ಶಹಾಪುರ: ಕನಕ ಭವನ ನಿರ್ಮಾಣದಿಂದ ಸಮಾಜದ ಬಹುದಿನಗಳ ಕನಸು ಈಡೇರಲಿದೆ. 1 ವರ್ಷದಲ್ಲಿ ಭವನ ನಿರ್ಮಾಣ ಕೆಲಸ ಮುಗಿಯಲಿದ್ದು, ಭವನವು ನಿಮ್ಮ ವ್ಯಾಪ್ತಿಯಲ್ಲಿಯೇ ಇರಲಿದ್ದು, ಮುಂದೆ ಬಡವರಿಗೆ ಕಡಿಮೆ ಹಣ, ಅನುಕೂಲ ಇದ್ದವರಿಂದ ಹೆಚ್ಚು ಹಣ ನಿಗದಿಸಿ ಬರುವಂತ ಲಾಭವನ್ನು ಬಡ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ಕೆಲಸ ಆಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.
ನಗರದಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿಯಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಕನಕ ಭವನ ನಿರ್ಮಾಣಕ್ಕೆ ಅಡಿಗಲ್ಲು ನೇರವೆರಿಸಿ ಮಾತನಾಡಿದ ಅವರು, ನಮ್ಮ ಮೇಲೆ ವಿಶ್ವಾಸವಿರಲಿ. ಭವನಕ್ಕಾಗಿ ಇನ್ನೂ ಒಂದು ಎಕರೆಗಿಂತ ಹೆಚ್ಚು ಜಾಗ ನೀಡಿ ಆರು ತಿಂಗಳಲ್ಲಿ 50 ಲಕ್ಷ ರೂ. ಹೆಚ್ಚಿನ ಅನುದಾನ ನೀಡಲಾಗುವುದು ಮತ್ತು ಇದಕ್ಕೆ ಹೊಂದಿಕೊಂಡತೆ ಉದ್ಯಾನವು ಸಹ ಇರಲಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ಅಧಿಕಾರಕ್ಕೆ ಬಂದ ಮೇಲೆ ಹೆಚ್ಚು ಕುರುಬ ಸಮಾಜದವರೇ ರಾಜಕೀಯವಾಗಿ ಮುಂದೆ ಬಂದಿದ್ದಾರೆ. ಹಾಗೂ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿಯಲ್ಲಿ ಬಹುತೇಕ ಮಠ, ಮಂದಿರ, ಕಲ್ಯಾಣ ಮಂಟಪಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದೆ. ಕುರುಬ ಸಮಾಜಕ್ಕೆ ಹೆಚ್ಚಿನ ಒತ್ತು ನೀಡಿ ಅನುದಾನ ಒದಗಿಸಲಾಗುತ್ತಿದೆ. ಪ್ರಮಾಣಿಕ ಕೆಲಸ ಮಾಡುವುದೊಂದೆ ನನ್ನ ಗುರಿ ಎಂದರು. ಹಳಿಪೇಠನ ರೇವಣಸಿದ್ದೇಶ್ವರ ಮಠದ ಪೂಜ್ಯ ಸಿದ್ದರಾಮಯ್ಯ ಗುರುವಿನ್ ಸಾನೀಧ್ಯ ವಹಿಸಿದ್ದರು. ಇದನ್ನೂ ಓದಿ: ಜನರನ್ನು ಅಲೆದಾಡಿಸುವುದನ್ನು ನಾನು ಸಹಿಸಲ್ಲ: ಸಿಎಂ
