ಗುಂಡ್ಲುಪೇಟೆ: ಪಟ್ಟಣದ ಕುರುಬಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 4ನೇ ತರಗತಿಯ ವಿದ್ಯಾರ್ಥಿಯೋರ್ವ ಇಂದು (ಬದುವಾರ ಜುಲೈ 09) ಬೆಳಗ್ಗೆ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ಪಟ್ಟಣದ ಕುರುಬಗೇರಿ ನಿವಾಸಿ ಮನೋಜ್ಕುಮಾರ್(10) ಮೃತ ವಿದ್ಯಾರ್ಥಿ. ಈತ ಶಾಲೆಯಲ್ಲಿ ಪಾಠ ಕೇಳುತ್ತಿದ್ದ ಸಮಯದಲ್ಲಿ ಕುಸಿದು ಬಿದ್ದಿದ್ದಾನೆ ಎನ್ನಲಾಗಿದೆ. ಕೂಡಲೇ ವಿದ್ಯಾರ್ಥಿಯನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಈತನಿಗೆ ಹೃದಯ ಸಂಬಂಧಿ ಕಾಯಿಲೆ ಇದ್ದು ಮೈಸೂರಿನ – ಜಯದೇವ ಹಾಗೂ ಅಪೋಲೋ ಆಸ್ಪತ್ರೆಯಲ್ಲಿ ಹಲವು ವರ್ಷಗಳಿಂದ ಚಿಕಿತ್ಸೆ ಕೊಡಿಸುತ್ತಿದ್ದರು ಎನ್ನಲಾಗಿದೆ.
ಮೂಲತಃ ತಾಲೂಕಿನ ದೊಡ್ಡಹುಂಡಿ ಗ್ರಾಮದ ಲೇ.ನಾಗರಾಜು ಹಾಗೂ ನಾಗರತ್ನ ಎಂಬುವವರ ಪುತ್ರನಾದ ಮನೋಜ್ ಕುಮಾರ್ ದೊಡ್ಡಹುಂಡಿ ಗ್ರಾಮದಲ್ಲಿ ಒಂದು ಮತ್ತು 2ನೇ ತರಗತಿ ವ್ಯಾಸಂಗ ಮಾಡಿ ನಂತರ 3ನೇ ತರಗತಿಗೆ ಪಟ್ಟಣದ ಕುರುಬಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ದಾಖಲಾಗಿ 4ನೇ ತರಗತಿ ವ್ಯಾಸಂಗ ಮಾಡುತ್ತಿದ್ದನು. ಕಳೆದ ವರ್ಷ ಅತನ ತಂದೆ ಮೃತಪಟ್ಟಿದ್ದರು. ಇದನ್ನೂ ಓದಿ: ರಕ್ಷಣಾ ಸಚಿವರ ಜೊತೆ ದಸರಾ ಉತ್ಸವದ ಬಗ್ಗೆ ಚರ್ಚೆ: ಸಿಎಂ
ತಾಯಿಯ ಆಶ್ರಯದಲ್ಲಿ ಇದ್ದ ವಿಧ್ಯಾರ್ಥಿ, ಮೃತನ ತಾಯಿ ಕೂಡ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.
ಕ್ಷೇತ್ರ ಶಿಕ್ಷಣಾಧಿಕಾರಿ ಭೇಟಿ
ಘಟನೆ ಬೆಳಕಿಗೆ ಬರುತ್ತಿದ್ದಂತೆ ಬಿ.ಇ.ಒ . ಟಿ.ಆರ್.ಸ್ವಾಮಿ ಸರ್ಕಾರಿ ಅಸ್ಪತ್ರೆ ಗೆ ಭೇಟಿ ನೀಡಿ ವಿಧ್ಯಾರ್ಥಿ ಪೋಷಕರನ್ನು ಭೇಟಿಯಾಗಿ ಸ್ವಾಂತನಾ ಹೇಳಿ ಶಿಕ್ಷಣ ಇಲಾಖೆಯ ಮೂಲಕ 50 ಸಾವಿರ ಪರಿಹಾರ ಧನವನ್ನು ನೀಡುವುದಾಗಿ ಭರವಸೆ ನೀಡಿದರು.
