Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಮಾಜಿ ಪತಿ ಬಗ್ಗೆ ಮನ ಬಿಚ್ಚಿ ಮಾತಾಡಿದ ಉಮಾಶ್ರೀ
  • Bangalore
  • Cinema
  • Politics
  • State

ಮಾಜಿ ಪತಿ ಬಗ್ಗೆ ಮನ ಬಿಚ್ಚಿ ಮಾತಾಡಿದ ಉಮಾಶ್ರೀ

Praja Vahini October 28, 2025
WhatsApp Image 2025-10-28 at 15.48.01
Spread the love

ಬೆಂಗಳೂರು: ರಂಗಭೂಮಿ ಕಲಾವಿದೆ ಹಾಗೂ ಹಿರಿಯ ನಟಿ ಮತ್ತು ರಾಜಕಾರಣಿಯಾಗಿರುವ ನಟಿ ಉಮಾಶ್ರೀ ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಬಹಳ ನೊಂದು ಬೆಂದಿರುವ ಮಹಿಳೆ.

ಹೌದು, ನಟಿ ಉಮಾಶ್ರೀ ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಪಡಬಾರದ ಕಷ್ಟಗಳನ್ನು ಪಟ್ಟು ಇದೀಗ ಉನ್ನತ ಸ್ಥಾನದಲ್ಲಿದ್ದಾರೆ.

ಕುಡುಕ ಗಂಡನಿಂದ ಚಿತ್ರ ಹಿಂಸೆ, ಚಿಕ್ಕ ಮಕ್ಕಳಿಗೆ ಒಂದು ತುತ್ತು ಅನ್ನ ಹಾಕಲಾಗದ ಪರಿಸ್ಥಿತಿ ಅವರಿಗೆ ಹಿಂದಿನ ಕಾಲದಲ್ಲಿತ್ತು. ಆದರೆ ಎಂತದ್ದೇ ಕಷ್ಟ ಬಂದರೂ ಕೂಡ ಯಾವುದಕ್ಕೂ ಎದೆಗುಂದದೆ ದಿಟ್ಟ ನಿರ್ಧಾರ ತೆಗೆದುಕೊಂಡು ಈಗ ಜೀವನ ತಾಗಿಸುತ್ತಿದ್ದಾರೆ.

ಯೆಸ್…ನಟಿ ಉಮಾಶ್ರೀ ಅವರು ತಮ್ಮ ಮಾಜಿ ಪತಿಯನ್ನು ನೆನೆದು ಭಾವುಕರಾಗಿದ್ದು, ಅವರು ಈಗ ಇಲ್ಲ.. ಕಳೆದ ವರ್ಷ ಮಣ್ಣಾದರು. ಅವರನ್ನ ಭಗವಂತನ ಪಾದಕ್ಕೆ ಕಳಿಸಿಕೊಟ್ಟೆವು ಎಂದು ಹೇಳಿ ಭಾವುಕರಾಗಿದ್ದಾರೆ.

ಕೊನೆವರೆಗೂ ಒಬ್ಬರ ಬಗ್ಗೆ ಒಬ್ಬರಿಗೆ ಗೌರವಯುತವಾಗಿದ್ದ ಪ್ರೀತಿ ಇತ್ತು. ಪ್ರೀತಿ ವಿಷ್ಯಕ್ಕೆ ಬಂದಾಗ ಆತ ನಿಜವಾಗಲೂ ನನ್ನನ್ನ ಪ್ರೀತಿಸಿದ್ದರು. ನಾನು ಅವರನ್ನ ನಿಜವಾಗಲೂ ಪ್ರೀತಿಸಿದ್ದೆ. ನಾವು ಈ ವಯಸ್ಸಿನಲ್ಲಿ ನಿಂತುಕೊಂಡು ಹಿಂದೆ ತಿರುಗಿ ನೋಡಿದಾಗ, ಆತನ ಅಸಹಾಯಕತೆಯನ್ನು ನಾನು ಅರ್ಥ ಮಾಡಿಕೊಂಡಾಗ, ಆತನ ಮೇಲೆ ನನಗೆ ಕರುಣೆ ಬರುತ್ತೆ ಎಂದು ಸಂದರ್ಶನವೊಂದರಲ್ಲಿ ನಟಿ ಹೇಳಿದ್ದಾರೆ.