ತಾಲೂಕಿನಲ್ಲಿ ಕುರುಬ ಸಮಾಜವು ದೊಡ್ಡ ಸಮಾಜವಾಗಿದ್ದು, ಎಲ್ಲಾ ಸಮುದಾಯದವರಿಗೂ 2 ಕೋಟಿ ರೂ. ಅನುದಾನ ನೀಡಲಾಗಿದೆ. ಸ್ಥಳ ಸಿಗದೇ ಸುಮಾರು 6 ವರ್ಷಗಳಿಂದ ಹುಡುಕಾಟ ನಡೆದಿತ್ತು. ಆಶ್ರಯ ಸಮಿತಿ ಅಧ್ಯಕ್ಷ ವಸಂತ ಸುರಪುರ ಅವರು ಸ್ಥಳ ಹುಡುಕಿ ಕೊಟ್ಟಿದ್ದು, ಭವನ ನಿರ್ಮಾಣದಲ್ಲಿ ಕೊರತೆಯಾಗದಂತೆ ಹೆಚ್ಚಿನ ಅನುದಾನ ಒದಗಿಸಲಾಗುವುದು. 3 ವರ್ಷದ ಹಿಂದೆ ಸಂಗೂಳ್ಳಿ ರಾಯಣ್ಣರ ಮೂರ್ತಿಗೆ 21 ಲಕ್ಷ ರೂ ಸ್ವಂತ ಹಣ ನೀಡಲಾಗಿದೆ. ಕಾಡಂಗೇರ ಗ್ರಾಮದ ರೇವಣಸಿದ್ದೇಶ್ವರ ಮಠಕ್ಕೆ 50 ಲಕ್ಷ ರೂ. ಅನುದಾನ ಒದಗಿಸಿದ್ದು, ಮುಂದಿನ ದಿನಗಳಲ್ಲಿ ೫೦ ಲಕ್ಷ ರೂ. ಹೆಚ್ಚಿನ ಅನುದಾನ ನೀಡಲಾಗುವುದು. ನಗನೂರ, ಪರಸನಹಳ್ಳಿ ಗ್ರಾಮಗಳಲ್ಲಿ ಸಹ ಅಭಿವೃದ್ಧಿಗೆ ಅನುದಾನ ಒದಗಿಸಲಾಗಿದೆ ಎಂದು ಸಚಿವರು ವಿವರಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಚಾಠಿ
ಬಿಜೆಪಿಯ ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ ಅವರು ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗಳ ಬಗ್ಗೆ ಠೀಕೆ ಮಾಡುವ ಮುನ್ನ ಮೊದಲು ಅಂಕಿ ಅಂಶಗಳನ್ನು ತಿಳಿದುಕೊಂಡು ಮಾತನಾಡಬೇಕು. ಹಾಲಲ್ಲಿ ಹುಳಿ ಹಿಂಡುವ ಕೆಲಸ ಮಾಡಬೇಡಿ. ಕೈಯಲ್ಲಿ ಮೈಕ್ ಕೊಟ್ಟರೆ ಮನಸ್ಸಿಗೆ ಬಂದಾಂಗೆ ಮಾತನಾಡುವುದು ಶೋಭೆಯಲ್ಲಾ ಎಂದು ಸಚಿವರು ವಾಗ್ದಾಳಿ ನಡೆಸಿದರು.
ಕನಕ ಭವನ ನಿರ್ಮಾಣಕ್ಕೆ ಸ್ಥಳ ಕಡಿಮೆಯಿದ್ದು, 2 ಕೋಟಿ ರೂ. ಅನುದಾನ ಸಾಕಾಗುವುದಿಲ್ಲಾ. ಸಚಿವರು ಮನಸು ಮಾಡಿ ಇನ್ನೂ ಹೆಚ್ಚಿನ ಅನುದಾನ ಒದಗಿಸಿಕೊಟ್ಟರೆ ಅನುಕೂಲವಾಗಲಿದೆ ಎಂದು ಮಾಜಿ ಎಂಎಲ್ಸಿ ಅಮಾತೆಪ್ಪ ಕಂದಕೂರ ಹೇಳಿದರು.
ಈ ಸಂದರ್ಭದಲ್ಲಿ ಶರಣಪ್ಪ ಸಲಾದಪುರ, ಶಿವುಮಾಹಂತ ಚಂದಾಪುರ, ಸಿದ್ದು ಆರಭೋಳ, ಕುರುಬ ಸಮಾಜದ ತಾಲೂಕ ಅಧ್ಯಕ್ಷ ಯಲ್ಲಪ್ಪ ನರಿ, ವಿನೋದಗೌಡ, ಶಾಂತಗೌಡ ನಾಗನಟಿಗಿ, ಅಂಬ್ಲಪ್ಪ, ರಾಯಪ್ಪ ಸಾಲಿಮನಿ, ಭೀಮಾಶಂಕರ ಹುಲ್ಕಲ್, ಶೇಖರ ದೊರಿ, ಗುರು ಬಾಣತಿಹಾಳ, ಶ್ರೀಶೈಲ್ ಹೊಸ್ಮನಿ, ಅಲ್ಲಾ ಪಟೇಲ್, ಎಇಇ ಸೂಗೂರೆಡ್ಡಿ,ಯಮನಪ್ಪ ಅಗಸ್ಥಾಳ, ಮಾಳಿಂಗರಾಯ ತಾಳಿಕೋಟಿ, ಭೀಕ್ಷಣಗೌಡ ಕಾಡಂಗೇರ, ಬಸಣಗೌಡ ಕಾಡಂಗೇರ, ರಾಯಪ್ಪ ಚಲುವಾದಿ, ಮಲ್ಲಣಗೌಡ ತಿಪ್ಪನಹಳ್ಳಿ, ರವಿ ರಾಜಾಪುರ, ಮಹೇಶ ರಸ್ತಾಪುರ ,ಶರಬಣ್ಣ ರಸ್ತಾಪುರ, ಬಲಭೀಮ ಮಡ್ನಾಳ, ಸಿದ್ದಪ್ಪ ಕನ್ಯಾಕೊಳ್ಳೂರ, ಸೀನು ನಾಶಿ ಸೇರಿದಂತೆ ಇತರರು ಇದ್ದರು.
