ಬೆಂಗಳೂರು: ಕರ್ನಾಟಕದಾದ್ಯಂತ ಪ್ರಕಟಗೊಳ್ಳುತ್ತಿರುವ ಪ್ರಜಾವಾಹಿನಿ ಕನ್ನಡ ದಿನಪತ್ರಿಕೆ ಈಗಾಗಲೇ ರಾಜ್ಯದ ಜನ ಮನ ಗೆಲ್ಲುವುದರ ಜೊತೆಗೆ ಸರ್ಕಾರವು ಕೂಡ ಮೆಚ್ಚುಗೆಯನ್ನು ವ್ಯಕ್ತಪಡಿಸಿದೆ.
ಹೌದು, ಸಾರ್ವಜನಿಕರ ಕುಂದು ಕೊರತೆಗಳ ಕುರಿತಾಗಿ ಸತತವಾಗಿ ಪ್ರಕಟವಾಗುತ್ತಿರುವ ಪ್ರಜಾವಾಹಿನಿ ಕನ್ನಡ ದಿನಪತ್ರಿಕೆ ಸುದ್ದಿಗೆ ರಾಜ್ಯ ಸರ್ಕಾರ ಮೆಚ್ಚುಗೆಯನ್ನು ವ್ಯಕ್ತಪಡಿಸಿದೆ. ಬಳ್ಳಾರಿ ಜಿಲ್ಲೆ ಸಿರುಗುಪ್ಪ ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆ ಡೆಂಗ್ಯೂ ಉಲ್ಬಣ ಎಂಬ ಸುದ್ದಿಗೆ ಸರಕಾರ ಸ್ಪಂದಿಸಿದೆ.
ಜುಲೈ 25-2025 ರಂದು ಪ್ರಕಟವಾದ “ಶಾಲೆಗೆ ಹೋಗುವುದಕ್ಕೆ ವಿದ್ಯಾರ್ಥಿಗಳಿಗೆ ದಾರಿ ಯಾವುದಯ್ಯ..?” ಎಂಬ ಸುದ್ದಿಗೆ ಹಾಗೂ ಇದೇ ಆಗಸ್ಟ್ 19ರಂದು ಪ್ರಕಟವಾದ “ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆ: ಡೆಂಗ್ಯೂ ಉಲ್ಬಣ” ಎಂಬ ಶೀರ್ಷಿಕೆಯ ಸುದ್ದಿಗೆ ರಾಜ್ಯ ಸರ್ಕಾರ ಸ್ಪಂದಿಸಿದೆ.
ಪ್ರಜಾವಾಹಿನಿ ಕನ್ನಡ ದಿನಪತ್ರಿಕೆಯು ಇದೇ ರೀತಿ ನಮ್ಮ ರಾಜ್ಯದ ಎಲ್ಲಾ ಜನರ ಸಮಸ್ಯೆಗಳನ್ನು ಸರ್ಕಾರದ ಗಮನ ಸೆಳೆಯುವ ಪ್ರಯತ್ನವನ್ನು ಮುಂದಾಗಿರುತ್ತದೆ.
ಪತ್ರಿಕೆಯಲ್ಲಿ ಹಲವು ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಿರುವ ವರದಿಗಾರರು ಹಾಗೂ ಸಿಬ್ಬಂದಿ ವರ್ಗಕ್ಕೆ ಆಡಳಿತ ಮಂಡಳಿ ಶುಭ ಕೋರಿದೆ.


