ಬೆಂಗಳೂರು: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನಾಡಿನಾದ್ಯಂತ ದೀಪಾವಳಿ ಹಬ್ಬವನ್ನು ಸಡಗರದಿಂದ ಆಚರಿಸಲಾಗುತ್ತಿದ್ದು, ರಾಜ್ಯದ ರಾಜಧಾನಿ ಬೆಂಗಳೂರು ನಗರದಲ್ಲಿ ನರಕ ಚತುರ್ಥಿ, ಬಲಿಪಾಡ್ಯಮಿ ಆಚರಿಸಲು ಹೂ, ಹಣ್ಣು ಖರೀದಿಯಲ್ಲಿ ಗ್ರಾಹಕರು ಮುಗಿಬಿದ್ದಿದ್ದಾರೆ.
ಇನ್ನು ದೀಪಾವಳಿ ಹಬ್ಬಕ್ಕೆ ಹೂ, ಹಣ್ಣುಗಳ ಬೆಲೆ ಗಗನಕ್ಕೇರಿದರು ಕೂಡ ಯಾವುದನ್ನು ಲೆಕ್ಕಿಸದೆ, ಖರೀದಿಯಲ್ಲಿ ಜನ ಮುಂದಾಗಿದ್ದಾರೆ.
ಕೆ.ಆರ್. ಮಾರುಕಟ್ಟೆ, ಮಲ್ಲೇಶ್ವರ, ಯಶವಂತಪುರ, ಗಾಂಧಿ ಬಜಾರ್, ಹುಸ್ಕೂರು ಮಾರುಕಟ್ಟೆ, ಕಲಾಸಿ ಪಾಳ್ಯ ಮಾರುಕಟ್ಟೆಗಳಲ್ಲಿ ಬೆಳಿಗ್ಗೆಯಿಂದಲೇ ಹಬ್ಬದ ಖರೀದಿ ಭರಾಟೆಯಿಂದಾಗಿ ಮಾರುಕಟ್ಟೆ ರಸ್ತೆ ಮತ್ತು ಅದರ ಸುತ್ತಮುತ್ತ ಪ್ರದೇಶದಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗಿದೆ.
ಇನ್ನು ಸತತ ಮಳೆ ಹಿನ್ನೆಲೆ ಹೂಗಳ ಬೆಲೆ ಏರಿಕೆಯಾಗಿದೆ. ದೀಪಾವಳಿ ಹಬ್ಬದ ಹಿನ್ನೆಲೆ ಕನಕಾಂಬರ, ಮಲ್ಲಿಗೆ, ಸೇವಂತಿಗೆ, ಸುಗಂಧರಾಜ, ಚೆಂಡು ಹೂಗಳ ಖರೀದಿ ಜೋರಾಗಿದೆ. ಇದನ್ನೂ ಓದಿ: ಬೆಂಗಳೂರಿನ ಸೌಲಭ್ಯ ಬಳಸಿಕೊಂಡು ಬೆಳೆದವರು ಟೀಕೆ ಹಾಗೂ ಟ್ವೀಟ್ ಮಾಡುತ್ತಿದ್ದಾರೆ: ಡಿಕೆಶಿ
ಕನಕಾಂಬರ – 1,300-1,600 ರೂ., ಮಲ್ಲಿಗೆ, ಮಳ್ಳೆ ಹೂವು – 700-900 ರೂ., ಕಾಕಡ ಹೂವು – 700-800 ರೂ., ಸೇವಂತಿಗೆ – 800 ರೂ., ಗುಲಾಬಿ – 500 ರೂ., ಕಣಗಲೆ – 500 ರೂ., ಸುಗಂಧರಾಜ – 500 ರೂ., ತಾವರೆ ಹೂವು (ಜೋಡಿ) – 150 ರೂ., ಬಾಳೆಕಂದು – 150 ರೂ. ದೀಪಾವಳಿ ಹಬ್ಬದ ಪ್ರಯುಕ್ತ ಮಾರುಕಟ್ಟೆಯಲ್ಲಿ ಹೂ ಹಣ್ಣುಗಳ ಜೊತೆಗೆ ಇನ್ನೂ ಇತರ ವಸ್ತುಗಳ ಬೆಲೆ ಕೂಡ ಗಗನ ಕೇಳಿದೆ.
