ಶಹಾಪುರ: ನಗರದ ಗಾಂಧಿಚೌಕ್ನಲ್ಲಿರುವ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಪಾಲಕರು ಹಾಗೂ ಎಸ್ಡಿಎಂಸಿ ಸಭೆ ಜರುಗಿತು. ಹಾಗೂ ಮಕ್ಕಳ ದಿನಾಚರಣೆ ಹಿನ್ನಲೇ ಪಂಡಿತ್ ಜವಾಹರಲಾಲ್ ನೆಹರೂರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಿಆರ್ಪಿ ವೀರಭದ್ರಯ್ಯ, ಶಾಲೆಯ ಮುಖ್ಯ ಗುರುಗಳಾದ ಆರೀಫ್ ಅಹ್ಮದ್, ಶಾಲೆಯ ಎಸ್ಡಿಎಂಸಿ ಅಧ್ಯಕ್ಷರು ಹಾಗೂ ಜಿಲ್ಲೆಯ ವಕ್ಫ ಬೋರ್ಡ್ ಉಪಾಧ್ಯಕ್ಷ ಅವದ್ ಬೀನ್ ಚಾವುಶ, ಶಬಾನ ಬೇಗಂ, ಖಾಜಾಫೀರಾ, ಫಾತೀಮಾ ಪರ್ವಿನ್ ಬೇಗಂ ಶಿಕ್ಷಕಿ ವಿಜಯಲಕ್ಷ್ಮಿ, ಅನೀಸ್ ಫಾತೀಮಾ ಸೇರಿದಂತೆ ವಿದ್ಯಾರ್ಥಿಗಳು ಇದ್ದರು. ಇದನ್ನೂ ಓದಿ: ಸಿಲಿಕಾನ್ ಸಿಟಿಗೆ ಸುರಂಗ ರಸ್ತೆ ಬೇಡ, ಮೆಟ್ರೋ ಯೋಜನೆ ವಿಸ್ತರಿಸಿ: ಆರ್.ಅಶೋಕ್
