ಬೆಂ,ಆನೇಕಲ್: ಇಂದಿಗೆ ತಾಲೂಕಿನ ಮುತ್ತಾನಲ್ಲೂರು ಪಂಚಾಯಿತಿ ಮುಂದೆ ‘ನಮ್ಮ ಭೂಮಿ ನಮ್ಮ ಹಕ್ಕು’ ಘೋಷ ವಾಕ್ಯದಡಿ ಇಪ್ಪತ್ತು ದಿನದ ಅಹೋರಾತ್ರಿ ಪ್ರತಿಭಟನೆಯನ್ನು ಭೂಸ್ವಾಧೀನ ವಿರೋದಿ ಹೋರಾಟ ಸಮಿತಿ ಹಾಗು ಮುತ್ತಾನಲ್ಲೂರು ಗ್ರಾಮ ಪಂಚಾಯಿತಿ ವತಿಯಿಂದ ತಹಶೀಲ್ದಾರರಿಗೆ ಜಂಟಿ ಮನವಿ ಪತ್ರ ಸಲ್ಲಿಸಿದರು.
ಭೂಸ್ವಾಧೀನ ವಿರೋದಿ ಹೋರಾಟ ಸಮಿತಿಯ ಅದ್ಯಕ್ಷ ಹಂದೇನಹಳ್ಳಿ ರಾಮಚಂದ್ರಾರೆಡ್ಡಿ ಮಾತನಾಡಿ ಸತತ ಇಪ್ಪತ್ತು ದಿನಗಳಿಂದ ಅಹೋ ರಾತ್ರಿ ಪ್ರತಿಭಟನೆ ಪಂಚಾಯಿತಿ ಮುಂದೆ ನಡೆಯುತ್ತಿದೆ. ಆಡಳಿತಾರೂಢ ಸರಕಾರಕ್ಕೆ ಕಣ್ಣು ಕಿವಿ ಕೇಳುತಿಲ್ಲ ಎಂದು ಹೋರಾಟದ ತಾಪವನ್ನು ಮನದಟ್ಟು ಮಾಡುವ ಪ್ರಯತ್ನ ಮಾಡಿದರು.
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿ ಏಕಾಏಕಿ ಹಚ್ಚಹಸುರಿನ ವಾಣಿಜ್ಯ ಬೆಳೆ ಬೆಳೆಯುವ ನೀರಾವರಿ ತೋಟಗಳ ಕುರಿತು ‘ಬಂಜರು ಭೂಮಿ’ ಎಂದು ಸುಳ್ಳು ವರದಿ ಮಾಡಿಸಿ ರೈತ ಜಮೀನುಗಳಿಗರ 6(1) ಹೊರಡಿಸುವ ಮೂಲಕ ಅಂತಿಮ ಮೊಳೆ ಹೊಡೆದಿದೆ. ರೈತರಿಗೆ ಹಾಗು ತಾಲೂಕು ಕಂದಾಯ ಇಲಾಖೆಗೂ ಇದು ತಿಳಿದಿಲ್ಲವಾದರೂ ದಿಢೀರನೇ ರೈತರೊಂದಿಗೆ ಚರ್ಚಿಸದೆ ಇಂತಹ ರೈತ ವಿರೋಧಿ ನಿಲುವನ್ನು ಕೆಐಎಡಿಬಿ ತಳೆದಿದೆ ಇದು ಖಂಡನೀಯ.
18ರಂದು ಬೆಂಗಳೂರಿನ ಫ್ರೀಡಮ್ ಪಾರ್ಕಿನಲ್ಲಿ ಹೋರಾಟ ಮಾಡಿ ಸರ್ಕಾರದ ಗಮನ ಸೆಳೆದಿದ್ದೇವೆ, ಅಷ್ಟಲ್ಲದೆ ಬೈಕ್ ರ್ಯಾಲಿ, ಸರ್ಜಾಪುರದಲ್ಲಿ ಬೃಹತ್ ಸಮಾವೇಶಗಳ ಮೂಲಕ ಸ್ಥಳೀಯ ಆಡಳಿತಕ್ಕೂ ಇನ್ನಿಲ್ಲದ ಮನವಿ ಮಾಡಿದ್ದೇವೆ ಅನಂತರ 20 ದಿನಗಳಿಂದ ಮಳೆಯಲ್ಲಿ ರಾತ್ರಿ ಹಗಲು ರೈತರು ಪ್ರತಿಭಟನೆ ನಡೆಯುತ್ತಿದ್ದರೂ ಕಂಡೂ ಕಾಣದಂತೆ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ ಎಂದರು.
