ಬೆಂಗಳೂರು: ಎಲ್ಲಾ ಅಳೆತಡೆಗಳನ್ನು ಹಾಗೂ ವಿಗ್ನಗಳನ್ನು ದಾಟಿ ಇದೀಗ ಕಾಂತಾರ: ಚಾಪ್ಟರ್ 1 ತೆರೆ ಮೇಲೆ ಅಪ್ಪಳಿಸಲು ಸಜ್ಜಾಗಿದೆ. ಇದೇ ಅಕ್ಟೋಬರ್ 02 ರಂದು ದೇಶ ಮಾತ್ರವಲ್ಲದೇ ಪ್ರಪಂಚದಾದ್ಯಂತ ಸುಮಾರು ಏಳು ಭಾಷೆಗಳಲ್ಲಿ ಒಂದೇ ಬಾರಿಗೆ ತೆರೆ ಕಾಣುತ್ತಿರುವುದಂತೂ ಕನ್ನಡ ಚಿತ್ರರಂಗದಲ್ಲಿ ಬಹು ಹೆಮ್ಮೆಯ ಸಂಗತಿಯಾಗಿದೆ. ಅಲ್ಲದೆ ಕಾಂತರಾ ಚಾಪ್ಟರ್ 1 ಬಿಡುಗಡೆಗೂ ಮುನ್ನವೇ ದಾಖಲೆ ಬರೆಯುತ್ತಿದೆ.
ಹೌದು, ಸುಮಾರು 2,500ಕ್ಕೂ ಅಧಿಕ ಪರದೆಗಳಲ್ಲಿ ಪೇಯ್ಡ್ ಪ್ರೀಮಿಯರ್ ಮಾಡಲು ಯೋಜಿಸಲಾಗಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿರುವ ಹಾಗೂ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ: ಚಾಪ್ಟರ್ 1 ಚಿತ್ರವು ಕನ್ನಡ, ಮಲಯಾಳಂ, ತಮಿಳು, ತೆಲುಗು, ಹಿಂದಿ, ಬಂಗಾಳಿ ಮತ್ತು ಇಂಗ್ಲಿಷ್ ಸೇರಿದಂತೆ 7ಕ್ಕೂ ಹೆಚ್ಚು ಭಾಷೆಗಳಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತದೆ. ಈ ಕ್ರಮವು ಆರಂಭಿಕ ಸಂಚಲನವನ್ನು ಸೃಷ್ಟಿಸುವ ನಿರೀಕ್ಷೆಯಿದೆ.
ಕಾಂತಾರ: ಚಾಪ್ಟರ್ 1 ಸಿನಿಮಾವನ್ನು ಭಾರಿ ಬಜೆಟ್ನಲ್ಲಿ ನಿರ್ಮಿಸಲಾದ ಈ ಚಿತ್ರ ಮತ್ತು ಡಿಜಿಟಲ್ ಹಕ್ಕುಗಳನ್ನು ಈಗಾಗಲೇ ಅಮೆಜಾನ್ ಪ್ರೈಮ್ ವಿಡಿಯೋ ₹125 ಕೋಟಿಗೆ ಪಡೆದುಕೊಂಡಿದೆ. ಈ ಮೂಲಕ ಇದು ಕನ್ನಡದ ಅತ್ಯಂತ ಮೌಲ್ಯಯುತ ಚಿತ್ರಗಳಲ್ಲಿ ಒಂದು ಎಂಬ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಭಾರತ ಮತ್ತು ವಿದೇಶಗಳಾದ್ಯಂತ ದೊಡ್ಡ ನಿರ್ಮಾಣ ಸಂಸ್ಥೆಗಳು ಚಿತ್ರದ ವಿತರಣಾ ಹಕ್ಕುಗಳನ್ನು ಪಡೆದುಕೊಂಡಿವೆ. ಇದನ್ನೂ ಓದಿ: ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಕಿಚ್ಚ
ಪೇಯ್ಡ್ ಪ್ರದರ್ಶನಗಳು ಸಾಮಾನ್ಯವಾಗಿ ಭಾರತದಾದ್ಯಂತ ಪ್ರದರ್ಶನಗೊಳ್ಳುವ ದೊಡ್ಡ ಬ್ಲಾಕ್ಬಸ್ಟರ್ ಚಲನಚಿತ್ರಗಳಿಗೆ ಮಾತ್ರ ನಡೆಯುತ್ತವೆ. ಆದರೆ ಈ ಬಾರಿ, ಬಿಡುಗಡೆಗೂ ಮೊದಲೇ, ಅನೇಕ ಶೋಗಳು ಈಗಾಗಲೇ ಮಾರಾಟವಾಗುತ್ತಿವೆ. ಆದ್ದರಿಂದ, ಟಿಕೆಟ್ಗಳ ಬೇಡಿಕೆ ಹಿಂದೆಂದಿಗಿಂತಲೂ ಹೆಚ್ಚಾಗಿರುತ್ತದೆ- ಬಹುಶಃ ದಾಖಲೆಗಳನ್ನು ಮುರಿಯಬಹುದು ಎಂದು ತಜ್ಞರು ಭಾವಿಸುತ್ತಾರೆ.
ಒಟ್ಟಾರೆ ಕನ್ನಡ ಚಿತ್ರರಂಗವು ಕೇವಲ ಭಾರತ ದೇಶವಲ್ಲದೆ ಇಡೀ ಪ್ರಪಂಚದಾದ್ಯಂತ ಹೆಸರು ಮಾಡುತ್ತಿರುವುದಂತೂ ಕನ್ನಡ ಚಿತ್ರರಂಗಕ್ಕೆ ಹೆಮ್ಮೆಯ ಸಂಗತಿಯಾಗಿದೆ.
