ಬೆಂಗಳೂರು: ಮೈಸೂರು ದಸರಾದಲ್ಲಿ ನಿವೇದಿತಾ ಗೌಡ ಹಾಗೂ ರ್ಯಾಪರ್ ಚಂದನ್ ಶೆಟ್ಟಿಯವರು ಒಬ್ಬರಿಗೊಬ್ಬರು ಪರಸ್ಪರ ಪ್ರೀತಿ ಪ್ರಪೋಸ್ ಮಾಡಿ ಮದುವೆಯಾಗಿದ್ದರು.
ಮದುವೆಯಾಗಿ ಕೆಲವು ವರ್ಷ ಜೊತೆಗಿದ್ದ ಅವರಿಬ್ಬರ ಬದುಕಿನಲ್ಲಿ ಬಿರುಕು ಮೂಡಿದ್ದು, ಈಗಾಗಲೇ ಅವರು ಒಬ್ಬರಿಗೊಬ್ಬರು ಒಪ್ಪಿಕೊಂಡು ವಿಚ್ಛೇದನವನ್ನು ಕೂಡ ಪಡೆದುಕೊಂಡಿದ್ದಾರೆ.
ಹೌದು, ನಿವೇದಿತಾಗೌಡ ಚಂದನ್ ಶೆಟ್ಟಿಯಿಂದ ವಿಚ್ಛೇದನ ಪಡೆದ ಬಳಿಕ ಸ್ವತಂತ್ರವಾಗಿ ರಿಲ್ಸ್ ಮಾಡುವ ಮೂಲಕ ಹಾಗೂ ಫ್ಯಾಷನ್ ನಲ್ಲಿ ಬಿಜಿಯಾಗಿದ್ದಾರೆ.
ಇನ್ನು ಇತ್ತೀಚಿಗಷ್ಟೇ ಖಾಸಗಿ ವಾಹಿನಿಯಲ್ಲಿ ಸಂದರ್ಶನ ನೀಡಿದ ನಿವೇದಿತ ಗೌಡ ಅವರು ತಮ್ಮ ಎರಡನೇ ಮದುವೆ ಬಗ್ಗೆ ಮೌನ ಮುರಿದಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ರೀ ಓಪನ್ ಗೆ ಕಿಚ್ಚನ ಕಸರತ್ತೆನು?
ಮದುವೆ ಎಂದರೆ ನನಗೆ ಭಯ ಆಗುತ್ತದೆ. ಹಿಂದೆ ನಡೆದಿರುವ ಘಟನೆಯನ್ನು ನೆನೆಸಿಕೊಂಡರೆ ಇನ್ನು ಕೂಡ ಭಯ ಆಗುತ್ತದೆ. ಹಾಗಾಗಿ ನನ್ನನ್ನು ಅರ್ಥ ಮಾಡಿಕೊಳ್ಳುವ ಹುಡುಗ ಹಾಗೂ ನನ್ನನ್ನು ಚೆನ್ನಾಗಿ ನೋಡಿಕೊಳ್ಳುವಂತಹ ಹುಡುಗ ಸಿಕ್ಕರೆ ಖಂಡಿತವಾಗಿಯೂ ನಾನು ಮದುವೆಯಾಗುತ್ತೇನೆ ಎಂದು ಹೇಳಿದ್ದಾರೆ.