ಮುತ್ತಾನಲ್ಲೂರು ಅಮಾನಿಕೆರೆ, ಸೊಳ್ಳೆಪುರ ಮತ್ತು ಹಂದೇನಹಳ್ಳಿ ಸುತ್ತಲ ಹಳ್ಳಿಗಳ 280 ಎಕರೆಗಳ 863 ರೈತರ ಜಮೀನುಗಳು ಈಗಾಗಲೇ ಕೈಐಎಡಿಬಿ ಸುಪರ್ದಿಯಲ್ಲಿದ್ದು 6(1) ಹೇರಿಕೆ ಮಾಡಿ ಪಹಣಿ ಕಲಂ ನಲ್ಲಿ ನಮೂದಿಸಿ ರೈತರನ್ನು ಅಕ್ಷರಶಃ ಬೀದಿಗಟ್ಟಿದ್ದಾರೆ ಎಂದರು.
ಸರ್ಕಾರದ ಯಾವೊಬ್ಬ ಅಧಿಕಾರಿಯೂ ನಮ್ಮ ಜಮೀನುಗಳಿಗೆ ಕಾಲಿಡಲು ಬಿಡುವುದಿಲ್ಲ ಎಂದು ಗುಡುಗಿದರು.
ಮುತ್ತನಲ್ಲೂರು ಗ್ರಾಮ ಪಂಚಾಯಿತಿಯ ಸದಸ್ಯ ಜಯರಾಮ್ ಸರ್ಜಾ ಮಾತನಾಡಿ ತಾಲೂಕಿನಲ್ಲಿ ಎತ್ತ ನೋಡಿದರೂ ಕೈಗಾರಿಕಾ ಪ್ರದೇಶಗಳೇ ಇವೆ. ನಮ್ಮ ಸುತ್ತಲ ಹಳ್ಳಿಗಳು ತರಕಾರಿ, ಹೂ, ರೇಷ್ಮೆಯಂತಹ ವಾಣಿಜ್ಯ ಬೆಳೆಗಳನ್ನು ಬೆಳೆದು ರಾಜ್ಯಕ್ಕಲ್ಲದೆ ನೆರೆ ರಾಜ್ಯಕ್ಕೂ ಹಣ್ಣು ಹಂಪಲು ಸರಭರಾಜು ಮಾಡುತ್ತಿದ್ದರು ಅದ್ಯಾವ ಎನ್ಜಿಒ ಇಂತಹ ಬೆಳೆಸಹಿತ ನೆಲವನ್ಜು ಬಂಜರು ಎಂದು ನಮೂದಿಸಿದ್ದಾರೆ. ಪ್ರತಿ ವರ್ಷ ಬೆಳೆ ಕಾಲಂ ನಲ್ಲಿ ಬೆಳೆಯ ನಮೂದು ಸರ್ಕಾರಕ್ಕೆ ಕಾಣಿಸಿಲ್ಲವೇ ಎಂದರು.
