ಬೆಂಗಳೂರು: ಇತ್ತೀಚಿಗಷ್ಟೇ ನಟಿ ಸಪ್ತಮಿ ಗೌಡ ಅವರು ಬೋಲ್ಡ್ ಫೋಟೋ ಶೂಟ್ ಮಾಡಿಸಿ ತಮ್ಮ instagram ಖಾತೆಗೆ ಹಾಕಿದ್ದರು. ಆದರೆ ಸಪ್ತಮಿ ಗೌಡ ಅವರ ಗ್ಲಾಮರಸ್ ಅಂಡ್ ಸಕ್ಕತ್ ಬೋಲ್ಡ್ ಫೋಟೋಗಳಿಗೆ ಬ್ಯಾಡ್ ಕಮೆಂಟ್ಸ್ ಗಳು ಬಂದಿದ್ದವು.
ಸಪ್ತಮಿ ಗೌಡ ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವುದು ಸಿಂಪಲ್ ಹುಡುಗಿಯಂತೆ ಆದರೆ ಇದ್ದಕ್ಕಿದ್ದಂಗೆ ಬೋಲ್ಡ್ ಫೋಟೋ ಶೂಟ್ ಮಾಡಿಸಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಕ್ಕೆ ಅಭಿಮಾನಿಗಳು, ಬ್ಯಾಡ್ ಕಮೆಂಟ್ಸ್ ಗಳನ್ನು ಹಾಕಿದ್ದರು.
ಇನ್ನು ಇದನ್ನರಿತ ನಟಿ ಸಪ್ತಮಿ ಗೌಡ ಮತ್ತೆ ಇದೀಗ ಸಾದಾಸೀದ ಹುಡುಗಿಯಂತೆ ಸಿಂಪಲ್ ಲುಕ್ಕಿನಲ್ಲಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಇದನ್ನೂ ಓದಿ: ನ್ಯಾಷನಲ್ ಕ್ರಶ್ ನ ಮತ್ತೊಂದು ಎಡವಟ್ಟು..!
ವೈಟ್ ಕಲರ್ ಸಲ್ವಾರ್ ಡ್ರೆಸ್ ಧರಿಸಿ ತಲೆಗೆ ಹೂ ಮುಡಿದು ಗೌರಮ್ಮನಂತೆ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಕಳೆದ ಬಾರಿ ಬ್ಯಾಡ್ ಕಮೆಂಟ್ಸ್ ಪಡೆದಿದ್ದ ಸಪ್ತಮಿ ಗೌಡ ಈ ಬಾರಿ ಗುಡ್ ಕಾಮೆಂಟ್ಸ್ ಗಳನ್ನು ಪಡೆಯುತ್ತಿದ್ದಾರೆ.

