Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಕಮಿಷನ್ ದಂಧೆಗೆ ಗುತ್ತಿಗೆದಾರರು ತತ್ತರ!
  • Uncategorized

ಕಮಿಷನ್ ದಂಧೆಗೆ ಗುತ್ತಿಗೆದಾರರು ತತ್ತರ!

Praja Vahini November 17, 2025
WhatsApp Image 2025-11-17 at 16.01.02
Spread the love

ಶಹಾಪುರ: ಜಲಜೀವನ ಮಿಷನ್ (ಜೆಜೆಎಂ) ಮನೆಮನೆಗೆ ಶುದ್ದ ಕುಡಿಯುವ ನೀರಿನ ಈ ಯೋಜನೆಯಡಿ ಕೇಂದ್ರ ಸರ್ಕಾರ ಶೇ.50 ರಷ್ಟು ರಾಜ್ಯ ಸರ್ಕಾರ ಶೇ.50 ಅನುಪಾತದಲ್ಲಿ ಗುತ್ತಿಗೆದಾರರು ಕೆಲಸ ಮಾಡಿದ್ದು ಕಳೆದ 3 ವರ್ಷಗಳಿಂದ ಬಾಕಿ ಬಿಲ್ ಉಳಿಸಿಕೊಂಡಿರುವ ಸರ್ಕಾರಗಳಿಂದ ಗುತ್ತಿಗೆದಾರರು ಸಾಲದಲ್ಲೇ ಜೀವ ಕಳೆದುಕೊಳ್ಳುವ ಸ್ಥೀತಿಗೆ ಬಂದಿದ್ದು, ಕೂಡಲೇ ವಾರದೊಳಗೆ ಬಾಕಿ ಬಿಲ್ ಪಾವತಿಸಬೇಕು ಎಂದು ಆಗ್ರಹಿಸಿ ಸುವರ್ಣ ಕರ್ನಾಟಕ ಕಾರ್ಯನಿರತ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಜೋಗಿಜಯಪ್ಪ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಪತ್ರ ಸಲ್ಲಿಸಿದರು.

ಇಂದು (ಸೋಮವಾರ ನ.17) ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಸುವರ್ಣ ಕರ್ನಾಟಕ ಕಾರ್ಯನಿರತ ಗುತ್ತಿಗೆದಾರರ ಸಂಘದ ವತಿಯಿಂದ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿ ಮಾತನಾಡಿ, ಕಾಮಗಾರಿ ಮುಗಿದ ಹರ್‌ಘರ್‌ಜಲ್ ಘೋಷಣೆ ಕಾಮಗಾರಿ ಹಸ್ತಾಂತರ ಹಾಗೂ ಎಸ್‌ಕ್ಯೂಎಂನ್ನು ಇಲಾಖೆಯಿಂದಲೇ ಮಾಡಿಸಲು ಕ್ರಮ ಕೈಗೊಳ್ಳಬೇಕು. ಕಾಮಗಾರಿ ಮುಗಿದ ಮೇಲೆ ಅಂತಿಮ ಬಿಲ್ಲು ನಿಡಬೇಕು ಹಾಗೂ ವ್ಯತ್ಯಾಸದ ಹಣವನ್ನು ಹಿಂದಿರುಗಿಸಲು ಕ್ರಮ ಕೈಗೊಳ್ಳಬೇಕು.

ಕಾಮಗಾರಿಯ ಬಿಲ್‌ನಲ್ಲಿ ಕಟಾವು ಮಾಡಿದ ಶೇ.10 ಕಮ್ಯುನಿಟಿ ಕಾಂಟ್ರಿಬ್ಯುಷನ್ ಹಣವನ್ನು ಪಾವತಿಸಬೇಕು. ಕಡಿತವನ್ನು ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳಬೇಕು.

ಬಿಲ್ ಪಾವತಿಸುವ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಪಾಲು ಹಾಗೂ ಕೇಂದ್ರ ಸರ್ಕಾರದ ಪಾಲು ಎಂದು ನೆಪ ಹೇಳದೆ ಟೆಂಡರು ಬಿಲ್ಲನ್ನು ಪಾವತಿಸಲು ಕ್ರಮ ಕೈಗೊಳ್ಳಬೇಕು. ಕಾಮಗಾರಿ ಧೃಢಿಕರಣ ಪತ್ರವನ್ನು ೧೦ವರ್ಷದ ವರೆಗೆ ಪರಿಗಣಿಸಬೇಕು. ಅರಣ್ಯ ಇಲಾಖೆಯಲ್ಲಿ ಪಿಡಬ್ಯೂಡಿ ಪರವಾನಗಿಯನ್ನು ಪರಿಗಣಿಸಬೇಕು ಎಂದು ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರು.

ಡಾ. ಶಾಲಿನಿ ರಜನೀಶ ಅವರಿಗೆ ಮನವಿ ಪತ್ರ ಸಲ್ಲಿಕ್ಕೆ

ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು, ಮನವಿ ಸ್ವೀಕರಿಸಿ ಸಿಎಂ ಅವರ ಗಮನಕ್ಕೆ ತಂದು ಬಿಲ್ ಪಾವತಿಸುವ ಕ್ರಮ ಕೈಗೊಳ್ಳಲಾಗುವುದು ಎಂದರು. ಪ್ರತಿಭಟನ ಸ್ಥಳಕ್ಕೆ ಪ್ರಧಾನ ಅಭಿಯಂತರರಾದ ಅಶೋಕ ಹೊಸಪೇಟ ಅವರು ಬೇಟಿ ನೀಡಿ ಮನವಿ ಪತ್ರ ಸ್ವೀಕರಿಸಿ ಮಾತನಾಡಿ ಸರ್ಕಾರದ ಕಾರ್ಯದರ್ಶಿಗಳ, ಆಯುಕ್ತರ ಗಮನಕ್ಕ ತಂದು ಕೂಡಲೇ ಗುತ್ತಿಗೆದಾರರ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.

