Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ನಾನು ಬುರುಡೆ ಗ್ಯಾಂಗ್ ನಂಬಿ ಮೋಸ ಹೋದೆ; ಮಾಸ್ಕ್ ಮ್ಯಾನ್ ಕಣ್ಣೀರು
  • Bangalore

ನಾನು ಬುರುಡೆ ಗ್ಯಾಂಗ್ ನಂಬಿ ಮೋಸ ಹೋದೆ; ಮಾಸ್ಕ್ ಮ್ಯಾನ್ ಕಣ್ಣೀರು

admin August 26, 2025 1 minute read
WhatsApp Image 2025-08-26 at 14.59.03
Spread the love

ಮಂಗಳೂರು: ಧರ್ಮಸ್ಥಳ ಬುರುಡೆ ಕೇಸ್ ಕೇವಲ ರಾಜ್ಯ ಮಾತ್ರವಲ್ಲದೆ ಇಡೀ ದೇಶದಲ್ಲೇ ಬಾರಿ ಸದ್ದು ಮಾಡಿದ ಸುದ್ದಿಯಾಗಿತ್ತು. ದೂರುದಾರ ನಾನು ಸಾವಿರಾರು ಹೆಣಗಳನ್ನು ಹೂತಿದ್ದೇನೆ ಎಂದು ದೂರು ದಾಖಲಿಸಿದ್ದರು. ಆ ದೂರಿನ ಮೇರೆಗೆ ರಾಜ್ಯ ಸರ್ಕಾರ ಎಸ್ಐಟಿ ತಂಡವನ್ನು ರಚಿಸಿ ಚುರುಕಿನ ಕಾರ್ಯಚರಣೆಯನ್ನು ನಡೆಸಿತು. ಆದರೆ ಕಾರ್ಯಚರಣೆಯಲ್ಲಿ ಯಾವುದೇ ಬುರುಡೆಗಳು ಅಥವಾ ಶವಗಳು ಸಿಗದಿದ್ದ ಕಾರಣಕ್ಕೆ ಎಸ್ಐಟಿ ತಂಡ ತನಿಖೆಯನ್ನು ನಿಲ್ಲಿಸಿತು. ತನಿಖೆಯನ್ನು ನಿಲ್ಲಿಸಿದ ಮೇಲೆ ಇದಕ್ಕೆ ಮೂಲ ಕಾರಣ ಯಾರು ಎಂಬ ಹುಡುಕಾಟಕ್ಕೆ ಮುಂದಾದಾಗ ಅಲ್ಲಿ ಸಿಕ್ಕಿದ್ದು ದೂರುದಾರ ಮಾಸ್ಕ್ ಮ್ಯಾನ್ ಚಿನ್ನಯ್ಯ.

ಹೌದು, ಇಡೀ ದೇಶದ ನಿದ್ದೆಗೆಡಿಸಿದ ಮಾಸ್ಕ್ ಮ್ಯಾನ್ ಚಿನ್ನಯ್ಯ ಈಗ ಪೊಲೀಸರ ಅತಿಥಿಯಾಗಿದ್ದಾರೆ. ಎಸ್ಐಟಿ ಪೊಲೀಸ್ ಅಧಿಕಾರಿಗಳು ಬೆಂಡೆತ್ತಿ ಬೆಂಡೆಕಾಯಿ ಮಾಡುತ್ತಿದ್ದಾರೆ. ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು ಪೊಲೀಸರು ವಿಚಾರನೆ ನಡೆಸುತ್ತಿದ್ದಂತೆ ಒಂದೊಂದಾಗಿ ಹೊರ ಬೀಳುತ್ತಿವೆ. ವಿಚಾರಣೆ ವೇಳೆ ಚಿನ್ನಯ್ಯ ಅವರು ಮಹತ್ವದ ಮಾಹಿತಿಯನ್ನು ನೀಡಿದ್ದು, ನನಗೆ 12 ಜನ ಸುಳ್ಳು ಹೇಳಲು 5 ಲಕ್ಷ ದುಡ್ಡು ನೀಡಿದ್ದರು ಅದರಂತೆ ಅವರು ಹೇಳಿದಂತೆ ನಾನು ನನ್ನ ಕೆಲಸ ಮಾಡಿದ್ದೇನೆ.

ಇದರಲ್ಲಿ ನನ್ನದು ಏನು ತಪ್ಪಿಲ್ಲ. ದಯಮಾಡಿ ನನ್ನನ್ನು ಬಿಟ್ಟುಬಿಡಿ ಎಂದು ಕಣ್ಣೀರು ಹಾಕಿದ್ದಾರೆ ಎಂದು ತಿಳಿದುಬಂದಿದೆ. ಬೇಕಾದರೆ ನನ್ನನ್ನು ಕೋರ್ಟಿಗೆ ಕರೆದುಕೊಂಡು ಹೋಗಿ ನಾನು ಜಡ್ಜ್ ಮುಂದೆ ಇರುವ ಸತ್ಯವನ್ನು ಹೇಳಿಕೊಳ್ಳುತ್ತೇನೆ ಎಂದು ಅಂಗಲಾಚಿದ್ದಾರೆ ಎಂದು ತಿಳಿದುಬಂದಿದೆ.

