ಆಂಧ್ರಪ್ರದೇಶ: ಸೌತ್ ಇಂಡಿಯಾ ಮೀಡಿಯಾ ಅಸೋಸಿಯೇಷನ್ (SIMA) ವತಿಯಿಂದ ಡಿಸೆಂಬರ್ 6 ರಂದು ಮಾಲ್ ಆಫ್ ಏಷ್ಯಾ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ದಕ್ಷಿಣ ಭಾರತ ಮಾಧ್ಯಮ ಸಮ್ಮೇಳನಕ್ಕೆ ಮುಖ್ಯ ಅತಿಥಿಗಳಾದ ಆಗಮಿಸಲು ಆಂಧ್ರಪ್ರದೇಶ ವಾರ್ತಾ ಮತ್ತು ಸಮಾಚಾರ ಸಂಪರ್ಕ ಇಲಾಖೆ ಸಚಿವ ಕೊಲುಸು ಪಾರ್ಥಸಾರಥಿರವರನ್ನು ಆಹ್ವಾನಿಸಲಾಯಿತು.
ಸೈಮಾ ಪ್ರಧಾನ ಕಾರ್ಯದರ್ಶಿ ಎನ್ಕೆ ಸ್ವಾಮಿ, ಬೆಂಗಳೂರು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ ಆಂಧ್ರಪ್ರದೇಶ ಸೈಮಾ ಅಧ್ಯಕ್ಷರಾದ ರಾಜೇಂದ್ರ ಪ್ರಸಾದ್, ಹಿರಿಯ ಪತ್ರಕರ್ತರಾದ ಎಸ್ಎಸ್ ಗುರುನಾಥ್ ಎಂಎಸ್ಎಸ್ ಭಾಷ ಮತ್ತು ಸತ್ಯಾನಂದರವರು ಇನ್ನಿತರ ಪತ್ರಕರ್ತರು ಸಚಿವರನ್ನು ಭೇಟಿ ಮಾಡಿ ಸಮ್ಮೇಳನಕ್ಕೆ ಆಹ್ವಾನಿಸಿದರು.
ಬದಲಾದ ಮಾಧ್ಯಮ ಪರಿಸ್ಥಿತಿ ಮತ್ತು ಸವಾಲುಗಳ ಚರ್ಚೆ
ಮಾಧ್ಯಮ ಕ್ಷೇತ್ರವು ನಿರೀಕ್ಷೆಗೂ ಮೀರಿ ವೇಗವಾಗಿ ಬದಲಾಗುತ್ತಿದ್ದು, ಸುಧಾರಿತ ತಂತ್ರಜ್ಞಾನದಿAದ ಹೊಸ ಸ್ವರೂಪದಲ್ಲಿ ಹೊರಹೊಮ್ಮುತ್ತಿದೆ. ಕೇವಲ ಪತ್ರಿಕೆಗಳಿಗೆ ಸೀಮಿತವಾಗಿದ್ದ ಮಾಧ್ಯಮ ಕ್ಷೇತ್ರ ಈಗ ಎಲೆಕ್ಟ್ರಾನಿಕ್ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣದ ಮಾಧ್ಯಮಗಳ ರೂಪದಲ್ಲಿ ಸಮಾಜದ ಪ್ರತಿ ಮೂಲೆಗಳನ್ನೂ ತಲುಪುತ್ತಿದೆ.
ಸಮ್ಮೇಳನದ ಉದ್ದೇಶ: ಇಂತಹ ಮಾಧ್ಯಮಗಳು ದೇಶದ ಆಡಳಿತ ವ್ಯವಸ್ಥೆ, ಅರ್ಥ ವ್ಯವಸ್ಥೆ ಹಾಗೂ ಚುನಾವಣಾ ವ್ಯವಸ್ಥೆಗಳ ಮೇಲೆ ನೇರ ಪರಿಣಾಮ ಬೀರುತ್ತಿವೆ. ಈ ಬದಲಾದ ಪರಿಸ್ಥಿತಿಯ ಬಗ್ಗೆ ಚರ್ಚಿಸುವುದು ಸಮ್ಮೇಳನದ ಮುಖ್ಯ ಉದ್ದೇಶವಾಗಿದೆ.
ಚರ್ಚೆಯ ವಿಷಯಗಳು: ಮಾಧ್ಯಮಗಳ ಭವಿಷ್ಯದ ಸವಾಲುಗಳು ಮತ್ತು ಸರ್ಕಾರಗಳು, ರಾಜಕೀಯ ವ್ಯವಸ್ಥೆಯೊಂದಿಗೆ ಮಾಧ್ಯಮಗಳ ಸಮನ್ವಯದ ಬಗ್ಗೆ ಚರ್ಚೆ ನಡೆಯಲಿದೆ. ಜೊತೆಗೆ, ದಕ್ಷಿಣ ಭಾರತದ ರಾಜ್ಯಗಳ ವಿವಿಧ ಮಾಧ್ಯಮಗಳಲ್ಲಿರುವ ಪತ್ರಕರ್ತರ ಸಮಸ್ಯೆಗಳನ್ನು ವಿಶ್ಲೇಷಿಸಲಾಗುವುದು.
ದಕ್ಷಿಣ ಭಾರತದ ಪತ್ರಕರ್ತರ ಮಹಾ ಒಕ್ಕೂಟ ‘ಸೈಮಾ’
ಸೌತ್ ಇಂಡಿಯಾ ಮೀಡಿಯಾ ಅಸೋಸಿಯೇಷನ್ (ರಿ) ದಕ್ಷಿಣ ಭಾರತದ ಐದು ರಾಜ್ಯಗಳ ಪತ್ರಕರ್ತರ ಮತ್ತು ಸಹೃದಯರ ಒಕ್ಕೂಟವಾಗಿದೆ. ಇದು ಪ್ರಥಮ ಬಾರಿಗೆ ಐದು ರಾಜ್ಯಗಳ ಪತ್ರಕರ್ತರು ಒಂದುಗೂಡುವ ವೇದಿಕೆಯಾಗಿದ್ದು, ಈ ಮೂಲಕ ಸಾಮೂಹಿಕ ಸಮಸ್ಯೆಗಳ ಪರಿಹಾರಕ್ಕೆ ಒತ್ತು ನೀಡಲು ಉದ್ದೇಶಿಸಲಾಗಿದೆ.