ಸಮಿತಿಯ ಕಾರ್ಯದರ್ಶಿ ಚೌಡದೇನಹಳ್ಳಿ ಕೇಶವ ರೆಡ್ಡಿ, ರೈತರ ಜೊತೆ ಕೈ ಜೋಡಿಸಿದ ಕನ್ನಡ ಜಾಗೃತಿ ವೇದಿಕೆಯ ಕೆ ಮಂಜುನಾಥದೇವ, ಎಸ್ ಕೆ ಗೌರೀಶ, ಕುಮಾರ್, ಮಾಜಿ ಜಿಪಂಸದಸ್ಯ ಜಯಪ್ರಕಾಶ್, ಜೆಡಿಎಸ್ ಪಟಾಪಟ್ ರವಿ, ರೈತ ಮುಖಂಡ ರಘು, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಆದೂರು ಪ್ರಕಾಶ್, ಹಿರಿಯ ಹೋರಾಟಗಾರ ಸಿ ರಾವಣ, ನೆರಳೂರು ಪಂಚಾಯಿತಿಯ ಗುಡ್ಡಹಟ್ಟಿ ಪಾಪಮ್ಮ, ರಾಮಸ್ವಾಮಿ ಪಟಾಪಟ್ ಸುರೇಶ್ ಪ್ರತಿಭಟನೆಗೆ ಬೆಂಬಲ ಸೂಚಿಸಿ ಮಾತನಾಡಿ ಕೂಡಲೇ ರೈತರ ಜಮೀನು ಸ್ವಾಧೀನ ಕೈಬಿಡಬೇಕೆಂದು ಆಗ್ರಹಿಸಿದರು.
ತಹಶೀಲ್ದಾರ್ ಶಶಿಧರ್ ಮಾಡ್ಯಾಳ್ ಮನವಿ ಸ್ವೀಕರಿಸಿ ಇದು ಕಂದಾಯ ಇಲಾಖೆಗೂ ಮೀರಿ ಸರ್ಕಾರದ ಹಂತದಲ್ಲಿ ಕೆಐಎಡಿಬಿ ನೇರವಾಗಿ 6(1) ಹೊರಡಿಸಿದೆ. ನಾವು ರೈತರ ಪರವಿದ್ದೇವೆ ಪ್ರತಿ ದಿನದ ನಿಮ್ಮಗಳ ಹೋರಾಟದ ವರದಿಯನ್ನು ಆಧ್ಯತೆಯಾಗಿಯೇ ಪರಿಗಣಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ವರದಿ ನೀಡುತ್ತಿದ್ದೇವೆ, ಹೀಗಾಗಿ ನಿಮ್ಮ ಅಹವಾಲುಗಳನ್ನ ಇಂದೇ ಸರ್ಕಾರದ ಹಂತಕ್ಕೆ ರವಾನಿಸುತ್ತೇವೆ ಎಂದರು.
ಹೋರಾಟದ ನಿರೂಪಣೆಯನ್ನು ಶಿವಪ್ಪ ನೆರವೇರಿಸಿದರು.
ರೈತ ಮುಖಂಡರಾದ ಎಸ್ ಮುನಿಯಪ್ಪ, ಡಿಸಿ ಸುರೇಶ್ ರೆಡ್ಟಿ, ಕೆಎಸ್ ಶ್ರೀನಿವಾಸ್ ರೆಡ್ಡಿ, ಎನ್ ಎಸ್ಆರ್ ಸೋಮಶೇಖರ ರೆಡ್ಡಿ, ವಿಶ್ವನಾಥರೆಡ್ಡಿ, ಎಸ್ಆರ್ ಶ್ರೀನಿವಾಸರೆಡ್ಡಿ, ಹರೀಶ್ ರೆಡ್ಡಿ, ಮಾಜಿ ಪಂ ಅಧ್ಯಕ್ಷ ಶ್ರೀನಿವಾಸರೆಡ್ಡಿ, ಮುತ್ತಾನಲ್ಲೂರು ಪಂಚಾಯಿತಿಯ ಅಧ್ಯಕ್ಷೆ ನಾಗರತ್ನ, ಉಪಾಧ್ಯಕ್ಷೆ ಮಂಜುಳಮ್ಮ, ಸದಸ್ಯರಾದ ಮೋಹನ್, ತೇಜಸ್ವಿನಿ, ನಾಗರಾಜಪ್ಪ, ಉಮೇಶ್, ಕೆ ವಿಶ್ವನಾಥರೆಡ್ಡಿ,ವಕೀಲರಾದ ಶ್ರೀನಿವಾಸ್, ಎನ್ಪಿಎನ್ ನಾಗರಾಜ್, ಮಹೇಶ್ ಬಾಬು ಹೋರಾಟಕ್ಕೆ ಭಾಗವಹಿಸಿ ರೈತರನ್ನು ಬೆಂಬಲಿಸಿದರು.