ಪ್ರೀತಿಸಿ ಮದುವೆಯಾದೆವು. ಆದರೆ, ಪ್ರೀತಿ ಎನ್ನುವ ಅರ್ಥ ಒಂದು ಬದುಕನ್ನ ಕಟ್ಟಿಕೊಳ್ಳತಕ್ಕಂತಹ ಒಂದು ಚೌಕಟ್ಟು. ಆ ಚೌಕಟ್ಟಲ್ಲಿ ನಾನು, ನನ್ನ ಗಂಡ, ನನ್ನ ಮಕ್ಕಳು, ನನ್ನ ಕುಟುಂಬ, ನನ್ನ ಸಂಸಾರ, ಹೀಗೆ ಸಣ್ಣ ಸಣ್ಣ ಕನಸುಗಳು ಹುಟ್ಟುಕೊಳ್ಳುತ್ತಾ ಹೋಗುತ್ತೆ. ಆ ಕನಸ್ಸಿಗೆ ಪೂರಕವಾದಂತಹ ಶಕ್ತಿಯಾಗಿ ಒಬ್ಬ ಗಂಡ ನಿಲ್ಲದೇ ಹೋದಾಗ, ಬದುಕಿಗೆ ಸೂಕ್ತ ಆಗದೇ ಹೋದಾಗ, ಎಲ್ಲೋ ಒಂದ್ಕಡೆ ನಾನು ಅಂದುಕೊಂಡ ಕನಸು ಛಿದ್ರ ಆಗ್ತಿದೆ ಅಂತ ಗೊತ್ತಾದಾಗ, ಅನಿವಾರ್ಯ ಆಗುತ್ತದೆ. ಮನಸ್ಸುಗಳಿಗೆ ಒಂದು ಬೇಕುಗಳಿರುತ್ತವೆ ಅಲ್ವಾ? ಅವೆಲ್ಲಾ ಆಗದೇ ಹೋಯ್ತು. ಹಾಗಾಗಿ ಇಬ್ಬರೂ ಬೇರ್ಪಟ್ಟೆವು ಎಂದು ಉಮಾಶ್ರೀ ಹೇಳಿದ್ದಾರೆ.

ನಾವು ದೂರ ಆದರೂ ಕೂಡ, ಆತನೂ ನನಗೆ ಕೇಡು ಬಯಸಿಲ್ಲ. ನಾನು ಆತನಿಗೆ ಕೇಡು ಬಯಸಿಲ್ಲ. ಇಲ್ಲಿಯವರೆಗೂ ಕೂಡ ಅತ್ತೆ ಮನೆಯಲ್ಲಿ ಅವರು, ಅವರ ಎರಡನೇ ಹೆಂಡತಿ ಮತ್ತು ಮಕ್ಕಳು ಇರುತ್ತಿದ್ದರು. ನಾನು ಆಗಾಗ ಅತ್ತೆ ಮನೆಗೆ ಹೋಗ್ತಿದ್ದೆ. ಅವರು ಇಲ್ಲಿಗೆ ಬರೋದು ಹೋಗೋದು ಮಾಡುತ್ತಿದ್ದರು. ಅವರಿಗೆ ಮಗಳ ಮೇಲೆ ತುಂಬಾ ಪ್ರೀತಿ. ಅವರಿಗೆ ಕುಡಿತದ ಚಟ ಬಹಳ ಇತ್ತು. ಮದುವೆ ಅಥವಾ ಪ್ರೀತಿ ಮಾಡಬೇಕಾದರೆ ಯಾರೂ ನನಗೆ ಹೇಳಿಲ್ಲ, ಮುಚ್ಚಿಟ್ಟಿದ್ದರು. ಕೊನೆವರೆಗೂ ಕೂಡ ಕುಡಿತ ಬಿಟ್ಟು ಇರೋಕೆ ಆಗ್ತಿರ್ಲಿಲ್ಲ ಅವರಿಗೆ ಎಂದು ಉಮಾಶ್ರೀ ಭಾವುಕರಾದರು.

About the Author

Praja Vahini

Editor

View All Posts

Spread the love

Post navigation

Previous: ಟ್ರಕ್ ಪಲ್ಟಿ 2 ಸಾವು, ಹಲವರಿಗೆ ಗಾಯ
Next: ಇಂದಿರಾ ಗಾಂಧಿ ವೃತ್ತಿ ಕೇಂದ್ರದಲ್ಲಿ 125 ಕೋಟಿ ಹಗರಣದ ಬಗ್ಗೆ ಹೆಚ್ ಸಿ ಮಹದೇವಪ್ಪ ಹೇಳಿದ್ದೇನು?

Views:

44

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.