ಬೆಂಗಳೂರು: ಪ್ರಪಂಚದಲ್ಲಿ ಯಾವುದೇ ಒಂದು ಹೆಣ್ಣು ತಾಯಿಯಾಗಬೇಕಾದರೆ ಅವಳಿಗೆ ಮದುವೆ ಆಗಿರಬೇಕು ಜೊತೆಯಲ್ಲಿ ಗಂಡನಿರಬೇಕು ಆಗ ಮಾತ್ರ ಹೆಣ್ಣಿಗೆ ಮಕ್ಕಳನ್ನು ಹೇರುವ ಭಾಗ್ಯವಿರುತ್ತದೆ ಎಂಬುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಾಂಪ್ರದಾಯವಾಗಿದೆ.
ಆದರೆ ಮದುವೆ ಆಗದೇನೇ ಹೆಣ್ಣು ತಾಯಿಯಾಗಬಹುದು ಎಂಬುದಕ್ಕೆ ಇದೀಗ ಕನ್ನಡ ಚಿತ್ರರಂಗದ ನಟಿ ಭಾವನಾ ರಾಮಣ್ಣ ಅವರು ಹೇಳಿದ್ದಾರೆ.
ಹೌದು ನಟಿ ಭಾವನಾ ರಾಮಣ್ಣ ಅವರು ಮದುವೆಯಾಗದೆ ತಮ್ಮ 40 ನ ವಯಸ್ಸಿನಲ್ಲಿ ತಾಯಿ ಆಗುತ್ತಿದ್ದಾರೆ. ಅಂದರೆ ಐವಿಎಫ್ ಮೂಲಕ ಗರ್ಭ ಧರಿಸಿರುವ ಅವರು ದಿಟ್ಟ ನಿರ್ಧಾರವನ್ನು ತೆಗೆದು ಸಮಾಜಕ್ಕೆ ಒಬ್ಬ ದಿಟ್ಟ ಮಹಿಳೆ ಯಾಗಬೇಕು ಎಂಬುದು ನನ್ನ ನಂಬಿಕೆ ಎಂದಿದ್ದಾರೆ.
ಇನ್ನು ತಾವು ತಾಯಿಯಾಗುತ್ತಿರುವ ಮಾಹಿತಿಯನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಅವರು, ನಾನು ತಾಯಿ ಆಗುತ್ತಿದ್ದೇನೆ ನನ್ನ ಹೊಟ್ಟೆಯಲ್ಲಿ ಎರಡು ಮಕ್ಕಳಿದ್ದಾವೆ ಎಂದು ತಿಳಿದುಬಂದಿದೆ. ಮದುವೆಯಾಗದೆ ನಾನು ಐವಿಎಫ್ ಮೂಲಕ ಗರ್ಭದರಿಸಿ ನನ್ನ ತಾಯಿತನವನ್ನು ಅನುಭವಿಸಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ.
ಅಲ್ಲದೆ ಸಮಾಜದಲ್ಲಿ ಯಾವ ಗಂಡಿನ ಆಸರೆ ಇಲ್ಲದೆ ಮಕ್ಕಳನ್ನು ಹೇಗೆ ಸಾಗುತ್ತಾರೆ ಎಂಬುದಕ್ಕೆ ನಾನು ಒಂದು ದೊಡ್ಡ ಉದಾಹರಣೆಯಾಗಿ ನನ್ನ ಮಕ್ಕಳನ್ನು ನಾನು ಚೆನ್ನಾಗಿ ಬೆಳೆಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಗೌರಮ್ಮನ ಲುಕ್ಕಿನಲ್ಲಿ ಸಪ್ತಮಿ ಗೌಡ!
ಭಾವನಾ ಅವರು ಐವಿಎಫ್ ಮೂಲಕ ತಾಯಿ ಆಗುತ್ತಿರುವುದನ್ನು ಕೆಲ ಸಂಪ್ರದಾಯವಾದಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ದಿಟ್ಟ ಮಹಿಳೆ ಭಾವನಾ ಅದಕ್ಕೆಲ್ಲ ತಲೆ ಕೆಡಿಸಿಕೊಂಡಿಲ್ಲ. ತಾಯಿ ಆಗಲಿರುವ ಭಾವನಾ ತಮ್ಮ ಈ ದಿಟ್ಟ ನಿರ್ಧಾರಕ್ಕೆ ಏನು ಕಾರಣ ಎಂಬುದನ್ನು ವಿವರಿಸಿದ್ದಾರೆ.
