ಬೆಂಗಳೂರು: ಕನ್ನಡದ ಖ್ಯಾತ ನಿರೂಪಕಿ ಅನುಶ್ರೀಯವರು ಅದ್ದೂರಿಯಾಗಿ ಇಂದು (ಗುರುವಾರ ಆಗಸ್ಟ್ 28) ರಂದು ರೋಶನ್ ಅವರ ಜೊತೆ ವಿವಾಹವಾಗಿದ್ದಾರೆ. ಅನುಶ್ರೀ ಅವರ ಅಭಿಮಾನಿಗಳು ಮದುವೆ ಯಾವಾಗ, ಮದುವೆ ಯಾವಾಗ ಎಂದು ಕೇಳುತ್ತಿದ್ದರು. ಅದಕ್ಕೆಲ್ಲ ಅನುಶ್ರೀ ಅವರು ಉತ್ತರ ನೀಡಿದ್ದಾರೆ.
ಬೆಂಗಳೂರಿನಲ್ಲಿರುವ ಖಾಸಗಿ ರೆಸಾರ್ಟ್ ಒಂದರಲ್ಲಿ ಅದ್ದೂರಿಯಾಗಿ ವಿವಾಹ ನೆರವೇರಿತು. ಅನುಶ್ರೀ ವಿವಾಹಕ್ಕೆ ಬೆಳ್ಳಿತೆರೆ ಕಲಾವಿದರು ಸೇರಿದಂತೆ ಕನ್ನಡ ಚಿತ್ರರಂಗದ ಹಲವು ನಟ ನಟಿಯರು ಬಂದು ನವ ವಧು ವರರಿಗೆ ಹಾರೈಸಿದ್ದಾರೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿರೂಪಕಿ ಅನುಶ್ರೀ
ಇನ್ನು ರೋಷನವರು ಅನುಶ್ರೀ ಅವರಿಗೆ ತಾಳಿ ಕಟ್ಟುವಾಗ ಅನುಶ್ರೀ ಭಾವುಕರಾಗಿದ್ದಾರೆ. ಪ್ರತಿ ಗಂಡು ಹಾಗೂ ಹೆಣ್ಣಿಗೆ ವಿವಾಹ ಅನ್ನೋದು ವಿಶೇಷ ಕ್ಷಣ. ಆ ವೇಳೆ ಕೆಲವರು ಕಣ್ಣೀರು ಹಾಕಿದ ಉದಾಹರಣೆ ಇದೆ. ಇದಕ್ಕೆ ಅನುಶ್ರೀ ಕೂಡ ಹೊರತಾಗಿಲ್ಲ. ರೋಷನ್ ತಾಳಿ ಕಟ್ಟುವಾಗ ಅನುಶ್ರೀ ಭಾವುಕರಾಗಿದ್ದರು.
