Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಅರಣ್ಯವನ್ನು ರಕ್ಷಿಸಲು ಸರ್ಕಾರದೊಂದಿಗೆ ಕೈಜೋಡಿಸಬೇಕು: ಮಲ್ಲಿಕಾರ್ಜುನ ಖರ್ಗೆ
  • Politics
  • State

ಅರಣ್ಯವನ್ನು ರಕ್ಷಿಸಲು ಸರ್ಕಾರದೊಂದಿಗೆ ಕೈಜೋಡಿಸಬೇಕು: ಮಲ್ಲಿಕಾರ್ಜುನ ಖರ್ಗೆ

admin July 5, 2025 1 minute read
Spread the love

ಕಲಬುರ್ಗಿ: ದೇಶದಲ್ಲಿ ಅರಣ್ಯ ಪ್ರದೇಶ ಹೆಚ್ಚಾಗಬೇಕು. ರಸ್ತೆ ಬದಿಯಲ್ಲಿ ಸಸಿ‌ನೆಡುವುದಷ್ಟೇ ಅಲ್ಲದೇ ಅವುಗಳ ರಕ್ಷಣೆ ಮಾಡಬೇಕು. ಸಾರ್ವಜನಿಕರು ಕೂಡಾ ಸರ್ಕಾರದೊಂದಿಗೆ ಕೈ ಜೋಡಿಸಬೇಕು ಎಂದು ರಾಜ್ಯ ಸಭಾ ವಿರೋಧಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಒತ್ತಿ ಹೇಳಿದರು.

ಕಲಬುರ್ಗಿಯ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ನಡೆದ ಮನಮಹೋತ್ಸವ 2025 ಹಸಿರುಪಥ ಮತ್ತು ಕಲಬುರಗಿಯ ಹಸಿರು ಹೆಜ್ಜೆ ಕಾರ್ಯಕ್ರಮದಲ್ಲಿ ಸಸಿಗೆ ನೀರು ಎರೆಯುವ ಮೂಲಕ‌ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ತಾವು ಉಸ್ತುವಾರಿ ಸಚಿವರಾಗಿದ್ದಾಗ ಅರಣ್ಯ ಪ್ರದೇಶ ವಿಸ್ತರಣೆಗೆ ಪ್ರಯತ್ನಪಟ್ಟಿರುವುದನ್ನು‌ ನೆನಪಿಸಿಕೊಂಡ ಖರ್ಗೆ ಅವರು ಜನರು ಆಗೆಲ್ಲ ರಸ್ತೆ ಬದಿಯ ಗಿಡಗಳನ್ನು ಕಡಿದುಕೊಂಡು ಹೋಗಿ ಕೃಷಿ ಪರಿಕರಗಳನ್ನು ಮಾಡಿಕೊಳ್ಳುತ್ತಿದ್ದರು. ಒಣಗಿದ ಅಥವಾ ಕೆಲಸಕ್ಕೆ ಅನುಕೂಲವಾಗದಂತ ಮರ ಕಡಿದರೆ ಅದರಿಂದ ಸಮಸ್ಯೆ ಯಾಗುವುದಿಲ್ಲ. ಆದರೆ ಬೆಳೆದು ನಿಂತ ಮರ ಕಡಿದರೆ ಅಪಾಯವಾಗುತ್ತದೆ ಎಂದು ಹೇಳಿದರು.

ಇತ್ತೀಚಿಗೆ ಹೃದಯಾಘಾತದಿಂದ ಜನರನ್ನು ಅದರಲ್ಲೂ ಯುವಕರು ಸಾವನ್ನಪ್ಪುತ್ತಿದ್ದಾರೆ, ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಹೆಚ್ಚು ಜನರು ಮೃತರಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ ಖರ್ಗೆ ಅವರು ಜನರು ಜೀವನ ನಡೆಸಲು ಸ್ವಚ್ಛ ಗಾಳಿ, ಬೆಳಕು,‌ನೀರು ಬೇಕೆ ಬೇಕು. ಇವೆಲ್ಲ ದೊರಕಬೇಕೆಂದರೆ ಪರಿಸರ ಉತ್ತಮವಾಗಿರಬೇಕು. ಈ ಕುರಿತು ಎಲ್ಲರೂ ಕ್ರಮ ವಹಿಸಬೇಕು ಎಂದು ಅಭಿಪ್ರಾಯಪಟ್ಟರು.

