ಬೆಂಗಳೂರು: ಚಲನಚಿತ್ರ ನಟಿಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದ ಅರವಿಂದ್ ರೆಡ್ಡಿ ಅವರನ್ನು ಪೊಲೀಸ್ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಇನ್ನು ವಿಚಾರಣೆ ವೇಳೆ ಅರವಿಂದ್ ರೆಡ್ಡಿ ಅವರು, ನಾನು ಅವಳಿಗೆ ಸಿಕ್ಕಾಪಟ್ಟೆ ಹಣ ಖರ್ಚು ಮಾಡಿ ಸೈಟು, ಕಾರು ಕೊಡಿಸಿದ್ದೇನೆ ಆದರೆ ಅವಳು ಮಾತ್ರ ಬೇರೆಯವರೊಂದಿಗೆ ಕಾಣಿಸಿಕೊಳ್ತಿದ್ಲು ಇದು ಎಷ್ಟು ಸರಿ ಎಂದು ನಿರ್ಮಾಪಕ ಹಾಗೂ ಉದ್ಯಮಿ ಯಾಗಿರುವ ಅರವಿಂದ್ ವೆಂಕಟೇಶ ರೆಡ್ಡಿ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ನಟಿಗೆ ಲೈಂಗಿಕ ಕಿರುಕುಳ ನಿರ್ಮಾಪಕ ಅರೆಸ್ಟ್
ಗೋವಿಂದರಾಜನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸುಬ್ರಹ್ಮಣಿ ಆರೋಪಿಯ ವಿಚಾರಣೆ ನಡೆಸಿದ್ದು, ಈ ವೇಳೆ ಕೆಲವು ಮಾಹಿತಿ ನೀಡಿದ್ದಾನೆ. ಅವಳು ನನ್ನ ಬಿಟ್ಟು ಬೇರೆ ವ್ಯಕ್ತಿ ಜೊತೆಗೆ ಕಾಣಿಕೊಳ್ಳುತ್ತಿದ್ದಳು. ನಾನು ಯಾವುದೇ ಕಿರುಕುಳ ನೀಡಿಲ್ಲ, ಅವಳೇ ನನಗೆ ಮೋಸ ಮಾಡಿದ್ದಾಳೆಂದು ಆರೋಪಿ ಹೇಳಿಕೊಂಡಿದ್ದಾನೆ.
