ಬೆಂಗಳೂರು: ಪ್ರೇಮ ಬರಹ’ ಖ್ಯಾತಿಯ ಚಂದನ್ ಕುಮಾರ್ ನಟಿಸಿ, ಮೊದಲ ಬಾರಿಗೆ ನಿರ್ದೇಶಿಸಿರುವ ‘ಫ್ಲರ್ಟ್’ ಚಿತ್ರದ ಟ್ರೈಲರ್ ಭಾನುವಾರ ಬಿಡುಗಡೆಯಾಗಿದ್ದು ಕನ್ನಡ ಚಿತ್ರರಂಗದ ಖ್ಯಾತ ನಟ ಕಿಚ್ಚ ಸುದೀಪ್ ಅವರು ಮಾಲ್ ಆಫ್ ಏಷ್ಯಾ ದಲ್ಲಿ ಅದ್ದೂರಿಯಾಗಿ ‘ಫ್ಲರ್ಟ್’ ಚಿತ್ರದ ಟ್ರೈಲರ್ ರಿಲೀಸ್ ಮಾಡಿದ್ದಾರೆ.
ಹೌದು, ಚಂದನ್ ಕುಮಾರ್ ನಟಿಸಿ ನಿರ್ದೇಶಿಸಿರುವ ಮೊದಲ ಸಿನಿಮಾದ ಟ್ರೈಲರ್ ಅನ್ನು ಕಿಚ್ಚ ಸುದೀಪ್ ಅವರು ಭಾನುವಾರ ಬಿಡುಗಡೆ ಮಾಡಿದ್ದಾರೆ.
ಟ್ರೈಲರ್ ಬಿಡುಗಡೆ ಮಾಡಿ ನಂತರ ಮಾತನಾಡಿದ ಕಿಚ್ಚ ಸುದೀಪ್, ಚಂದನ್ ಕುಮಾರ್ ನಮ್ಮ ಮನೆ ಹುಡುಗ, ಚಂದನ್ ಮೊದಲ ಪ್ರಯತ್ನ ಮಾಡಿದ್ದಾರೆ ಅವರಿಗೆ ಎಲ್ಲರೂ ಸಪೋರ್ಟ್ ಮಾಡಿ ಎಂದರು.
‘ಫ್ಲರ್ಟ್’ ಸಿನಿಮಾ ಎರಡು ದಿನಗಳ ಹಿಂದೆ ನೋಡಿದ್ದೇನೆ, ಇದರಲ್ಲಿ ವಿಭಿನ್ನವಾದ ಕಥೆ ಇದೆ, ಎಲ್ಲರಿಗೂ ಕೂಡ ಇದು ಇಷ್ಟವಾಗುತ್ತದೆ ಲವ್ ಕಮ್ ಕಾಮಿಡಿ ಇರುವಂತಹ ಸಿನಿಮಾ ಇದಾಗಿದ್ದು ಎಲ್ಲರೂ ಕೂಡ ಥಿಯೇಟರ್ ಗೆ ಹೋಗಿ ನೋಡಿ ಎಂದು ಹೇಳಿದರು.
ಇನ್ನು ಚಂದನ್ ಮಾತನಾಡಿ, ಇದೊಂದು ರೋಮ್ಯಾಂಟಿಕ್ ಕಮ್ ಕಾಮಿಡಿ ಸಿನಿಮಾವಾದ್ರೂ ಫ್ರೆಂಡ್ಶಿಪ್, ಲವ್, ಹೀಗೆ ಎಲ್ಲಾ ತರಹದ ಎಂಟರ್ಟೈನಿಂಗ್ ಒಳಗೊಂಡಿದೆ. ”ಫರ್ಟ್’ ಸಿನಿಮಾ ರೊಮ್ಯಾಂಟಿಕ್ ಕಾಮಿಡಿ ಸಿನಿಮಾವಗಿದ್ದು, ಫ್ರೆಂಡ್ಶಿಪ್, ಲವ್ ಹಾಗೂ ಎಮೋಷನ್ ಇದರ ಜೀವಾಳ. ‘ಫ್ಲರ್ಟ್’ ಎಂದರೆ ಬರೀ ಚುಡಾಯಿಸುವುದು ಎಂದರ್ಥವಲ್ಲ, ಗಾಢವಾದ ಪ್ರೀತಿ ಕೂಡ ಹೌದು ಎಂದರು.
ಇನ್ನು ಈ ಸಿನಿಮಾದಲ್ಲಿ ಚಂದನ್ ಗೆ ಇಬ್ಬರು ನಾಯಕಿಯರಿದ್ದು, ಅಕ್ಷಿತಾ ಬೋಪಯ್ಯ, ನಿಮಿಕಾ ರತ್ನಾಕರ್ ಅಭಿನಯಿಸಿದ್ದಾರೆ. ಸಾಧು ಕೋಕಿಲಾ, ಶ್ರುತಿ, ಗಿರೀಶ್ ಶಿವಣ್ಣ, ಮೂಗು ಸುರೇಶ್ ಹೀಗೆ ಹಲವಾರು ಹಿರಿಯ ಕಲಾವಿದರ ಕಲಾಬಳಗವೆ ಇದೆ. ಇದನ್ನೂ ಓದಿ: ಮಂತ್ರ ಮಾಂಗಲ್ಯದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸುಹಾನ ಸಯ್ಯದ್
ಅಲ್ಲದೆ’ಫ್ಲರ್ಟ್’ ಸಿನಿಮಾ ಇದೇ ನವೆಂಬರ್ 07 ರಂದು ಅದ್ದೂರಿಯಾಗಿ ರಾಜ್ಯದಾದ್ಯಂತ ಬಿಡುಗಡೆಯಾಗಲಿದ್ದು ಎಲ್ಲ ಅಭಿಮಾನಿಗಳು ಥೀಯೇಟರ್ ಗೆ ಹೋಗಿ ಸಿನಿಮಾ ನೋಡಿ ಎಂದು ಚಿತ್ರತಂಡ ಹೇಳಿದರು.
