ಶಹಾಪುರ: ದಿಟ್ಟ ನಡೆಯ ಯುಗಪುರುಷ, ರಾಜಕೀಯ ತಪಸ್ವೀ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 74 ವಸಂತಗಳನ್ನು ಪೂರೈಸಿ 75ನೇ ವರ್ಷಕ್ಕೆ ಕಾಲಿಡುತ್ತೀರುವ ಹಿನ್ನಲೇ ಅವರ ಹುಟ್ಟು ಹಬ್ಬದ ನಿಮಿತ್ಯ ಭಾರತೀಯ ಜನತಾ ಪಾರ್ಟಿವತಿಯಿಂದ ರಕ್ತದಾನ ಶಿಬಿರ ಕಾರ್ಯಕ್ರಮ ಜರುಗಿತು.
ನಗರದ ಬಿಜೆಪಿ ಕಛೇರಿಯಲ್ಲಿ ನಡೆದ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಅಮೀನರೆಡ್ಡಿ ಯಾಳಗಿ ಮಾತನಾಡಿ, ಅನೇಕ ಸವಾಲು ಬಿಕ್ಕಟ್ಟುಗಳ ನಡುವೆಯೂ ದೇಶವನ್ನೂ ಪ್ರಗತಿಯತ್ತ ಮುನ್ನಡೆಸುತಿದ್ದು ಭಾರತದ ಸಮಗ್ರ ಅಭಿವೃದ್ಧಿಯ ದಿಕ್ಕನ್ನು ನಿರ್ಧರಿಸುವಲ್ಲಿ ಧೀಮಂತ ನಾಯಕತ್ವವನ್ನು ಪ್ರದರ್ಶಿಸುತ್ತೀರುವ ಇವರ ಜೀವನದ ಹಾದಿ ಈಗೆ ಮುಂದುವರೆಯಲಿ ಎಂದರು. ಕಾರ್ಯಕ್ರಮದಲ್ಲಿ 85 ಕ್ಕೂ ಹೆಚ್ಚು ಅಭಿಮಾನಿಗಳು ರಕ್ತದಾನ ಮಾಡಿದರು. ಇದನ್ನೂ ಓದಿ: ಮೋದಿ ತಾಯಿಯ AI ವಿಡಿಯೋ ತೆಗೆದುಹಾಕಿ: ಹೈಕೋರ್ಟ್ ಸೂಚನೆ
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ದೇವಿಂದ್ರಪ್ಪ ಕೊನೇರ, ನಗರ ಮಂಡಲ ಅಧ್ಯಕ್ಷ ಚಂದ್ರಶೇಖರ ಯಾಳಗಿ, ತಿರುಪತಿ ಹತ್ತಿಕಟಿಗಿ, ದಾಮು ಪವಾರ, ಮಲ್ಲಿಕಾರ್ಜುನ ಚಿಲ್ಲಾಳ, ಡಾ.ಶಿವರಾಜ ದೇಶಮುಖ, ರಾಜುಗೌಡ ಪಾಟೀಲ ಉಕ್ಕಿನಾಳ, ಡಾ.ಸಂತೋಷ ಚೆನ್ನೂರ, ಅಪ್ಪುಗೌಡ ಯಾಳಗಿ, ಮಹೇಶ ರಸ್ತಾಪುರ, ಸಾಯಿಬಣ್ಣ ನಾಶಿ, ಕರಬಸಪ್ಪ ಬಿರಾಳ ಸೇರಿದಂತೆ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಇದ್ದರು.
