ಬಾಗಲಕೋಟೆ: ಒಳಮೀಸಲಾತಿ ವರದಿ ಕುರಿತಾಗಿ ಸಿದ್ದರಾಮಯ್ಯ ಸರಕಾರ ತರಾತುರಿಯಲ್ಲಿ ಯಾವುದೇ ನಿರ್ಣಯ ಕೈಗೊಳ್ಳದೆ ಎಲ್ಲರೊಂದಿಗೆ ಚರ್ಚಿಸಿ ನಿರ್ಣಯ ಕೈಗೊಳ್ಳಬೇಕು ಎಂದು ಬೋವಿಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರರು.
ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಒಂದು ವೇಳೆ ತರಾತುರಿ ವರದಿ ಜಾರಿ ಮಾಡಿದರೆ ಮುಂದೆ ಕಾನೂನಾತ್ಮಕವಾಗಿ ಹಾಗೂ ಸಾರ್ವಜನಿಕವಾಗಿ ಹೋರಾಟ ರೂಪಿಸಬೇಕಾಗುತ್ತದೆ. ಹಾಗಾಗಿ ಸಚಿವ ಸಂಪುಟದಲ್ಲಿ ಸುಧೀರ್ಘವಾಗಿ ಚರ್ಚಿಸಿ ಪರಿಶೀಲಿಸಿ ವರದಿ ಅಂಗೀಕಾರ ಮಾಡಬೇಕು ಎಂದರು.
ಯಾವ ಸಮುದಾಯಗಳಿಗೆ ಅನ್ಯಾಯವಾಗದ ಹಾಗೆ ಪರಿಶೀಲನೆ ಮಾಡಬೇಕೆಂದು ಮನವಿ ಮಾಡುತ್ತೇವೆ. ಸುಪ್ರೀಮ್ ಕೋರ್ಟ್ ನಲ್ಲಿ ಒಳಮೀಸಲಾತಿ ಪರವಾಗಿ ಜಡ್ಜ್ ಮೆಂಟ್ ಬಂದಿದೆ. ಈ ಹಿನ್ನೆಲೆ ರಾಜ್ಯ ಸರಕಾರ ನಾಗಮೋಹನದಾಸ್ ಆಯೋಗ ರಚನೆ ಮಾಡಿ. ಎರಡು ತಿಂಗಳ ಕಾಲ ಸಮೀಕ್ಷೆ ಮಾಡೋಕೆ ಪ್ರಯತ್ನ ಪಟ್ಟಿದೆ. ಸರಕಾರ ನಿನ್ನೆ ನಾಗಮೋಹನದಾಸ್ ಅವರ ವರದಿ ಪಡೆದುಕೊಂಡಿದೆ. ನಾಳೆ ಅದನ್ನು ಸಚಿವ ಸಂಪುಟದಲ್ಲಿ ಮಂಡನೆ ಮಾಡಲಿದ್ದಾರೆ. ಅದು ಅಧಿಕೃತವಾದ ವರದಿ ಎಂದು ನಾನು ಹೇಳಲು ಬಯಸೋದಿಲ್ಲ ಎಂದರು. ಇದನ್ನೂ ಓದಿ: ನಮ್ಮ ಸರ್ಕಾರ ಬೆಂಗಳೂರಿಗೆ ಹೊಸ ರೂಪ ನೀಡುತ್ತಿದೆ: ಡಿ.ಕೆ. ಶಿ
ನಾನು ಮಾದ್ಯಮದ ವರದಿ ಮೂಲಕ ಮಾಹಿತಿ ತಿಳಿಯಲಾಗಿದ್ದು, ವರದಿಯಲ್ಲಿ ಕೆಲವೊಂದಿಷ್ಟು ಅಸಮಾಧಾನವಿದೆ. ಒಳಮೀಸಲಾತಿ ಜಾರಿ ತರಾತುರಿಯಲ್ಲಿ ಆಗಬಾರದು. 101 ಜಾತಿಗಳಿಗೆ ಅನ್ಯಾಯ, ಲೋಪ, ದೋಷ ಆಗದ ಹಾಗೆ ವರದಿ ತಯಾರಿಸಬೇಕು.
ಯಾರದ್ದೋ ಮುಲಾಜಿಗೆ ಒಳಗಾಗಿ, ಒತ್ತಡಕ್ಕೆ ಒಳಗಾಗಿ ವರದಿಯನ್ನು ಸ್ವೀಕಾರ ಮಾಡ್ತಾ ಇದಾರಾ ಎಂಬ ಅನುಮಾನ ಜನಮಾನಸಕ್ಕೆ ಬರಬಾರದು ಅನ್ನೋದಾದರೆ ಸರಕಾರ ತಕ್ಷಣ ವರದಿ ಸ್ವೀಕಾರ ಮಾಡಿ ಸಾರ್ವಜನಿಕರಿಗೆ ವಿತರಣೆ ಮಾಡಬೇಕು. 1 ಕೋಟಿ 8 ಲಕ್ಷ ಪರಿಶಿಷ್ಟ ಜಾತಿಗಳ ಹಣೆಬರಹ ಅದೇ ಸಮುದಾಯದ ಜನರೇ ಓದಬೇಕು.
ಗದ್ದಲ ಗಲಾಟೆ ಚಪ್ಪಾಳೆ ಕೈಸನ್ನೆ ಮೂಲಕ ಸದನದಲ್ಲಿ ಅಂಗೀಕಾರ ಮಾಡಬಾರದು. ಆಯಾ ಸಮುದಾಯದ ಜನರ ಅಭಿಪ್ರಾಯ ಸಂಗ್ರಹಿಸಿ ನಂತರ ಅಂಗೀಕಾರ ಮಾಡಬೇಕು. ಸರಕಾರ ಕಾದು ಪ್ರಮಾಣಿಸಿ ಕೇಂದ್ರದ ವರದಿ ಅಂಕಿಯನ್ನು ಗಮನಿಸಿ ನಿರ್ಣಯ ಕೈಗೊಳ್ಳಬೇಕು. 2011 ರ ಜನಗಣತಿ ಈಗಿನ ಜನಗಣತಿ ಬಹಳ ವ್ಯತ್ಯಾಸವಿರುತ್ತದೆ.
ಹಿಂದಿನ ಸರಕಾರ ಬೋವಿ ಬಂಜಾರ ಕೊರಮ, ಕೊರಚ ಸಮುದಾಯಗಳಿಗೆ 4.5% ಮೀಸಲಾತಿ ಸೇರಿಸಿತ್ತು. ಈ ಹಿಂದೆ ಸದಾಶಿವ ವರದಿಯಲ್ಲಿ 3% ರಷ್ಟು ಮೀಸಲಾತಿ ಸೇರಿಸಿತ್ತು. ಒಳಮೀಸಲಾತಿ ವರದಿಯಲ್ಲಿ ವೈಜ್ಞಾನಿಕ ಚರ್ಚೆಯಾಗದೆ. ಬೋವಿ, ಬಂಜಾರ, ಕೊರಮ, ಕೊರಚ ಬಚಾವೊ ಅಂತ ಆಂದೋಲನ ಮಾಡಿತು. ಆಂದೋಲನ ಮೂಲಕ ಪ್ರಸ್ತುತ ಸರಕಾರಕ್ಕೆ ಶಕ್ತಿ ಕೊಡುವ ಕೆಲಸ ಮಾಡಿದವು. ಅದರ ಲಾಭವನ್ನು ಈಗಿನ ಸರಕಾರ ಪಡೆದುಕೊಂಡಿದೆ ಎಂದರು.
