Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಶೋಷಿತ ಸಮುದಾಯ ಆಳುವ ವರ್ಗ ಆಗಬೇಕು: ಕಾಂಗ್ರೆಸ್‌ ನಾಯಕರ ನುಡಿ
  • Front news
  • Politics
  • State

ಶೋಷಿತ ಸಮುದಾಯ ಆಳುವ ವರ್ಗ ಆಗಬೇಕು: ಕಾಂಗ್ರೆಸ್‌ ನಾಯಕರ ನುಡಿ

admin August 24, 2025
WhatsApp Image 2025-08-24 at 7.18.00 PM
Spread the love

ಶಹಾಪುರ: ಇಡೀ ಶೋಷಿತ ಸಮುದಾಯಗಳು ಆಳುವ ವರ್ಗಗಳು ಆಗಬೇಕು ಎನ್ನುವ ಬಾಬಾ ಸಾಹೇಬರ ಕನಸನ್ನು ನಾವೆಲ್ಲರೂ ಒಗ್ಗೂಡಿ ನನಸು ಮಾಡಬೇಕು. ಆದ್ದರಿಂದ ಒಗ್ಗಾಟ್ಟಾದರೆ ಉಳಿತಿವಿ. ವಿಭಜನೆಯಾದರೆ ಸಾಯುತ್ತೇವೆ ಇದನ್ನು ಶೋಷಿತ ವರ್ಗಗಳು ಅರಿಯಬೇಕು ಎಂದು ಉರಿಲಿಂಗ ಪೆದ್ದಿ ಮಹಾಸಂಸ್ಥಾನದ ಪೀಠಾಧಿಪತಿ ಜ್ಞಾನಪ್ರಕಾಶ ಮಹಾಸ್ವಾಮಿಗಳು ನುಡಿದರು.

ನಗರದ ಆರಬೋಳ ಕಲ್ಯಾಣ ಮಂಟಪದಲ್ಲಿ ನಡೆದ ಶೋಷಿತ ವರ್ಗಗಳ ಐಕ್ಯತಾ ಸಮಾವೇಶ ಸಾನೀಧ್ಯ ವಹಿಸಿ ಮಾತನಾಡಿ ಓರ್ವ ಆದಿವಾಸಿ ಮಹಿಳೆ ಇಂದು ರಾಷ್ಟçಪತಿಯಾಗುವಂತೆ ಮಾಡಿದ್ದು ಸಂವಿಧಾನ. ನೀವು ನಿಮ್ಮಗಳ ಪಾಲು ತೆಗೆದುಕೊಳ್ಳಬೇಕು. ಮತದಾನಕ್ಕೆ ಸಾಕಷ್ಟು ಶಕ್ತಿಯಿದ್ದು ಇದು ವಿಧಾನಸಭೆ ಪ್ರವೇಶಕ್ಕೂ ಅವಕಾಶ ಕೊಡುತ್ತೆ, ಅದರಿಂದ ತೆಗೆದು ಹಾಕಲು ಸಹ ಮತದಾನಕ್ಕೆ ಶಕ್ತಿ ಇದೆ. ಇದನ್ನು ಮೊದಲು ತಿಳಿಯಬೇಕು. ಕಲ್ಲು ದೇವರು ದೇವರಲ್ಲಾ. ತನ್ನನ್ನ ತಾನು ಅರಿತವನೆ ನಿಜವಾದ ದೇವರು, ಶೋಷಿತ ವರ್ಗಗಳನ್ನು ಒಗ್ಗಾಟ್ಟಾಗಿಸುವುದೇ ಶೋಷಿತ ಸಮಾವೇಶದ ಆಶಯ ಎಂದು ಹೇಳಿದರು.

ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಹೆಚ್.ಸಿ ಮಹಾದೇವಪ್ಪ ಮಾತನಾಡಿ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನವು ಸಮಾನತೆಯ ಸಂಜೀವಿನಿ. ಸಂವಿಧಾನದ ಕುರಿತಂತೆ ಅಸಹನೆ ತೋರುವುದನ್ನು ಬಿಟ್ಟು ಅದರ ಆಶಯಗಳಿಗೆ ಅನುಗುಣವಾಗಿ ನಡೆಯಬೇಕು.

ಲೋಕೊಪಯೋಗಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ
ಸಂವಿಧಾನ ಕೈತಪ್ಪಿ ಹೋಗದಂತೆ ನಾವೆಲ್ಲರೂ ಒಗ್ಗಟ್ಟಾಗಬೇಕು. ಮನುವಾದಿಗಳ ಮಾಡಿದ ಕುತಂತ್ರಗಳನ್ನು ಬೇರೆಯಾಗಿ, ಇದೀಗ ಒಂದಾಗುವ ಕಾಲ ಬಂದಿದ್ದು, ಇಂದಿನಿಂದಲೇ ಪ್ರಾರಂಭವಾಗಲಿ. ಸಂವಿಧಾನದಡಿಯಲ್ಲಿ ನಾವೆಲ್ಲರೂ ಒಂದೆ ಎನ್ನುವ ರೀತಿಯಲ್ಲಿರೋಣ. ಅಂಬೇಡ್ಕರ್ ಹೇಳಿರುವ ಶಿಕ್ಷಣ, ಸಂಘಟನೆ ಹೋರಾಟದ ಜೊತೆಗೆ ರಾಜಕೀಯ ಸೇರಿಸಿಕೊಳ್ಳಬೇಕು. ನಿಮ್ಮ ನಿಮ್ಮ ಸಮುದಾಯವನ್ನು ನಿವೇ ಗಟ್ಟಿಗೊಳಿಸಬೇಕು. ಪ್ರತಿ ಊರಲ್ಲಿ ಒಬ್ಬರು ಅಂಬೇಡ್ಕರ್ ಬೆಳೆಯಬೇಕು, ಆಗ ನಮ್ಮ ಹಕ್ಕು, ನ್ಯಾಯ ,ರಾಜಕೀಯ ಶಕ್ತಿ ಪಡೆಯಲು ಸಹಾಯಕವಾಗಲಿದೆ. ಶೋಷಿತ ಸಮುದಾಯದವರು ಸಂಘಟಿತರಾಗಿ ಸಮಾವೇಶ ನಡೆಸಬೇಕು. ಬುದ್ಧ ,ಬಸವ, ಅಂಬೇಡ್ಕರ್ ನಮಗೆ ಪ್ರೇರಣೆಯಾಗಬೇಕು. ಎಲ್ಲ ಮಹಾನ್ ನಾಯಕರ ವಿಚಾರಗಳನ್ನು ತಿಳಿದುಕೊಂಡು ಗಟ್ಟಿಯಾಗಬಹುದು. ಜಾತಿ ತಾರತಮ್ಯ, ಜಾತಿ ಶೋಷಣೆ, ಜಾತಿ ಆಧಾರಿತ ಅಸಮಾನತೆ ಜಾರಿಯಲ್ಲಿ ಇರುವವರೆಗೆ ಇಂಥಾ ಸಮಾವೇಶಗಳು ಅಗತ್ಯ ಮತ್ತು ಅನಿವಾರ್ಯ ಎಂದು ಹೇಳಿದರು.

ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಮಾತನಾಡಿ, ಬಾಬಾ ಸಾಹೇಬರು ಸಂವಿಧಾನದ ಮೂಲಕ ಶಕ್ತಿ ತುಂಬಿದ್ದಾರೆ. ಎಲ್ಲಾ ಸಮುದಾಯದ ಯುವ ಪೀಳಿಗೆ ಶೈಕ್ಷಣೀಕ, ರಾಜಕೀಯವಾಗಿ ಪ್ರತಿಯೊಬ್ಬರು ಬಲಿಷ್ಠರಾಗಬೇಕು. ಬುದ್ಧ, ಬಸವ, ಅಂಬೇಡ್ಕರ್ ಅವರ ಕಂಡ ಕನಸನ್ನು ಕಾಂಗ್ರೆಸ್ ಪಕ್ಷ ನನಸು ಮಾಡುತ್ತಿದೆ. ಈ ಭಾಗಕ್ಕೆ ೩೭೧(ಜೆ) ಮೂಲಕ ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್ ಅವರು ಜಾರಿಗೆ ತರುವ ಮೂಲಕ ಶಕ್ತಿ ತುಂಬಿದ್ದಾರೆ. ಎಲ್ಲ ಸಮುದಾಯ ಬಲುಷ್ಠಗೊಳ್ಳಬೇಕು ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಿಕೇತರಾಜ್ ಮೌರ್ಯ, ಅಲ್ ಹುಸೇನಿ ಸಜ್ಜಾದ ನಶೀನ್ ದರ್ಗಾ ಹಜರತ್ ಖಾಜಾ ಬಂದೇನವಾಜ್ ಹಾಗೂ ರಾಜ್ಯ ವಕ್ಫ ಮಂಡಳಿ ಅಧ್ಯಕ್ಷ ಸೈಯದ್ ಮೊಹಮ್ಮದ್ ಅಲಿ, ದಲಿತ ಹಿಂದುಳಿದ ಅಲ್ಪಸಂಖ್ಯಾತರ ಒಕ್ಕೂಟ ರಾಜ್ಯಾಧ್ಯಕ್ಷ ಕೆ.ಎಮ್ ರಾಮಚಂದ್ರಪ್ಪ ಮಾತನಾಡಿದರು. ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಾ.ಡಿ.ಜಿ ಸಾಗರ ಅಧ್ಯಕ್ಷತೆ ವಹಿಸಿದ್ದರು.

About the Author

admin

Administrator

Visit Website View All Posts

Spread the love

Post navigation

Previous: ಪ್ರಜಾ ಸಮಸ್ಯೆಗಳಿಗೆ ಪ್ರಜಾವಾಹಿನಿ ಧ್ವನಿ, ಮೆಚ್ಚಿದ ಸರ್ಕಾರ ಪ್ರತಿಸ್ಪಂದನೆ
Next: ಬಿಹಾರದ ‘ವೋಟ್ ಅಧಿಕಾರ ಯಾತ್ರೆ’ ದೇಶದ ಪಾಲಿನ ಗೇಮ್ ಚೇಂಜರ್: ಡಿಸಿಎಂ

Views:

34

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.