ಪ್ರಶ್ನೆ ಕೇಳುತ್ತಿದ್ದಂತೆ ಕಣ್ಣೀರು ಹಾಕುತ್ತಿರುವ ಚಿನ್ನಯ್ಯ ಈ ಪ್ರಕರಣದಲ್ಲಿ ನನಗೆ ಏನೂ ಗೊತ್ತಿಲ್ಲ. ದುಡ್ಡಿನ ಆಸೆಗೆ ನಾನು ಮುಂದೆ ಬಂದಿದ್ದೆ. ಆದರೆ ಈಗ ನಾನು ಮಾಡುತ್ತಿರುವುದು ತಪ್ಪು ಎನ್ನುವುದು ಗೊತ್ತಾಗಿದೆ. ಈ ಷಡ್ಯಂತ್ರದ ಹಿಂದೆ 12 ಮಂದಿ ಇರುವುದಾಗಿ ಚಿನ್ನಯ್ಯ ಬಾಯಿಬಿಟ್ಟಿದ್ದಾನೆ ಎಂಬ ವಿಚಾರ ಎಸ್‌ಐಟಿ ಮೂಲಗಳಿಂದ ಪಬ್ಲಿಕ್‌ ಟಿವಿಗೆ ತಿಳಿದು ಬಂದಿದೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್; ತಿಮರೋಡಿ ಮನೆ ಮೇಲೆ SIT ದಾಳಿ

ನಾನು ಧರ್ಮಸ್ಥಳದಲ್ಲಿ ಕೆಲಸ ಮಾಡಿದ್ದೇನೆ ಮತ್ತು ಕೆಲ ಹೆಣಗಳನ್ನು ಹೂತಾಕಿದ್ದೂ ನಿಜ. ಆದರೆ ಸಾವಿರಾರು ಹೆಣ ಹೂತಿದ್ದೆ ಎನ್ನುವುದು ಸುಳ್ಳು. ಈ ಪ್ರಕರಣ ಇಷ್ಟು ದೊಡ್ಡದಾಗುತ್ತೆಂದು ಗೊತ್ತಿರಲಿಲ್ಲ. ಕೋರ್ಟ್‌ಗೆ ಕರೆದುಕೊಂಡು ಹೋದರೆ ನಾನು ಸತ್ಯ ಹೇಳುತ್ತೇನೆ.

ನಾನು ಬುರುಡೆ ಗ್ಯಾಂಗ್ ನಂಬಿ ಮೋಸ ಹೋಗಿದ್ದು ಅವರು ಹೇಳಿದಂತೆ ಕೇಳಿದ್ದೇನೆ. ನಾನು ಪೊಲೀಸರಿಗೆ ಕೊಟ್ಟ ಬುರುಡೆ ಎಲ್ಲಿಯದ್ದು ಎನ್ನುವುದು ಗೊತ್ತಿಲ್ಲ. ಪಿತೂರಿ ಗ್ಯಾಂಗ್ ಕೊಟ್ಟ ಬುರುಡೆಯನ್ನೇ ನಾನು ನೀಡಿದ್ದೇನೆ. ಅವರು ನಾವು ಹೇಳಿದಷ್ಟು ಮಾಡು ಎಂದಿದ್ದರು. ಅದನ್ನೇ ನಾನು ಮಾಡಿದ್ದೇನೆ.

ನಾನು ದುಡ್ಡಿನ ಆಸೆಗೆ ಈ ಕೆಲಸ ಒಪ್ಪಿಕೊಂಡೆ. ಶವ ಶೋಧದ ವೇಳೆ ಅಸ್ಥಿ ಸಿಗುವುದಿಲ್ಲ ಎಂಬ ನಂಬಿಕೆ ಇತ್ತು. ಆದರೆ ಪಾಯಿಂಟ್ 6ರಲ್ಲಿ ತಲೆ ಬುರುಡೆ ಸಿಕ್ಕಾಗ ನಾನು ಗಾಬರಿಗೊಂಡೆ. ಅವತ್ತೇ ಸತ್ಯ ಹೇಳಬೇಕೆಂದು ತೀರ್ಮಾನಿಸಿದ್ದೆ.

ಶೋಧ ಕಾರ್ಯ ಮುಗಿಸಿ ವಾಪಸ್ಸಾದ ನಂತರ ಬುರುಡೆ ಗ್ಯಾಂಗ್‌ ನನ್ನ ಭೇಟಿ ಮಾಡಿತ್ತು. ನೀನು ಈಗ ಹಿಂದೇಟು ಹಾಕಿದರೆ ನಿನಗೇ ಕಷ್ಟವಾಗಲಿದೆ. ಧರ್ಮಸ್ಥಳದ ತೇಜೋವಧೆ ಮಾಡಿದ್ದೀಯ. ಎದುರಾಳಿಗಳು ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಕೊಲ್ಲುತ್ತಾರೆ ಎಂದು ಬೆದರಿಕೆ ಹಾಕಿದ್ದರು. ಈ ಬೆದರಿಕೆಗೆ ಹೆದರಿ ನಾನು ಅವರು ಹೇಳಿದಂತೆ ಕೇಳಿದ್ದೇನೆ ಎಂದಿದ್ದಾರಂತೆ.

 

About the Author

admin

Administrator

Visit Website View All Posts

Spread the love

Post navigation

Previous: ಉಚ್ಛಾಟನೆಗೆ ಹೆದರಿ ಕ್ಷಮೆಯಾಚಿಸಿದ ಡಿಸಿಎಂ ಡಿಕೆಶಿ: ಜೆಡಿಎಸ್
Next: BBK12: ಸೆ. 29ರಿಂದ ದೊಡ್ಮನೆ ಆಟ ಶುರು!

Views:

48

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.