ಬಹುಭಾಷಾ ನಟಿ ಅನುಷ್ಕಾ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ‘ಘಾಟಿ’ ಸಿನಿಮಾ ಇಂದು (ಶುಕ್ರವಾರ ಸೆಪ್ಟೆಂಬರ್ 5) ರಂದು ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ರಿಲೀಸ್ ಆಗಿದೆ.
ಹೌದು, ಅನುಷ್ಕಾ ಶೆಟ್ಟಿ ಅಭಿನಯದ ಘಾಟಿ ಸಿನಿಮಾ ಇಂದು ಬಿಡುಗಡೆಯಾಗಿದ್ದು ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿರುವ ಬೆನ್ನೆಲೆ ಘಾಟಿ ಸಿನಿಮಾಗೆ ಸಂಕಷ್ಟಕೊಂದು ಎದುರಾಗಿದೆ. ಘಾಟಿ ಸಿನಿಮಾದ ಮೇಲೆ ತೆಲಂಗಾಣ ಪೊಲೀಸ್ ಇಲಾಖೆಯ ವಿಭಾಗವೊಂದು ಹದ್ದಿನ ಕಣ್ಣಿಟ್ಟಿದೆ. ಸಿನಿಮಾದಲ್ಲಿನ ಕೆಲ ಅಂಶಗಳು ಸಮಾಜಕ್ಕೆ ಹಾನಿಕಾರಕವಾಗಿವೆ ಎಂದು ಸಹ ಹೇಳಿದೆ.
ತೆಲಂಗಾಣ ಪೊಲೀಸ್ ಇಲಾಖೆ ಮಾದಕ ವಸ್ತು ನಿಗ್ರಹ ವಿಭಾಗಕ್ಕೆ ಈಗಲ್ ಎಂದು ಹೆಸರಿದ್ದು, ಈಗಲ್ ನಿನ್ನೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಅನುಷ್ಕಾ ಶೆಟ್ಟಿ ನಟನೆಯ ‘ಘಾಟಿ’ ಸಿನಿಮಾದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ. ‘ಘಾಟಿ’ ಸಿನಿಮಾದ ಟ್ರೈಲರ್ನಲ್ಲಿ ಆಕ್ಷೇಪಣಕಾರಿ ಅಂಶಗಳಿವೆ. ಈ ಸಿನಿಮಾ ಗಾಂಜಾ ಉತ್ಪಾದನೆ ಮತ್ತು ಸೇವನೆಗೆ ಪ್ರಚೋದನೆ ಮತ್ತು ಪ್ರಚಾರವನ್ನು ನೀಡುತ್ತಿರುವ ಅನುಮಾನ ವ್ಯಕ್ತವಾಗಿದ್ದು, ಈ ಸಿನಿಮಾದ ಮೇಲೆ ನಾವು ಗಮನ ಹರಿಸಲಿದ್ದೇವೆ’ ಎಂದಿದೆ. ಇದನ್ನೂ ಓದಿ: ಒಂದೇ ತೆರೆ ಮೇಲೆ ಮತ್ತೆ ಒಂದಾದ ಕ್ಯೂಟ್ ಕಪಲ್ಸ್!
ಘಾಟಿ’ ಸಿನಿಮಾ ಗಾಂಜಾ ಉತ್ಪಾದಿಸುವ ಮತ್ತು ಅದನ್ನು ಸಾಗಿಸುವ ಸಮುದಾಯವೊಂದರ ಕತೆಯನ್ನು ಒಳಗೊಂಡಿದೆ. ಸಮುದಾಯದ ಯುವತಿಯ ಪಾತ್ರದಲ್ಲಿ ಅನುಷ್ಕಾ ಶೆಟ್ಟಿ ನಟಿಸಿದ್ದಾರೆ. ಸಾಹಸಮಯ ಸಿನಿಮಾ ಇದಾಗಿದ್ದು, ಅನುಷ್ಕಾ ಶೆಟ್ಟಿ ರಫ್ ಆಂಡ್ ಟಫ್ ಅವತಾರದಲ್ಲಿ ಈ ಸಿನಿಮಾನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಸಿನಿಮಾನಲ್ಲಿ ಗಾಂಜಾ ಸಾಗಾಟದ ಅಂಶ ತೆಲಂಗಾಣ ಮಾದಕ ವಸ್ತು ನಿಗ್ರಹ ದಳದ ಆಕ್ಷೇಪಕ್ಕೆ ಕಾರಣವಾಗಿದೆ.
