ಬೆಂಗಳೂರು: ಕನ್ನಡದಲ್ಲಿ ಅತ್ಯಂತ ದೊಡ್ಡ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್ ಶೋ. ಕನ್ನಡ ಬಿಗ್ ಬಾಸ್ ಶೋ ಈಗಾಗಲೇ 11 ಸೀಸನ್ ಗಳನ್ನು ಮುಗಿಸಿ ಮತ್ತೆ ಇದೀಗ 12ನೇ ಸೀಸನ್ ಪ್ರಾರಂಭ ಮಾಡಲು ದಿನಗಣನೆ ಪ್ರಾರಂಭವಾಗಿದೆ. ಬಿಗ್ ಬಾಸ್ ಎಂದ ಕೂಡಲೇ ನೆನಪಾಗುವುದು ಈ ಬಾರಿ ದೊಡ್ಡ ಮನೆಗೆ ಯಾವೆಲ್ಲ ಕಂಟೆಸ್ಟೆಂಟ್ಗಳು ಭಾಗವಹಿಸುತ್ತಾರೆ ಎಂದು ಎಲ್ಲರೂ ಕಾತುರದಿಂದ ಕಾಯುತ್ತಾರೆ.
ಕಾತುರದಿಂದ ಕಾಯುತ್ತಿರುವ ಬಿಗ್ ಬಾಸ್ ಅಭಿಮಾನಿಗಳಿಗೆ ಇದೀಗ ಬಿಗ್ ಬಾಸ್ ಯಾವಾಗ ಆರಂಭ ಆಗುತ್ತದೆ ಎಂಬುದನ್ನು ಹೊರ ಹಾಕಿದೆ. ಕಿಚ್ಚ ಸುದೀಪ್ ಅವರು ಸೆ. 2ರಂದು ಬರ್ತ್ಡೇ ಆಚರಿಸಿಕೊಳ್ಳುತ್ತಿದ್ದಾರೆ. ಈ ದಿನದಂದು ಬಿಗ್ ಬಾಸ್ ಪ್ರೋಮೋ ಬಿಡುಗಡೆ ಕಾಣಲಿದೆ ಎಂದು ಹೇಳಲಾಗುತ್ತಿದೆ. ಸೆ.28ರಂದು ಬಿಗ್ ಬಾಸ್ ಗ್ರ್ಯಾಂಡ್ ಓಪನಿಂಗ್ ನಡೆಯಲಿದೆ ಎನ್ನಲಾಗಿದೆ. 29ರಿಂದ ದೊಡ್ಮನೆ ಆಟ ಶುರುವಾಗಲಿದೆ. ಯಾವೆಲ್ಲ ಸ್ಪರ್ಧಿಗಳು ಈ ಬಾರಿ ಇರುತ್ತಾರೆ ಎನ್ನುವ ಕುತೂಹಲಕ್ಕೆ ಪ್ರೋಮೋದಲ್ಲಿ ಉತ್ತರ ಸಿಗಲಿದೆ. ಇದನ್ನೂ ಓದಿ: ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಜಾಗ ನೀಡಿದ ಸುದೀಪ್!
