಎಂದ ಚೆನ್ನಪ್ಪ ಆನೇಗುಂದಿ ಹಿರಿಯ ರೈತ ಮುಖಂಡರು ಹೇಳಿದರು.
ಈ ಸಂದರ್ಭದಲ್ಲಿ ಭೀಮರಾಯ ಹೊಸ್ಮನಿ, ರಾಜಾ ಪಟೇಲ್, ಶಿವುಕುಮಾರ ತಳವಾರ, ಹೊನ್ನಪ್ಪ ಗಂಗನಾಳ, ಸುಭಾಷ ತಳವಾರ , ಭೀಮಣ್ಣ ಬೂದನೂರ, ಕಾಳಪ್ಪ ಕೂಳಗೇರಿ, ಶರಣಪ್ಪ ಬೂತ್ಥಾಳಿ, ಮರೆಪ್ಪ ಸಲಾದಪುರ ಸೇರಿದಂತೆ ಇತರರು ಇದ್ದರು.
