ಶಹಾಪುರ: ತಾಲ್ಲೂಕಿನ ಶಿರವಾಳ ಗ್ರಾಮದಲ್ಲಿ ಸೋಮವಾರ ಎರಡು ಗುಂಪುಗಳ ನಡುವೆ ಬಡಿದಾಟವಾಗಿದೆ. ಅದರಲ್ಲಿ ನಾಲ್ವರು ಯುವಕರು ಗಾಯಗೊಂಡಿದ್ದಾರೆ.
ಭಾನುವಾರ ಮೊಹರಂ ಹಬ್ಬದಲ್ಲಿ ಪೀರಾ ನಮ್ಮ ಬಡಾವಣೆಯಲ್ಲಿ ಕೂಡಿಸಿರುವಾಗ ಅನ್ಯ ಜಾತಿ ಅವರು ಆಗಮಿಸಬಾರದು ಎಂಬ ವಿಷಯ ಮುಂದಿಟ್ಟುಕೊಂಡು ಗ್ರಾಮದ ವಾಲ್ಮೀಕಿ ಹಾಗೂ ಕಬ್ಬಲಿಗ ಸಮುದಾಯದ ನಡುವೆ ಜಗಳವಾಗಿ ಕಲ್ಲು ತೂರಾಟವಾಗಿತ್ತು. ಆಗ ಎರಡು ಗುಂಪಿನ ನಡುವೆ ಭೀಮರಾಯನಗುಡಿ ಠಾಣೆಯ ಪೊಲೀಸರು ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ಆರೋಪದ ಮೇಲೆ ದೂರು ದಾಖಲಿದ್ದರು.
ಅದೇ ದ್ವೇಷದ ಮುಂದುವರೆದ ಭಾಗವಾಗಿ ಸೋಮವಾರ ವಾಲ್ಮೀಕಿ ಹಾಗೂ ಕಬ್ಬಲಿಗ ಸಮುದಾಯದ ನಡುವೆ ಜಗಳವಾಗಿದ್ದು ಅದರಲ್ಲಿ ವಾಲ್ಮೀಕಿ ಸಮುದಾಯದ ನಾಲ್ವವರು ಗಾಯಗೊಂಡಿದ್ದು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ಗ್ರಾಮದ ಪ್ರತ್ಯೇಕ್ಷದರ್ಶಿಯೊಬ್ಬರು ಮಾಹಿತಿ ನೀಡಿದರು.
ನಂತರ ಎರಡು ಸಮದಾಯದ ಮುಖಂಡರು ಸಭೆ ನಡೆಯಿಸಿ ಮೊಹರಂ ಹಬ್ಬದ ಬಣ್ಣಲೇಪಿಸುವುದು ಬೇಡ. ವೈಯಕ್ತಿಕ ಕಾರಣಕ್ಕೆ ಯುವಕರು ಗಲಾಟೆ ಮಾಡಿಕೊಂಡಿದ್ದಾರೆ ಎಂದು ದೂರು ಹಾಗೂ ಪ್ರತಿದೂರು ದಾಖಲಿಸಿಕೊಂಡು ಸಮಸ್ಯೆಗೆ ಇತ್ಯಾರ್ಥಕ್ಕೆ ಪೊಲೀಸರು ಯತ್ನಿಸಿದ್ದಾರೆ. ಆದರೆ ಗ್ರಾಮದಲ್ಲಿ ಎರಡು ಗುಂಪಿನ ನಡುವೆ ಬೂದಿ ಮುಚ್ಚಿದ ಕೆಂಡದಂತೆ ಇದೆ. ಮುನ್ನೆಚ್ಚರಿಕೆ ಕ್ರಮವಾಗಿ ಒಂದು ಪೊಲೀಸ್ ವ್ಯಾನ್ ನಿಯೋಜಿಸಿದೆ. ಗ್ರಾಮಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಭೀಮರಾಯನಗುಡಿಯಲ್ಲಿ ದೂರು ದಾಖಲಾಗಿದೆ.
ಮೊಹರಂ ಹಬ್ಬದಲ್ಲಿ ಯಾವುದೇ ಗಲಾಟೆಯಾಗಿಲ್ಲ. ಯುವಕರು ತಮ್ಮ ವೈಯಕ್ತಿಕ ಕಾರಣದಿಂದ ಬಡಿದಾಡಿಕೊಂಡಿದ್ದರಿಂದ ದೂರು ಪ್ರತಿ ದೂರು ದಾಖಲಿಸಿಕೊಂಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತು ನಿಯೋಜಿಸಿದೆ ಎಂದು ಮಹಾತೇಂಶ ಪಾಟೀಲ ಪಿ.ಎಸ್.ಐ ಭೀಮರಾಯನಗು ಡಿ ಹೇಳಿದ್ದಾರೆ.
