ಬೆಂಗಳೂರು: ನಾನು ಯಾವ ಪಕ್ಷದವನು ಅಲ್ಲ, ನಾನು ಜನರ ಪರವಾಗಿ ಹೋರಾಟ ಮಾಡುತ್ತೇನೆ ಹೊರತಾಗಿ ಪಕ್ಷದ ಪರವಾಗಿಲ್ಲಾ. ರೈತರಿಗೆ ಕಷ್ಟ ಎಂದರೆ ನಾವೆಲ್ಲ ಧ್ವನಿ ಎತ್ತಲೇ ಬೇಕಾಗುತ್ತದೆ. ಸಮಸ್ಯೆ ಬಂದಿರುವುದು ನಮ್ಮ ರೈತರಿಗೆ ಹಾಗಾಗಿ ನಮ್ಮ ರೈತರಿಗೆ ಸಮಸ್ಯೆ ಬಂದರೆ ನಮಗೆ ಸಮಸ್ಯೆ ಬಂದಂತೆ. ನಾವು ನಮ್ಮ ಸಮಸ್ಯೆಯನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ ಹೊರತಾಗಿ ಬೇರೆಯವರ ಮೇಲೆ ಡಿಪೆಂಡ್ ಆಗುವುದಿಲ್ಲ ಎಂದು ಪ್ರಕಾಶ್ ರೈ ಹೇಳಿದ್ದಾರೆ
ಹೌದು, ಕೆಐಎಡಿಬಿ ಭೂಸ್ವಾಧೀನದ ವಿರುದ್ಧ ದೇವನಹಳ್ಳಿ ರೈತರ ಪರವಾಗಿ ಹೋರಾಟದ ಮುಂಚೂಣಿಯಲ್ಲಿ ನಿಂತಿರುವ ನಟ ಪ್ರಕಾಶ್ ರಾಜ್, ಸಚಿವ ಎಂಬಿ ಪಾಟೀಲ್ ಅವರ ಟೀಕೆಗೆ ತಿರುಗೇಟು ನೀಡಿದ್ದಾರೆ. ಭಾನುವಾರ ಬಿಡುಗಡೆ ಮಾಡಿದ ವಿಡಿಯೋ ಸಂದೇಶದ ಮೂಲಕ ಸಚಿವರ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ನಮಸ್ಕಾರ ಪಾಟೀಲ್ ರೇ, ಇದು ದೇವನಹಳ್ಳಿ ರೈತರ ಸಮಸ್ಯೆ. ಎಲ್ಲೆಲ್ಲೋ ಹೋಗಿ ಹೋರಾಟ ಮಾಡಲಿಕ್ಕೆ ಸಾಧ್ಯವಿಲ್ಲ, ಇಲ್ಲಿ ನಡೆತಿರುವ ಅನ್ಯಾಯವನ್ನ ಇಲ್ಲಿ ನಾವೇ ಪ್ರಶ್ನಿಸಬೇಕು, ಎಂದು ತಮ್ಮ ವಾದವನ್ನು ನೇರವಾಗಿ ಮಂಡಿಸಿದ ಪ್ರಕಾಶ್ ರಾಜ್. ಇದನ್ನೂ ಓದಿ: ಕೆಎಸ್ಆರ್ ಟಿಸಿಯಲ್ಲಿ ಅನುಕಂಪದ ನೇಮಕಾತಿ ಆದೇಶ ವಿತರಣೆ
ಸಚಿವ ಎಂಬಿ ಪಾಟೀಲ್ ಅವರು ಈ ಹಿಂದೆ ಈ ನಟ ತಮಿಳುನಾಡು, ಆಂಧ್ರ, ಗುಜರಾತ್ಗೆ ಹೋಗಿ ಹೋರಾಟ ಮಾಡಲಿ” ಎಂದು ನೀಡಿದ್ದ ಪ್ರತಿಕ್ರಿಯೆ ಬಗ್ಗೆ ಕಿಡಿಕಾರಿದ ಪ್ರಕಾಶ್ ರಾಜ್, “ನಾನು ದೆಹಲಿಯಲ್ಲಿ ತಮಿಳುನಾಡಿನ ರೈತರ ಪರ ಧರಣಿ ಕುಳಿತು ಹೋರಾಟ ಮಾಡಿದ್ದೆ. ಪಂಜಾಬ್ ರೈತರ ಬೆಂಬಲಕ್ಕೂ ನಿಂತಿದ್ದೆ. ನಾವು ಎಲ್ಲ ರಾಜ್ಯಗಳ ಸಮಸ್ಯೆಗಳಲ್ಲೂ ಧ್ವನಿ ಎತ್ತಿದ್ದೇವೆ. ಪ್ರಧಾನಮಂತ್ರಿ ವಿರುದ್ಧವೂ ಧೈರ್ಯವಾಗಿ ಪ್ರಶ್ನೆ ಮಾಡಿದ್ದೇನೆ. ನಾನು ಯಾವ ಪಕ್ಷದವನಲ್ಲ, ಜನರ ಪಕ್ಷದವನು,” ಎಂದು ಜವಾಬು ನೀಡಿದರು.