ಕಾಂಗ್ರೆಸ್ ಸರ್ಕಾರದಿಂದ ಗುತ್ತಿಗೆದಾರರ ಬದುಕು ಬೀದಿಗೆ

ಕಲ್ಯಾಣ ಕರ್ನಾಟಕ ಭಾಗದಲ್ಲಿ ಗುತ್ತಿಗೆದಾರರ ಸಮಸ್ಯೆಗಳು ಎತ್ತೆಚ್ಚವಾಗಿದ್ದು, ಈಗಾಗಲೇ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೂ ಸಹ ಮನವಿ ಪತ್ರ ಸಲ್ಲಿಸಲಾಗಿದೆ ಆದರೂ ಸಮಸ್ಯೆ ಬಗೆಹರಿಸದೇ ಕಾಲಹರಣ ಮಾಡುತ್ತಿದ್ದು, ಅಸಮರ್ಥರಾಗಿ ಗುತ್ತಿಗೆದಾರರಿಗೆ ಸ್ಪಂದಿಸುತ್ತಿಲ್ಲಾ. ಲಂಚದಾಹಿ ಕೊಲೆಗಡುಕರಂತೆ ಆಗಿರುವ ಕಾಂಗ್ರೆಸ್ ಸರ್ಕಾರದಿಂದ ಗುತ್ತಿಗೆದಾರರ ಬದುಕು ಬೀದಿಗೆ ಬೀಳುವಂತಾಗಿದೆ ಎಂದು ಗುತ್ತಿಗೆದಾರರು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಗುತ್ತಿಗೆದಾರರಿಗೆ ಬಾಕಿ ಬಿಲ್ ಪಾವತಿಸಿ ಇಲ್ಲವೇ, ಸರ್ಕಾರ ಸಾವಿನ ಗ್ಯಾರಂಟಿ ನೀಡಲಿ!

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಯಮನಪ್ಪ ಪೂಜಾರಿ, ಕಾರ್ಯದರ್ಶಿ ಎಂ.ಪಿ ಶಶಿಭೂಷಣ, ಉಮೇಶ ಮೆಟಗಾರ, ಮಾಳಿಂಗರಾಯ ತಾಳಿಕೋಟಿ, ಸಂಗಣ್ಣ ದೊಡ್ಮನಿ, ಹಣಮಂತ್ರಾಯಗೌಡ ಗಂಗನಾಳ, ಪರತರೆಡ್ಡಿ ಮಾಲಿ ಪಾಟೀಲ, ಭೀಮರಾಯ ಭಂಡಾರಿ, ಸೋಮರಾಯ ಪೂಜಾರಿ, ಮಲ್ಲಿಕಾರ್ಜುನ ಗುಂಡಗುರ್ತಿ, ಶರಬಣ್ಣ ಮದ್ರಕಿ, ಸಿದ್ದಣ್ಣ ಹುಂಡೆಕಲ್, ಸಂತೋಷ ಮೇತ್ರಿ, ಅಂಬ್ಲಪ್ಪ ಮದಿರಿ, ಬಾಪುಗೌಡ ಸೈದಾಪುರ, ಹೊನ್ನಯ್ಯ ಗಂಗನಾಳ, ದೇವುನಾಯಕ ಯಾದಗಿರಿ, ರಾಯಪ್ಪ ಹೊಸಮನಿ, ಮಹಾಂತೇಶ ದೊಡ್ಮನಿ, ಮೌನೇಶ, ರಾಯಪ್ಪ ಮೇಟಿ, ಮಾರುತಿ, ಮಾಳಪ್ಪ ಕವತಿ, ಭೀಮರಾಯ ಜುನ್ನಾ, ಸಂಗಣಗೌಡ, ಮಹಾಂತೇಶ ಸೈದಾಪುರ, ದೇವಪ್ಪ ಪೂಜಾರಿ, ಗೊಲ್ಲಯ್ಯ, ಅಶೊಕ, ಯಶವಂತರಾಯಗೌಡ, ಚಾಂದಪಾಶ, ಸುಜೀತ ಪಾಟೀಲ್, ಶಿವನಗೌಡ, ಮಹೇಶ ರೆಡ್ಡಿ, ಈರಣಗೌಡ, ಡಿ.ಎಸ್ ಮಾವನೂರ, ದೇವಿಂದ್ರಪ್ಪ ಕಾಶಿರಾಜ, ರಾಯಪ್ಪ ಗಂಗನಾಳ ಸೇರಿದಂತೆ ಇದ್ದರು.

About the Author

Praja Vahini

Editor

View All Posts

Spread the love

Post navigation

Previous: ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥವು ಪಾರದರ್ಶಕತೆಗೆ ನಾಂದಿ‌ ಹಾಡಿದೆ: ರಾಮಲಿಂಗಾ ರೆಡ್ಡಿ
Next: ನಿರೂಪಣೆ ವೃತ್ತಿಗೆ ಅನುಶ್ರೀ ನಿವೃತ್ತಿ!?

Views:

613

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.