ಬೆಂಗಳೂರು: ಕಿರುತೆರೆ ನಟಿ ಗೀತಾ ಭಾರತಿ ಭಟ್ ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಹೌದು, ಜೀ ಕನ್ನಡದಲ್ಲಿ ಪ್ರಸಾರವಾದ ಬ್ರಹ್ಮಗಂಟು ಧಾರಾವಾಹಿಯಲ್ಲಿ ಗುಂಡಮ್ಮನ ಪಾತ್ರದ ಮೂಲಕ ಇಡೀ ಕರ್ನಾಟಕ ಜನತೆಯ ಮನೆ ಮಾತಾಗಿದ್ದ ಕಿರುತೆರೆಯ ನಟಿ ಗೀತಾ ಭಾರತಿ ಭಟ್ ಅವರು ಇತ್ತೀಚಿಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾ.
ಯೆಸ್….ಗೀತಾ ಭಾರತಿ ಭಟ್ ಅವರು ಸೈಲೆಂಟ್ ಆಗಿ ವಿವಾಹವಾಗಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ. ಆದರೆ ಅವರು ಮದುವೆಯಾದವರು ಯಾರು, ಇದು ಪ್ರೇಮ ವಿವಾಹವೋ ಅಥವಾ ಅರೆಂಜ್ಡ್ ವಿವಾಹವೋ ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಇದನ್ನೂ ಓದಿ: ಅರಿಶಿಣ ಶಾಸ್ತ್ರದಲ್ಲಿ ಕಿಚ್ಚನ ಮಗಳು ಫುಲ್ ಮಿಂಚಿಂಗ್!
ಗೀತಾ ಭಾರತಿ ಭಟ್ ಅವರು ದೇಹದ ವಿಚಾರವಾಗಿ ಹಲವು ಬಾರಿ ಬಾಡಿ ಶೇಮಿಂಗ್ಗೆ ಒಳಗಾಗಿದ್ದು, ಈ ರೀತಿಯ ಟೀಕೆಗಳನ್ನು ಅವರು ಸಾರ್ವಜನಿಕವಾಗಿ ಖಂಡಿಸಿದ್ದಾರೆ. ದೇಹದ ಆಧಾರದ ಮೇಲೆ ಅವಮಾನಿಸುವುದು ತಪ್ಪು ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.
ಏನೇ ಆಗಲಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವುದಂತೂ ಅವರ ಅಭಿಮಾನಿಗಳಲ್ಲಿ ಸಂತಸ ತಂದಿದೆ.
