ಹಾವೇರಿ: ನಶಾ ಮುಕ್ತ ಭಾರತ ಪ್ರಧಾನಿ ನರೇಂದ್ರಯವರ ಚಿಂತನೆ ಅವರು ಹೋಗುತ್ತಿರುವ ದಾರಿ ದಿಕ್ಕೂಚಿಯಾಗಿದೆ. ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭವ್ಯ ಭಾರತ ಆತ್ಮನಿರ್ಭರ, ನಶಾ ಮುಕ್ತ ಭಾರತ ಮಾಡುತ್ತೇವೆ ಎಂದು ಸಂಕಲ್ಪ ಮಾಡೋಣ ಮಾಜಿ ಸಿಎಂ ಹಾಗೂ ಬಿಜೆಪಿಯ ಸಂಸದರಾದ ಬಸವರಾಜ್ ಬೊಮ್ಮಾಯಿ ಅವರು ಹೇಳಿದರು.
ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಗೃಹ ಸಚಿವನಾಗಿದ್ದಾಗ ಡಗ್ ವಿರುದ್ಧ ಸಮರ ಸಾರಿದ್ದು ಅತಿ ಹೆಚ್ಚು ವಿದೇಶಿ ಡಗ್ಸ್ ಪತ್ತೆ ಹೆಚ್ಚಿ ಸುಟ್ಟು ಹಾಕಿದ್ದು ನಮ್ಮ ಬಿಜೆಪಿ ಅವಧಿಯಲ್ಲಿ. ಯಾವುದೇ ಸಂಸ್ಥೆಯಲ್ಲಿ ಡ್ರಗ್ ಮಾರಾಟವಾದರೂ ಯುವಕರು ಈ ಬಗ್ಗೆ ಪೊಲೀಸರಿಗೆ ದೂರು ನೀಡಬೇಕು. ಯಾವ ಸಂಸ್ಥೆಯಲ್ಲಿ ಮಾರಾಟವಾಗುತ್ತದೆ ಆ ಆಡಳಿತ ಮಂಡಳಿಯನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಇದನ್ನೂ ಓದಿ: ಮೋದಿ ಎಂದರೆ ಪ್ರೇರಣಾದಾಯಕ ಶಕ್ತಿ: ಬೊಮ್ಮಾಯಿ
ನಶೆ ಯುವಕರ ಬದುಕನ್ನು ನರಕ ಮಾಡುತ್ತದೆ. ಪ್ರತಿನಿತ್ಯ ನಾವು ವಿಷ ಕುಡಿದಂತೆ ಡ್ರಗ್ಸ್ ಸೇವನೆ ಆಗುತ್ತಿದೆ. ಆ ವಿಷವನ್ನು ನಾವು ಯಾರೂ ಮುಟ್ಟಬಾರದು. ಪ್ರಧಾನಿ ಮೋದಿಯವರ ಹುಟ್ಟುಹಬ್ಬದ ಅಂಗವಾಗಿ ಈಗಾಗಲೇ ಆರೋಗ್ಯ ಶಿಬಿರ, ರನ್ ಮಾಡಿದ್ದೇವೆ. ನವೆಂಬರನಲ್ಲಿ ಸ್ವದೇಶಿ ಮೇಳ ಹಾಗೂ ನಮೋ ಸಂಸದರ ಕ್ರೀಡಾ ಕೂಟ ಏರ್ಪಡಿಸಲಿದ್ದೇವೆ. ಎಲ್ಲರೂ ಪಾಲ್ಗೊಳ್ಳಬೇಕು. ಮೋದಿಯವರದು ಪವರ್ ಪೊಲಿಟಿಕ್ ಅಲ್ಲ, ಜನರನ್ನು ಒಳಗೊಂಡಿರುವ ಜನರ ರಾಜಕಾರಣ, ನಾವೆಲ್ಲರೂ ಮೋದಿಯವರ ಜೊತೆಗೆ ಇರೋಣ ಎಂದು ಹೇಳಿದರು.
