ಶಹಾಪುರ: ತಾಲೂಕಿನ ಮದ್ರಕಿ ಗ್ರಾಮದ ವಾರ್ಡ್.ನಂ 2ರಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ನಾಮಫಲಕ ಲೋಕಾರ್ಪಣೆಯನ್ನು ಗ್ರಾ.ಪಂ ಅಧ್ಯಕ್ಷ ಮಾಪಣ್ಣ ಬಡಿಗೇರ ನೇರವೇರಿಸಿದರು.
ಬಳಿಕ ಮಾತನಾಡಿ ಜಾತಿ, ಮತಭೇದಗಳು ಹೆಚ್ಚಾಗಿದ್ದ ಕಾಲದಲ್ಲಿ ಸಮಾಜದ ತಾರತಮ್ಯಗಳನ್ನು ನಿವಾರಿಸಲು ಬ್ರಹ್ಮಶ್ರೀ ನಾರಾಯಣ ಗುರುಗಳು ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. ಮಾನವೀಯ ಮೌಲ್ಯಗಳಿಗೆ ಹೆಚ್ಚು ಒತ್ತನ್ನು ನೀಡಿ, ಒಂದೇ ಜಾತಿ, ಒಂದೇ ಮತ ಹಾಗೂ ಒಂದೇ ದೇವರು ಎಂಬ ಸತ್ಯ ವಾಕ್ಯವನ್ನು ಪ್ರತಿಪಾದಿಸಿದ್ದ ಅವರು ಅಸ್ಪಶ್ಯತೆ ವಿರುದ್ಧ ಹೋರಾಡಿದರು. ಅವರು ಜಗತ್ತು ಕಂಡAತಹ ಮಹಾನ್ ದಾರ್ಶನಿಕರು ಎಂದರು. ಇದನ್ನೂ ಓದಿ: ಕೊಪ್ಪಳದಲ್ಲಿ ದಾಖಲಾಯಿತು ಯತ್ನಾಳ್ ವಿರುದ್ಧ ದೂರು
ಈ ಸಂದರ್ಭದಲ್ಲಿ ಬಾಬುರಾವ್ ಭೂತ್ಥಾಳಿ, ಅಶೋಕಗೌಡ ಉಮೇಶ ಕಟ್ಟಿಮನಿ, ಭೀಮಯ್ಯ ಕಟ್ಟಿಮನಿ, ಅನಿತಾ ಈಶ್ವರಪ್ಪ, ಶಾಂತಗೌಡ ಹಳಿಮನಿ, ತಿಪ್ಪಣಗೌಡ ಸಾಮಣ್ಣ, ಶಿವಣ್ಣ ಜುನ್ನಾ, ಆಶಪ್ಪಗೌಡ ಗುತ್ತೇದಾರ ಸೇರಿದಂತೆ ಗುತ್ತೇದಾರ ಸಮಾಜದ ಮುಖಂಡರು, ಗ್ರಾಮದ ಹಿರಿಯರು ಇದ್ದರು.
