ಬೆಂ,ಆನೇಕಲ್: ಕಳೆದ 14 ರಂದು ಆನೇಕಲ್ ಪಟ್ಟಣದ ಪೊಲೀಸ್ ವಸತಿ ಪ್ರದೇಶದಿಂದ ಸಂಜೆ ಕಾಫಿಗೆ ಅಂತ ಸಂಜೆ ಹೊರಟ 29 ವರ್ಷದ ದೇವರಾಮ್ ಎಂಬ ಬಡಗಿ ಕೆಲಸದಾತ ಕಾಣೆಯಾಗಿದ್ದಾನೆಂದು ಆತನ ಸಂಬಂದಿ ಜೇತುರಾಮ್ ಆನೇಕಲ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾನೆ.
ಮೂಲತಃ ಹಿಂದಿ ಮತ್ತು ಮಾರವಾಡಿ ಭಾಷೆ ಗೊತ್ತಿರುವ ಕಾಣೆಯಾದ ದೇವರಾಮ್ ಕಾಣೆಯಾದಾಗ ಕಪ್ಪು-ಬಿಳಿ ಚೌಕದ ಅಂಗಿ ಕಂದು ಬಣ್ಣದ ಪ್ಯಾಂಟ್ ಧರಿಸಿದ್ದ ಎತ್ತರ 5.5 ಅಡಿ ಎತ್ತರವಿದ್ದು, ಬಿಳಿ ಬಣ್ಣ ಸಾಧಾರಣ ಮೈಕಟ್ಟು ಹೊಂದಿದ್ದಾನೆ.
ತನ್ನ ಊರು ರಾಜಸ್ಥಾನ್ ಜ್ಯೋತ್ ಪುರ ಆಗಿದ್ದು ಈವರೆಗೆ ಅಲ್ಲಿಗೂ ತಲುಪಿಲ್ಲ, ರೈಲು, ಬಸ್ಸು ಸಾರ್ವಜನಿಕ ಸ್ಥಳಗಳು, ಪ್ರಕಟಣೆಗಳು ಹೊರಡಿಸಿದರೂ ಈವರೆಗೆ ಸಿಕ್ಕಿಲ್ಲ ಎಂದು ಕುಟುಂಬದವರು ಹುಡುಕಾಟ ಮಾಡಿ ಪತ್ತೆ ಮಾಡಿಕೊಡುವಂತೆ ಅಳಲತ್ತುಕೊಂಡಿದ್ದಾರೆ.
ಒಂದು ವೇಳೆ ಸಿಕ್ಕಿ ಹುಡುಕಿಕೊಟ್ಟವರಿಗೆ 20,000 ನಗದು ಘೋಷಿಸಿದ್ದು ಸುಳಿವು ಸಿಕ್ಕಲ್ಲಿ ಆನೇಕಲ್ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪ್ರಕಟಣೆಯಲ್ಲಿ ಕೋರಿದ್ದಾರೆ. ದೂರವಾಣಿ ಸಂಖ್ಯೆ : 80278559235 ಅಥವಾ ಎಸ್ಡಿಪಿಒ : 9480802420 ಗೆ ಕರೆ ಮಾಡುವಂತೆ ಕೋರಿದ್ದಾರೆ.
