ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳ ಬದುಕಲ್ಲಿ ಎರಡೆರಡು ಮದುವೆ ಆಗುತ್ತಿರುವುದು ಸರ್ವೇಸಾಮಾನ್ಯವಾಗಿದೆ. ಅದಕ್ಕೆ ಎಷ್ಟೋ ಉದಾಹರಣೆಗಳು ಕೂಡ ಇವೆ.
ಹೌದು, ಸೆಲೆಬ್ರಿಟಿಗಳು ಇತ್ತೀಚಿಗೆ ಎರಡೆರಡು ಮದುವೆಯಾಗುತ್ತಿರುವುದು ಸರ್ವೇಸಾಮಾನ್ಯವಾಗಿದೆ. ಮೊದಲೇ ಮದುವೆ ಮುರಿದು ಬಿದ್ದ ಮೇಲೆ ಸಾಮಾನ್ಯವಾಗಿ ಎರಡನೇ ಮದುವೆಗೆ ಸಜ್ಜಾಗುತ್ತಾರೆ. ಅದಕ್ಕೆ ಉದಾಹರಣೆ ಎಂಬಂತೆ ಇದೀಗ ಖ್ಯಾತ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಅವರು ಕೂಡ ಹೊರತಾಗಿಲ್ಲ.
ಖ್ಯಾತ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಅವರು ತಮ್ಮ ಎರಡನೆಯ ಮದುವೆ ಬಗ್ಗೆ ಅಧಿಕೃತವಾಗಿ ಘೋಷಿಸಿದ್ದಾರೆ. ಗಾಯಕಿ ವಾರಿಜ್ಯಶ್ರೀ ಅವರ ಜೊತೆ ಸಪ್ತಪದಿ ತುಳಿಯಲು ಸಜ್ಜಾಗಿದ್ದು, ಇದೇ ತಿಂಗಳ ಕೊನೆಯಲ್ಲಿ ಇಬ್ಬರ ಮದುವೆ ಅದ್ದೂರಿಯಾಗಿ ನೆರವೇರಲಿದೆ ಎಂದು ರಘು ದೀಕ್ಷಿತ್ ಅವರು ಹೇಳಿಕೊಂಡಿದ್ದಾರೆ.
ರಘು ದೀಕ್ಷಿತ್ ಅವರ ಮೊದಲನೇ ಮದುವೆ ಮುರಿದ ಬಿದ್ದ ಮೇಲೆ ವಾರಿಜಾಶ್ರೀ ಅವರ ಜೊತೆ ಪರಸ್ಪರ ಪ್ರೀತಿಯಲ್ಲಿದ್ದು ಇದೀಗ ಅವರಿಬ್ಬರ ಪ್ರೀತಿಗೆ ಇಬ್ಬರ ಮನೆಯವರು ಒಪ್ಪಿಗೆ ನೀಡಿದ್ದು, ಇದೇ ತಿಂಗಳು ಅದ್ದೂರಿಯಾಗಿ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ರಘು ದೀಕ್ಷಿತ್ ಅವರು ತಿಳಿಸಿದ್ದಾರೆ. ಇದನ್ನೂ ಓದಿ: 2ನೇ ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ರಾ ನಿವೇದಿತಾ ಗೌಡ..?
ನನ್ನ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತದೆ ಎಂದು ನಾನು ನಿರೀಕ್ಷೆ ಮಾಡಿರಲಿಲ್ಲ. ನನ್ನ ಜೀವನದಲ್ಲಿ ನಾನು ನಿರೀಕ್ಷೆ ಮಾಡಿರದ ಆಕಸ್ಮಿಕ ತಿರುವು ಇದು. ನನ್ನ ಮತ್ತು ವಾರಿಜಾಶ್ರೀ ಅವರ ಪ್ರೀತಿಗೆ ವಾರಿಜಾಶ್ರೀ ಅವರ ಪೋಷಕರು ಒಪ್ಪಿಗೆ ಸೂಚಿಸಿದ್ದಾರೆ. ಸದ್ಯ ನಮ್ಮ ಜೀವನದ ಹೊಸ ಅಧ್ಯಾಯವನ್ನು ಪ್ರಾರಂಭಿಸಲು ಹೊರಟಿದ್ದೇವೆ ಎಂದಿದ್ದಾರೆ ರಘು ದೀಕ್ಷಿತ್.
