ಬೆಳಗಾವಿ: ಸ್ವಾತಂತ್ರ್ಯ ಹೋರಾಟಗಾರ ಜೈಲು ವಾಸ ಅನುಭವಿಸಿ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧಿಯವರ ಹೆಸರು ಬದಲಿಸುವುದು ಉಚಿತ ವಲ್ಲಾಇದು ಬಿಜೆಪಿ ಯವರ ದುರುದ್ದೇಶದ ಪಿತೂರು ಅವರ ಆಡಳಿತ ಕೊನೆಕಾಲಗಟ್ಟದಲ್ಲಿದೆ. ಕಳೆದ ಬಾರಿಯೆ ಅವರ ಅಧಿಕಾರ ಅಂತ್ಯ ವಾಗಿತ್ತು ಮಿತ್ರ ಪಕ್ಷಗಳ ಸಹಕಾರದಿಂದ ಸರ್ಕಾರ ರಚಿಸಿದ್ದಾರೆ ಎಂದು ಕೆಎಚ್ ಮುನಿಯಪ್ಪ ಹೇಳಿದರು.
ಬೆಳಗಾವಿ ಅಧಿವೇಶನದಲ್ಲಿ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ನೇತೃತ್ವದ ಸಮ್ಮಿಶ್ರ ಸರ್ಕಾರವು ಅಧಿಕಾರಕ್ಕೆ ಬರಲಿದೆ ಆಗ ಇವೆಲ್ಲಾ ಮತ್ತೆ ಬದಲಾವಣೆ ಮಾಡುತ್ತೇವೆ.
ಕಳೆದ ಬಾರಿಯೆ ಜನರು ಬಿಜೆಪಿ ಸರ್ಕಾರ ತಿರಸ್ಕರಿಸಿದ್ದಾರೆ ಮುಂದೆ ನಮ್ಮ ನಾಯಕ ರಾಹುಲ್ ಗಾಂಧಿ ಪ್ರಧಾನಿಯಾಗಲಿದ್ದಾರೆ ಆಗ ಎಲ್ಲವೂ ಸರಿಯಾಗಲಿದೆ
ರಾಮ ದೇವರು ಅವರ ಹೆಸರು ಯಾವುದಕ್ಕೂ ಬೇಕಾದರು ಇಡಬಹುದು ನಮ್ಮ ಅಭ್ಯಂತರವಿಲ್ಲಾ ಆದರೆ ಮಹಾತ್ಮ ಗಾಂಧಿಯವರ ಹೆಸರು ಬದಲಿಸಿ ಇಡುವುದು ಸರಿಯಲ್ಲಾ ಇದು ರಾಜಕೀಯ ದುರುದ್ದೇಶ ರಾಜಕೀಯದಲ್ಲಿ ಯಾರೂ ಶಾಶ್ವತ ವಾಗಿ ಅಧಿಕಾರದಲ್ಲಿರಲು ಸಾಧ್ಯವಿಲ್ಲ ನಾವಾಗಲಿ ಅವರಾಗಲಿ ಮುಂದೆ ನಮ್ಮ ಕಾಂಗ್ರೆಸ್ ಪಕ್ಷದ ನೇತೃತ್ವದ ಸಮ್ಮಿಶ್ರ ಸರ್ಕಾರ ರಚನೆಯಾಗಲಿದೆ ಆಗ ಇವೆಲ್ಲಾ ಮತ್ತೆ ಬದಲಾವಣೆಯಾಗಲಿದೆ ಎಂದರು.
