ಬೆಂಗಳೂರು: ವಿಶ್ವದ ಪ್ರಮುಖ ಬಹು- ಕ್ರೀಡಾ ಬ್ರಾಂಡ್ಗಳಲ್ಲಿ ಒಂದಾಗಿರುವ ಡೆಕಾಥ್ಲಾನ್ ಸಂಸ್ಥೆಯು ಇಂದು ವೈಟ್ಫೀಲ್ಡ್ನಲ್ಲಿದ್ದ ತನ್ನ ಬಹುದೊಡ್ಡ ಮಳಿಗೆಯನ್ನು ಪುನರ್ ನವೀಕರಿಸಿ ಉದ್ಘಾಟಿಸಿದೆ.
ಭಾರತದ ಅತಿದೊಡ್ಡ ಡೆಕಾಥ್ಲಾನ್ ಮಳಿಗೆಯಾಗಿದ್ದು, ಇಲ್ಲಿ ಬಹು ಕ್ರೀಡಾ ಕೋರ್ಟ್ ಗಳು, ತರಬೇತಿ ಕೋರ್ಸ್ ಗಳು, ಸುಸ್ಥಿರ ಸೇವೆಗಳು ಮತ್ತು ಆಕರ್ಷಕ ಶಾಪಿಂಗ್ ಅನುಭವ ಲಭ್ಯವಿದ್ದು, 360 ಡಿಗ್ರಿ ಕ್ರೀಡಾ ಅನುಭವ ಒದಗಿಸಲಾಗುತ್ತದೆ.
60,000 ಚದರ ಅಡಿ ವಿಸ್ತೀರ್ಣದ ಈ ಆಕರ್ಷಕ ಮಳಿಗೆಯಲ್ಲಿ ಎಲ್ಲಾ ಕ್ರೀಡೆಗಳನ್ನೂ ಒಂದೇ ಸೂರಿನಡಿ ಪರಿಚಯಿಸಲಾಗಿದ್ದು, ಈ ಮಳಿಗೆಯು ಬೆಂಗಳೂರಿನ ಕ್ರೀಡಾ ಕ್ಷೇತ್ರಕ್ಕೆ ಹೊಸ ಹುಮ್ಮಸ್ಸು ತುಂಬಲಿದೆ.
ಮಳಿಗೆ ಉದ್ಘಾಟನೆ ಸಂದರ್ಭದಲ್ಲಿ ಮಾತನಾಡಿದ ಡೆಕಾಥಾನ್ ಇಂಡಿಯಾದ ಸಿಇಓ ಶ್ರೀ ಸಂಕರ್ ಚಟರ್ಜಿ ಅವರು, “ಕಳೆದ ಹತ್ತು ವರ್ಷಗಳಲ್ಲಿ ಭಾರತದಲ್ಲಿ ಕ್ರೀಡಾ ಕ್ಷೇತ್ರವು ತುಂಬಾ ಬದಲಾಗಿದೆ. ನಾವು ಆ ಬದಲಾವಣೆಯನ್ನು ಸಮೀಪದಿಂದಲೇ ನೋಡಿದ್ದೇವೆ. ಕೆಪಿಎಂಜಿ ವರದಿ ಪ್ರಕಾರ ‘ಪೇ-ಆಂಡ್-ಪ್ಲೇ’ (ಟರ್ಫ್) ಉದ್ಯಮ ತೀವ್ರವಾಗಿ ಬೆಳೆಯುತ್ತಿದೆ. ಹೆಚ್ಚು ಜನರು ಸ್ವಯಂಪ್ರೇರಿತವಾಗಿ ಕ್ರೀಡೆ ಆಡಲು ಮುಂದಾಗುತ್ತಿದ್ದಾರೆ. ಪ್ರತೀ ಡೆಕಾಥಾನ್ ಮಳಿಗೆಯನ್ನೂ ಆಕರ್ಷಕ, ಸುಸ್ಥಿರ ಮತ್ತು ಗ್ರಾಹಕರ ಬದಲಾಗುತ್ತಿರುವ ಅಗತ್ಯಗಳಿಗೆ ತಕ್ಕಂತೆ ಮತ್ತು ಭೂಮಿಗೆ ಸಂಪೂರ್ಣವಾಗಿ ಹೊಂದಿಕೊಳ್ಳುವಂತೆ ಮಾಡುವುದೇ ನಮ್ಮ ಗುರಿಯಾಗಿದೆ” ಎಂದು ತಿಳಿಸಿದರು.
ಡೆಕಾಥ್ಲಾನ್ ಇಂಡಿಯಾದ ರಿಟೇಲ್ ಲೀಡರ್ ಶ್ರೀ ಗಿಲ್ಲೆಸ್ ಗೌಡೆಮಾರ್ಡ್ ಅವರು ಮಾತನಾಡಿ, “ಭಾರತದ ಕ್ರೀಡಾ ರಿಟೇಲ್ ವಲಯ ತೀವ್ರವಾಗಿ ಬದಲಾಗುತ್ತಿದೆ. ಹೊಸ ತಲೆಮಾರಿನ ಬಳಕೆದಾರರು ಸುಲಭ ಲಭ್ಯತೆ, ತಜ್ಞರ ಮಾರ್ಗದರ್ಶನ ಮತ್ತು ಮಳಿಗೆಯೊಳಗೇ ಆಕರ್ಷಕ ಅನುಭವ ಬಯಸುತ್ತಾರೆ. ಈ ಮಳಿಗೆಯ ಪುನರ್ ನವೀಕರಣ ಭವಿಷ್ಯದತ್ತ ಒಂದು ವಿನೂತನ ಹೆಜ್ಜೆಯಾಗಿದ್ದು, ಆಕರ್ಷಕ ಅನುಭವ, ತಜ್ಞ ಮಾರ್ಗದರ್ಶನ ಮತ್ತು ಎಲ್ಲಾ ಚಾನಲ್ ಗಳ ಸೌಲಭ್ಯಕ್ಕೆ ಆದ್ಯತೆ ನೀಡುವ ಉನ್ನತ ರಿಟೇಲ್ ಸ್ವರೂಪವನ್ನು ಪರಿಚಯಿಸಲಾಗುತ್ತಿದೆ. ಬೆಂಗಳೂರು ಯಾವಾಗಲೂ ಟ್ರೆಂಡ್ ನಲ್ಲಿ ಮುಂದಿದ್ದು, ಈ ವಿಸ್ತರಣಾ ಕಾರ್ಯವು ಚುರುಕಾಗಿ ಮತ್ತು ವೇಗವಾಗಿ ಬೆಳೆಯುತ್ತಿರುವ ಕ್ರೀಡಾ ಸಮುದಾಯಕ್ಕೆ ಸೇವೆ ಸಲ್ಲಿಸುವ ನಮ್ಮ ಬದ್ಧತೆಯನ್ನು ಇನ್ನಷ್ಟು ಬಲಪಡಿಸುತ್ತದೆ” ಎಂದು ಹೇಳಿದರು.
