ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷದ ಶಾಸಕರೇ ತಿರುಗಿ ಬೀಳುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಈಗಾಗಲೇ ಬಿ ಆರ್ ಪಾಟೀಲ್ ಅವರು ಸ್ವಪಕ್ಷದ ವಿರುದ್ಧವೇ ಬೇಸರ ಬೆಟ್ಟ ಪಡಿಸುತ್ತಿರುವ ಬೆನ್ನಲ್ಲೇ ಇದೀಗ ರಾಜು ಕಾಗೆಯವರು ಪಕ್ಷದ ವಿರುದ್ಧವೇ ಕಿಡಿ ಕಾರುತ್ತಿದ್ದಾರೆ.
ಇನ್ನು ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿರುವ ವಿರೋಧ ಪಕ್ಷದ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಕೆಂಡಮಂಡಲವಾಗಿದ್ದಾರೆ.
ಈ ಕುರಿತು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಪ್ರತಿಕ್ರಿಯಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಬಿ ಆರ್ ಪಾಟೀಲ್ ಅವರ ಬಾಯಿ ಮುಚ್ಚಿಸುವ ಆತಂಕ ನಮಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಿಜೆಪಿ ಪಕ್ಷದ ಇಬ್ಬರು ಮಹಾನ್ ಚೇತನಗಳ ಗೌರವ ಸ್ಮರಣೆ
ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಶಾಸಕರೇ ಅವರ ಪಕ್ಷದ ವಿರುದ್ಧವೇ ತಿರುಗು ಬೀಳುತ್ತಿದ್ದಾರೆ. ಸ್ವಪಕ್ಷದ ಶಾಸಕರೇ ಒಬ್ಬೊಬ್ಬರಾಗಿ ಬಾಯಿಬಿಡುತ್ತಾರೆ ಮುಂದೆ ಕಾದು ನೋಡಿ ನಿಮ್ಮ ಸರ್ಕಾರ ಏನಾಗುತ್ತದೆ ಎಂದು ಕಿರಿಕರಿದ್ದಾರೆ.
ಸದ್ಯದಲ್ಲೇ ನಿಮ್ಮ ಸರ್ಕಾರ ಯಾವ ರೀತಿ ವಿಭಜನೆಯಾಗುತ್ತದೆ ಎಂದು ನೀವೇ ಕಾದು ನೋಡಿ ಎಂದು ಸವಾಲು ಹಾಕಿದ್ದಾರೆ.
