ಬೆಂಗಳೂರು: ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರು ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರೋಷನ್ ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅನುಶ್ರೀ ಅವರು ಮದುವೆ ನಂತರ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ.
ಮದುವೆ ನಂತರ ಮಾಧ್ಯಮ ಘೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮನ್ನು ಒಂದುಗೂಡಿಸಿದ್ದು ನಮ್ಮ ಪ್ರೀತಿಯ ಅಪ್ಪು ಸರ್ ಎಂದು ಪುನೀತ್ ರಾಜಕುಮಾರ್ ರವರನ್ನು ನೆನೆದರು.
ಮೊದಲು ನಾವಿಬ್ಬರು ಫ್ರೆಂಡ್ಸ್ ಆಗಿದ್ದೆವು. ಬಳಿಕ ನನಗೆ ಅವರು ಇಷ್ಟ ಆದರು. ಅವರಿಗೆ ನಾನು ಇಷ್ಟ ಆದೆ. ಹೀಗಾಗಿ ಮದುವೆಯಾಗಲು ನಿರ್ಧರಿಸಿದೆವು. ರೋಷನ್ ಕೂಡ ಅಪ್ಪು ಅವರನ್ನು ಬಹಳ ಇಷ್ಟಪಡುವವರು. ನಾವು ಮೊದಲು ಭೇಟಿಯಾಗಿದ್ದು ಪುನೀತ ಪರ್ವ ಕಾರ್ಯಕ್ರಮದಲ್ಲಿ. ಒಂದು ಲೆಕ್ಕದಲ್ಲಿ ಅಪ್ಪು ಅವರೇ ನಮ್ಮನ್ನು ಸೇರಿಸಿದ್ದಾರೆ ಎಂದರು. ಇದನ್ನೂ ಓದಿ: ತಾಳಿ ಕಟ್ಟುವಾಗ ಭಾವುಕರಾದ ಅನುಶ್ರೀ!
ಮದುವೆ ಸುಂದರವಾಗಿ, ಸರಳವಾಗಿ ನೆರವೇರಿದೆ. ಬಹಳ ಕಡಿಮೆ ಜನರ ಸಮ್ಮುಖದಲ್ಲಿ ನಮ್ಮಿಬ್ಬರ ವಿವಾಹ ಆಗಬೇಕು ಎಂಬುದು ಆಸೆಯಾಗಿತ್ತು. ರೋಷನ್ ರಾಮಮೂರ್ತಿ ಕುಶಾಲ ನಗರ ಮೂಲದವರು. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಮದುವೆಗೆ ಬಂದಿರುವ ಎಲ್ಲರಿಗೂ ಧನ್ಯವಾದಗಳು’ʼ ಎಂದು ತಿಳಿಸಿದರು.
