ಬೆಂಗಳೂರು: ಸುಮಾರು 10 ವರ್ಷಗಳಿಗೂ ಮೇಲ್ಪಟ್ಟು ಅನುಕಂಪದ ಆಧಾರದ ಮೇಲೆ ನೇಮಕಾತಿ ಕೋರಿ ಅರ್ಜಿ ಸಲ್ಲಿಸಿದ್ದ 14 ಮೃತಾವಲಂಬಿತರುಗಳಿಗೆ ಇಂದು (ಮಂಗಳವಾರ ಜುಲೈ 08) ರಂದು ಕಚೇರಿ ಸಹಾಯಕ ಹುದ್ದೆಗೆ ನೇಮಕಾತಿ ಆದೇಶ ಮಾನ್ಯ ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿಯವರು ನೀಡಿದರು.
ಕಳೆದ 1 ವರ್ಷದಲ್ಲಿ ಒಟ್ಟಾರೆ 212 ಮೃತಾವಲಂಬಿತರುಗಳಿಗೆ ಅನುಕಂಪದ ಆಧಾರದ ನೇಮಕಾತಿ ಮಾಡಲಾಗಿದೆ.
ಕರಾಸಾ ಪೇದೆ 107, ಕಚೇರಿ ಸಹಾಯಕ (ಸ್ವಚ್ಚತೆ) 46, ತಾಂತ್ರಿಕ ಸಹಾಯಕ 37, ಚಾಲಕ ಕಂ ನಿರ್ವಾಹಕ/ಚಾಲಕ ಕಂ ನಿರ್ವಾಹಕ 22 ಒಟ್ಟು 212, ಈ ದಿನ ನೀಡಿರುವ ಆದೇಶ ಸೇರಿ 226 ಅನುಕಂಪದ ನೌಕರಿ ಕರಾಸಾ ಪೇದೆ (Security Guard) ಹುದ್ದೆಗಳಿಗೆ 50 ಮೃತಾವಲಂಬಿತರುಗಳಿಗೆ ಮುಂದಿನ ಒಂದು ವಾರದಲ್ಲಿ ದೇಹ ದಾರ್ಢ್ಯತೆ ಹಾಗೂ ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಸುವ ಮೂಲಕ ಅನುಕಂಪದ ನೇಮಕಾತಿ ನೀಡುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದರು. ಇದನ್ನೂ ಓದಿ: ಶಿರವಾಳ ಗ್ರಾಮದಲ್ಲಿ 2 ಗುಂಪುಗಳ ನಡುವೆ ಬಡಿದಾಟ
ಇಂದು ಮಾನ್ಯ ಮುಜರಾಯಿ ಮತ್ತು ಸಾರಿಗೆ ಸಚಿವರು 14 ಮೃತಾವಲಂಬಿತರುಗಳಿಗೆ ಕಚೇರಿ ಸಹಾಯಕ (ಸ್ವಚ್ಚತೆ) ಹುದ್ದೆಗೆ ನೇಮಕಾತಿ ಆದೇಶ ವಿತರಣೆ ಮಾಡಿರುತ್ತಾರೆ.
ಈ ಸಂಧರ್ಭದಲ್ಲಿ ಮಾನ್ಯ ಉಪಾಧ್ಯಕ್ಷರಾದ ಶ್ರೀ ಮೊಹಮ್ಮದ್ ರಿಜ್ವಾನ್ ನವಾಬ್, ವ್ಯವಸ್ಥಾಪಕ ನಿರ್ದೇಶಕರು, ಶ್ರೀ ಅಕ್ರಂ ಪಾಷ, ಭಾಆಸೇ., ನಿರ್ದೇಶಕರು (ಸಿ:ಜಾ), ಡಾ. ನಂದಿನಿದೇವಿ ಕೆ., ಭಾಆಸೇ., ಹಾಗೂ ನಿರ್ದೇಶಕರು (ಮಾಹಿತಿ ತಂತ್ರಜ್ಞಾನ), ಶ್ರೀ ಇಬ್ರಾಹಿಂ ಮೈಗೂರ್., ಭಾಆಸೇ., ರವರು ಉಪಸ್ಥಿತರಿದ್ದರು.