ದೇಶದಲ್ಲಿ 25.15% ಮಾತ್ರ ಅರಣ್ಯ ಅಸ್ಥಿತ್ವದಲ್ಲಿದೆ. ರಾಜ್ಯದಲ್ಲಿ ಕೇವಲ 21% ಮಾತ್ರ ಇದೆ. ದೇಶದ ಇತರೆ ಭಾಗಕ್ಕೆ ಹೋಲಿಸಿದರೆ 11% ಕಡಿಮೆ ಇದೆ. ಕನಿಷ್ಠ 33% ಅರಣ್ಯ ಪ್ರದೇಶ ಇರಲೇಬೇಕು. ಆಗ ಮಾತ್ರ ಜನರಿಗೆ ಆಮ್ಲಜನಿಕ ಸರಬರಾಜು ಆಗುತ್ತದೆ. ನೀರು ಸಿಗುತ್ತದೆ. ಅರಣ್ಯ ಹೆಚ್ಚಾಗಲು ಶಾಲೆ,‌ಕಾಲೇಜು, ರಸ್ತಡ ಬದಿ ಅಲ್ಲದೇ ಜಮೀನುಗಳಲ್ಲೂ ಕೂಡಾ ಸಸಿ ನೆಡಬೇಕು ಎಂದು ಖರ್ಗೆ ಸಲಹೆ ನೀಡಿದರು. ಇದನ್ನೂ ಓದಿ: ಕೇಂದ್ರ ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಜಾರಿ ಮಾಡಬೇಕು: ಹೆಚ್ ಡಿಕೆ

ಅರಣ್ಯ ಅಭಿವೃದ್ದಿಗೆ 20 ಅಂಶದ ಕಾರ್ಯಕ್ರಮದಲ್ಲಿ ಒತ್ತು ನೀಡಲಾಗಿತ್ತು. ಆದರೆ ಅದನ್ನು ಕೆಲವರು ಲೇವಡಿ ಮಾಡಿದ್ದರು. ಪ್ರಸ್ತುತ 20 ಲಕ್ಷ ಹೆಕ್ಟೇರ್ ಪ್ರದೇಶದ ಅರಣ್ಯ ನಾಶವಾಗಿದೆ. ಕರಾವಳಿ ಭಾಗದಲ್ಲಿಯೂ ಕೂಡಾ ಅರಣ್ಯ ನಾಶವಾಗುತ್ತಿದೆ. ಹೊರಭಾಗದಲ್ಲಿ ಮಾತ್ರ ಗಿಡ ಮರಗಳಿವೆ. ಆದರೆ, ಒಳಗೆ ಹೋದರೆ ಗಿಡಗಳನ್ನು ಕಡಿದು ಜಮೀನು ಮಾಡಿಕೊಂಡಿರುತ್ತಾರೆ. ಇದು ಸರಿಯಾದ ಕ್ರಮವಲ್ಲ. ನಿಸರ್ಗ ಕಾಪಾಡುವ ಜವಾಬ್ದಾರಿ ಎಲ್ಲರ ಮೇಲಿದೆ.ಈ ಬಗ್ಗೆ ಎಲ್ಲರೂ ಎಚ್ಚೆತ್ತುಕೊಳ್ಳಬೇಕು ಕಿವಿ ಮಾತು ಹೇಳಿದರು.

ಮಾಜಿ ಪ್ರದಾನಿ ಇಂದಿರಾಗಾಂಧಿ ಅವರು ಕಾನೂನು ಸಂರಕ್ಷಗಾಗಿ forest conservative act ಜಾರಿಗೆ ತಂದರು. ರಾಜ್ಯದಲ್ಲಿ ಬರಗಾಲ ಬಂದಾಗ ಇಲ್ಲಿಗೆ ಬಂದಿದ್ದ ಅವರು ಅರಣ್ಯ ಬೆಳೆಸುವ ಬಗ್ಗೆ ಸಲಹೆ ನೀಡಿದ್ದರು. ಮತ್ತೊಬ್ಬ ಮಾಜಿ ಪ್ರಧಾನಿ ಮನಮೋಹನ‌ಸಿಂಗ್ ಅವರ ಕಾಲದಲ್ಲಿ forest right act ಜಾರಿಗೆ ತಂದು ಅರಣ್ಯದಲ್ಲಿ ವಾಸಮಾಡುವ ಜನರು ಕಾಡಿನ‌ ಸಂರಕ್ಷಣೆ ಹಾಗೂ ಮರಗಳಿಂದ ಬರುವ ಉತ್ಪನ್ನಗಳನ್ನು ಜೀವ ನಿರ್ವಹಣೆಗಾಗಿ ಬಳಸಲು ಅನುವು ಮಾಡಿಕೊಟ್ಟಿದ್ದರು. ಆದರೆ, ಅರಣ್ಯಕ್ಕೆ ಸಂಬಂಧಿಸಿದಂತೆ ಜಾರಿಗೆ ಬಂದ ಕಾನೂನುಗಳನ್ನು ದೇಶದ ಯಾವ ರಾಜ್ಯಗಳು ಪಾಲನೆ ಮಾಡುತ್ತಿಲ್ಲ.

ಇತ್ತೀಚಿಗೆ ಮೋದಿ ಸರ್ಕಾರ forest conservative amendment act ಜಾರಿಗೆ ತಂದಿದೆ. ಆದರೆ ಈ ಕಾನೂನು ಕೂಡಾ ಪಾಲನೆಯಾಗುತ್ತಿಲ್ಲ. ಪರಿಸ್ಥತಿ ಹೀಗೆ ಮುಂದುವರೆದರೆ, ಪರಿಸರ ಹಾಳಾದರೆ ಜನರು ಸ್ವಚ್ಛ ಗಾಳಿ, ಬೆಳಕು, ಆಹಾರ ಸಿಗದೆ ಅಪಾಯವಾಗಲಿದೆ.

ರಾಜ್ಯದ ನದಿ ನೀರನ್ನು ಬಳಸಿಕೊಂಡು ಎಲ್ಲ ಡ್ಯಾಂ ಗಳ ಹಿನ್ನೀರಿನ ಬಳಿ ಅರಣ್ಯ ಬೆಳೆಸಲು ಸರ್ಕಾರ ಅಗತ್ಯ ಕ್ರಮ ವಹಿಸಬೇಕು ಎಂದು ಸಲಹೆ ನೀಡಿದ ಖರ್ಗೆ ಅವರು ಸಾರ್ವಜನಿಕರ ತಮ್ಮ ತಮ್ಮ ಮನೆಗಳಲ್ಲಿ ಸಸಿ ನೆಡುವ ಮೂಲಕ ಅರಣ್ಯ ಪ್ರದೇಶ ಬೆಳೆಸಲು ಸರ್ಕಾರದ ಜೊತೆಗೆ ಇರಬೇಕು ಎಂದು ಮನವಿ ಮಾಡಿದರು.

 

About the Author

admin

Administrator

Visit Website View All Posts

Spread the love

Post navigation

Previous: ಕೇಂದ್ರ ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಜಾರಿ ಮಾಡಬೇಕು: ಹೆಚ್ ಡಿಕೆ
Next: ಬಿಎಂಆರ್‌ಸಿಎಲ್ ಅನೇಕ ಗಡುವುಗಳನ್ನು ಮೀರಿದೆ: ತೇಜಸ್ವಿ ಸೂರ್ಯ

Views:

12

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.